Active News 24×7

16/01/2025

ನಿಧಿ ಸಿಕ್ಕಿದೆ. 4 Kg ಚಿನ್ನ. ನೀವೆ ಡೀಲ್ ಮಾಡಿ. ಯಾರಿಗೂ ಹೇಳಬೇಡಿ.

14/01/2025

ಅಕ್ರಮ‌ ಗೋ‌ಮಾಂಸ ಸಾಗಾಟ.‌ ಶ್ರೀರಾಮ ಸೇನೆ ಸಂಘಟನೆ ಸದಸ್ಯರ ಕಾರ್ಯಾಚರಣೆ. ವಾಹನ ಸೀಜ಼್.

ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಶ್ರೀರಾಮ ಸೇನೆ ಸಂಘಟನೆಯ ಸದಸ್ಯರು ಪತ್ತೆ ಹಚ್ಚಿ ಪೋಲಿಸರಿಗೆ ಒಪ್ಪಿಸಿದ ಘಟನೆ ಭಾನುವಾರ ನಡೆದಿದೆ.
ಮಲ್ಲಿಪಟ್ಟಣ ಸರ್ಕಲ್ ನಲ್ಲಿ ದ್ವಿಚಕ್ರ ವಾಹನದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ವಿಷಯ ತಿಳಿದ ಶ್ರೀರಾಮ ಸೇನೆ ಸಂಘಟನೆಯ ಮುಖಂಡರಾದ ಅಮಿತ್, ಮಧು, ಲತೇಶ್, ನಾಗೇಗೌಡ ಈ ಕುರಿತು ಪ್ರಶ್ನಿಸಿದಾಗ ಆರೋಪಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ವಾಹನ ಸಹಿತ 30 ಕೆ.ಜಿ. ಗೋಮಾಂಸವನ್ನು ಪಟ್ಟಣದ ಪೋಲಿಸರಿಗೆ ಒಪ್ಪಿಸಿದ್ದು ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

14/01/2025

ಅವರೆಕಾಯಿ ಖರೀದಿಗೆ ಮುಗಿಬಿದ್ದ ಜನ. ಸಂಕ್ರಾಂತಿ ಹಬ್ಬದ ಪ್ರಯುಕ್ತ ರೂ.100, ರೂ.200/- ಪ್ರತಿ ಕೆಜಿಗೆ. | ಅರಕಲಗೂಡು | ದುಬಾರಿ ಆದರೂ ಅವರೆಕಾಯಿ ಖರೀದಿಗೆ ಹಿಂದೇಟು ಹಾಕದ ಸಾರ್ವಜನಿಕರು.

ಅರಕಲಗೂಡು ವಿಧಾನಸಭಾ ಕ್ಷೇತ್ರ‌ ವ್ಯಾಪ್ತಿಯ ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ರಾಜೇಗೌಡರನ್ನು ನೇಮಕ ಮಾಡಿ KPCC ಅಧ್ಯಕ್ಷರ...
14/01/2025

ಅರಕಲಗೂಡು ವಿಧಾನಸಭಾ ಕ್ಷೇತ್ರ‌ ವ್ಯಾಪ್ತಿಯ ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ರಾಜೇಗೌಡರನ್ನು ನೇಮಕ ಮಾಡಿ KPCC ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಆದೇಶಿಸಿದ್ದಾರೆ.

ಅರಕಲಗೂಡು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕೆ.ಟಿ.ಸೋಮಶೇಖರ್ ಅವರನ್ನು ನೇಮಕ ಮಾಡಿ ಆದೇಶಿಸಿದ KPCC ಆಧ್ಯಕ್ಷರಾದ ಡಿ.ಕೆ.ಶಿವ...
14/01/2025

ಅರಕಲಗೂಡು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕೆ.ಟಿ.ಸೋಮಶೇಖರ್ ಅವರನ್ನು ನೇಮಕ ಮಾಡಿ ಆದೇಶಿಸಿದ KPCC ಆಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು.

13/01/2025

ಅರಕಲಗೂಡು | ಸ್ವಸ್ಥ ಸಮಾಜ ನಿರ್ಮಣ ಉದ್ದೇಶದಿಂದ ವಿವಿಧ ಜನಪರ ಕಾರ್ಯಕ್ರಮ : ಪ್ರದೀಪ್ ರಾಮಸ್ವಾಮಿ

13/01/2025

ಅಧಿಕಾರಿಗಳು ಶಾಸಕರ ಕೈಗೊಂಬೆ ಆಗಿದ್ದಾರೆ. ಕಂಪ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಆರೋಪ.

ಕುರುಗೋಡು

ಕೇಂದ್ರ ಸರ್ಕಾರದ ಅಮೃತ ಯೋಜನೆಯನ್ನು ಕಾಂಗ್ರೆಸ್ ಪಕ್ಷ ಭಗೀರಥ ಯೋಜನೆಯೆಂದು ತಿರುಚಿದೆ ಎಂದು ಕಂಪ್ಲಿ ಕ್ಷೇತ್ರದ ಮಂಡಲದ ಅಧ್ಯಕ್ಷ ಅಳ್ಳಳ್ಳಿ ವೀರೇಶ ಆರೋಪಿಸಿದರು.

ಪಟ್ಟಣದ ಕಂಪ್ಲಿ ರಸ್ತೆಯಲ್ಲಿರುವ ಪಕ್ಯ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು,
ಇತ್ತಿಚೆಗೆ ಪಟ್ಟಣದಲ್ಲಿ ನಡೆದ ಕುಡಿಯುವ ನೀರಿನ ಯೋಜನೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಬ್ಯಾನರ್ ನಲ್ಲಿ ಪ್ರಧಾನ ಮಂತ್ರಿ ಭಾವಚಿತ್ರ ಬಳಸದೇ ಹಾಗೂ ಪಟ್ಟಣದ ಬಿಜೆಪಿ ಪಕ್ಷದ ಪುರಸಭೆ ಸದಸ್ಯರನ್ನು ಆಹ್ವಾನ ನೀಡದೇ ನಿರ್ಲಕ್ಷ್ಯ ತೋರಿದ್ದು , ಹಾಗೂ
ಇಲ್ಲಿನ ಪುರಸಭೆ ಅಧಿಕಾರಿಗಳು ಕೂಡ ನೇರವಾಗಿ ಶಾಸಕರ ಕೈಗೊಂಬೆಯಂತೆ ನಡೆಯುತ್ತಿದ್ದಾರೆ, ಇಲ್ಲಿ ಯಾವ ಸರ್ಕಾರ ಶಾಸ್ವತವಲ್ಲ, ಅಧಿಕಾರ ಶಾಶ್ವತವಲ್ಲ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರು ಶಾಸ್ವತವಲ್ಲ , ಪುರಸಭೆ ಮುಖ್ಯಾಧಿಕಾರಿಗಳು ಪಕ್ಷಪಾತ ಮಾಡದೇ ಎಲ್ಲಾರಿಗೂ ಗೌರವ ಕೊಡುವುದನ್ನು ಕಲಿತು ಕಲಿತುಕೊಳ್ಳಬೇಕು ಅಲ್ಲಿ ನೀವು ಅಧಿಕಾರಿ ನಡೆಸಲು ಜನರು ಮತ ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಎಲ್ಲಾ ವಾರ್ಡ್ ಗಳಿಗೆ ಅಭಿವೃದ್ಧಿ ಕೆಲಸ ಮಾಡಲು ಮುಂದಾಗಬೇಕು, ಇಲ್ಲದಿದ್ದರೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಪುರಸಭೆ ಮುಂದೆ ಉಗ್ರ ಹೋರಾಟ ನಡೆಸಲು ನಮ್ಮ ಬಿಜೆಪಿ ಪಕ್ಷ ಮುಂದಾಗುತ್ತದೆ ಎಂದು ಹೇಳಿದರು.
ಈ ವೇಳೆ ಪಟ್ಟಣದ ಪುರಸಭೆ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

13/01/2025

ಅಕ್ರಮ ಮದ್ಯ ಮಾರಾಟ. ವಾರ್ನಿಂಗ್ ಮಾಡಿದ ಅಬಕಾರಿ ಇಲಾಖೆ ಅಧಿಕಾರಿಗಳು .

ಎಮ್ಮಿಗನೂರು ಜಡೇಶ ನಗರ ( ಹೊಸೂರು) ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು, ಮದ್ಯ ಮಾರಾಟದಿಂದ ಉಂಟಾಗುತ್ತಿರುವ ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತ ಮಹಿಳೆಯರು ಅಕ್ರಮ ಮದ್ಯ ಮಾರಾಟ ಬಂದ್‌ ಮಾಡಿಸುವಂತೆ ಎಮ್ಮಿಗನೂರು ಗ್ರಾಮದ ಜಡೇಶ ನಗರದಲ್ಲಿನ ಅಕ್ರಮ ಮಧ್ಯ ಮಾರಾಟ ಮಾಡುವವರ ಅಂಗಡಿಗಳ ಮುಂದೆ ಮಹಿಳೆಯರು ಅಬಕಾರಿ ಇಲಾಖೆ ವಿರುದ್ಧ ಇಡಿ ಶಾಪ ಹಾಕಿದ್ದಾರೆ.
‘ಕಾನೂನು ಬಾಹಿರವಾಗಿ ಮದ್ಯ ಮಾರಾಟದಲ್ಲಿ ತೊಡಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಪೊಲೀಸ್‌ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಮೌನ ವಹಿಸಿದ್ದು ಅಕ್ರಮ ವ್ಯವಹಾರಕ್ಕೆ ಅವರೇ ಸಾಥ್ ನೀಡುತ್ತಿದ್ದಾರೆ’ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಗೂಡ ಅಂಗಡಿಗಳ ಮುಂದೆ ಮಹಿಳೆಯರು ಜಮಾಯಿಸುತ್ತಿದ್ದಂತೆ. ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ ಅಧಿಕಾರಿಗಳಾದ ಉಷಾ ಯಂಡಿಗೇರಿ ನೇತೃತ್ವದ ತಂಡ ಧಾವಿಸಿ, ಅಂಗಡಿಗಳನ್ನು ಪರಿಶೀಲಿಸಿ ಅಕ್ರಮವಾಗಿ ಮಧ್ಯ ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ಸೂಚಿಸಿರುತ್ತಾರೆ. ಒಂದು ವೇಳೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಕಾನೂನಾತ್ಮಕವಾಗಿ ಕಠಿಣ ಕ್ರಮ ಜರುಗಿಸುವುದಾಗಿ ಸೂಚಿಸಿದರು.

ಎಮ್ಮಿಗನೂರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಮಿತಿ ಮೀರಿದೆ. ನಮ್ಮ ಮಕ್ಕಳು ಮದ್ಯದ ಚಟಕ್ಕೆ ಬಿದ್ದು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದರ ಜತೆಗೆ ಸಣ್ಣ ವಯಸ್ಸಿನಲ್ಲೇ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಗ್ರಾಮದ ಮಹಿಳೆಯರು ಅಬಕಾರಿ ಅಧಿಕಾರಿಗಳಿಗೆ ದೂರು ನೀಡಿದ.
ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಕನಿಷ್ಠ 6 ರಿಂದ 8 ಅಕ್ರಮ ಮದ್ಯದ ಮಾರಾಟ ಅಂಗಡಿಗಳಿವೆ. ಅನುಮತಿ ಪಡೆದ ಮದ್ಯದಂಗಡಿಯ ಮಾಲೀಕರೇ ಸುತ್ತಮುತ್ತಲಿನ ಹಳ್ಳಿಗಳಿಗೆ ಅಕ್ರಮ ಮದ್ಯ ಸಾಗಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ಬಾರ್‌ಗಳಿಂದ ಖರೀದಿಸಿ, ಹಳ್ಳಿಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಹೀಗೆ ಮದ್ಯವು ಸ್ಥಳೀಯವಾಗಿ ಸಿಗುವುದರಿಂದ ಹೆಚ್ಚಿನ ಜನರು ಕುಡಿತಕ್ಕೆ ದಾಸರಾಗುವುದರಿಂದ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ’ ಎಂದು ಮಹಿಳೆಯರು ಅಬಕಾರಿ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.

‘ಹಳ್ಳಿಗಳಲ್ಲೇ ಎಲ್ಲಾ ಸಮಯದಲ್ಲೂ ಮದ್ಯ ಸಿಗುವುದರಿಂದ ಯುವಕರು ಸೇರಿ ಹೆಚ್ಚಿನ ಜನರು ಕುಡಿತದ ಚಟಕ್ಕೆ ದಾಸರಾಗುವುದರಿಂದ ಚಿಕ್ಕವಯಸ್ಸಿನಲ್ಲೇ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಸ್ಥಳೀಯ ಮುಖಂಡ ರಾಜಶೇಖರ್ ಗೌಡ ತಿಳಿಸಿದರು.

‘ಇತ್ತಿಚೆಗೆ ಗ್ರಾಮೀಣದ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ಮದ್ಯ ಸಿಗುತ್ತಿರುವುದರಿಂದ ಬಹುತೇಕ ಕೂಲಿ ಕಾರ್ಮಿಕರು ತಮ್ಮ ಒಂದು ದಿನದ ಕೂಲಿ ಹಣದ ಅರ್ಧದಷ್ಟನ್ನು ಮದ್ಯ ಸೇವನೆಗೆ ವಿನಿಯೋಗಿಸುತ್ತಿದ್ದಾರೆ. ಇದರಿಂದಾಗಿ ಮನೆಗಳಲ್ಲಿ ಜಗಳ ಉಂಟಾಗಿ ಇಡೀ ಕುಟುಂಬವೇ ಬೀದಿ ಪಾಲು ಆಗುತ್ತಿದೆ’ ಎಂದು ಬಿಜೆಪಿ ಮುಖಂಡ ಜಡಿಸಿದ್ದ ಸ್ವಾಮಿ ಕೆಎಂ ಅಸಮಾಧಾನ ವ್ಯಕ್ತಪಡಿಸಿದರು.‌ ಈ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳಾದ ಜಿ, ಶ್ರೀಧರ್ ಗ್ರಾಮದ ಮುಖಂಡರಾದ ನಾಗರಾಜ್ ರೆಡ್ಡಿ,ಮಾಬೂಸಾಬ್,ಈ ಬಾಲಪ್ಪ, ಅಗಸರ ಮಹೇಶ, ಮಲ್ಲಮ್ಮ, ಅಗಸರ ಶರಣಮ್ಮ,ಗಂಗಮ್ಮ,ಕುರುವಳ್ಳಿ ಈರಮ್ಮ ಸೇರಿದಂತೆ ಸ್ಥಳೀಯರು ಇದ್ದರು.
ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಬಂದ್ ಮಾಡಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ.‌ ಗ್ರಾಮದ ಮುಖಂಡ ಶಂಕರ್ ಎಚ್.
ಗ್ರಾಮದ ಜಡೇಶ ನಗರ ( ಹೊಸೂರು)
ಕನಾ ಪಬ್ಲಿಕ್ ಶಾಲೆ ಕೂಲಿ ಕಾಮೀಕರು ಬಡಾವಣೆಗಳಲ್ಲಿ ಮದ್ಯ ಮಾರಾಟ ನಿಷೇಧವಿದೆ. ಆದರೆ ತಾಲ್ಲೂಕಿನ ಬಹುತೇಕ ಗ್ರಾಮಗಳ ಬಡಾವಣೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

11/01/2025

ಅರಕಲಗೂಡು | ಹಾಸನ ಪಿಯು ಕಾಲೇಜಿನಲ್ಲಿ ಆಹಾರ ಮೇಳ. | FOOD FEST | HASSAN PU COLLEGE, ARAKALGUD | STUDENTS |

10/01/2025

ವೈಕುಂಠ ಏಕಾದಶಿ ದಿನದಂದು ಶ್ರೀ ವೆಂಕಟೇಶ್ವರಸ್ವಾಮಿ ದೇವರ ಉತ್ಸವ | ಶ್ರೀ ಲಕ್ಷ್ಮೀನರಸಿಂಹಸ್ವಾಮಿ | ಅರಕಲಗೂಡು | ಗೋವಿಂದಾ.. ಗೋವಿಂದಾ..| ಬಾಲಾಜಿ | ಶ್ರೀ ಲಕ್ಷ್ಮೀನಾರಾಯಣಸ್ವಾಮಿ

10/01/2025

ವೈಕುಂಠ ಏಕಾದಶಿ | ಅರಕಲಗೂಡು | ಶ್ರೀ ಪ್ರಸನ್ನ ನಂಜುಂಡೇಶ್ವರಸ್ವಾಮಿ ಹಾಗೂ ಕನ್ನಿಕಾಪರಮೇಶ್ವರಿ ದೇವಸ್ಥಾನ. ಆರ್ಯವೈಶ್ಯ ಮಂಡಳಿ. ಗೀತಾಜಯಂತಿ ಕಾರ್ಯಕ್ರಮ.

10/01/2025

ಗೀತಾಜಯಂತಿ ಹಾಗೂ ವೈಕುಂಠ ಏಕಾದಶಿ ಕಾರ್ಯಕ್ರಮ | ಆರ್ಯವೈಶ್ಯ ಮಂಡಳಿ ಅರಕಲಗೂಡು | ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ

10/01/2025

ಅರಕಲಗೂಡು : ವೈಕುಂಠ ಏಕಾದಶಿ | ಶ್ರೀ ಪ್ರಸನ್ನ ನಂಜುಂಡೇಶ್ವರಸ್ವಾಮಿ ಹಾಗೂ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ.

10/01/2025

ವೈಕುಂಠ ಏಕಾದಶಿ ಪ್ರಯುಕ್ತ ಹುಲಿಕಲ್ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ‌ ಅವರು

ವೈಕುಂಠ ಏಕಾದಶಿ ಪ್ರಯುಕ್ತ ಅರಕಲಗೂಡು ಶ್ರೀ ದೊಡ್ಡಮ್ಮ ದೇವರಿಗೆ ವಿಶೇಷವಾದ ಅಲಂಕಾರ.
10/01/2025

ವೈಕುಂಠ ಏಕಾದಶಿ ಪ್ರಯುಕ್ತ ಅರಕಲಗೂಡು ಶ್ರೀ ದೊಡ್ಡಮ್ಮ ದೇವರಿಗೆ ವಿಶೇಷವಾದ ಅಲಂಕಾರ.

08/01/2025

JOS ALUKKAS | ಮೈಸೂರು | ಕನ್ನಡ ಕಡೆಗಣನೆ | ಕಣ್ಮುಚ್ಚಿ ಕುಳಿತ ಅಧಿಕಾರಿಗಳು.

07/01/2025

ಅರಕಲಗೂಡು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಾಮರ್ಸ್ ವಿಭಾಗದ ವಿದ್ಯಾರ್ಥಿನಿಯರಿಂದ ಆಹಾರ ಮೇಳ.

07/01/2025

ಅರಕಲಗೂಡು : ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಡಳಿತಕ್ಕೆ ಚಾಟಿ ಬೀಸಿದ ಸಂಸದ ಶ್ರೇಯಸ್ ಎಂ ಪಟೇಲ್

Address

Arkalgud Arakalgud Arakalagudu
Hassan
573102

Alerts

Be the first to know and let us send you an email when Active News 24×7 posts news and promotions. Your email address will not be used for any other purpose, and you can unsubscribe at any time.

Contact The Business

Send a message to Active News 24×7:

Videos

Share