23/05/2024
ನಮ್ಮ ದೇಶದ ಅನೇಕ ಬ್ಯಾಂಕುಗಳು ಯಾವುದೇ ಆಧಾರ ರಹಿತ ಸಾಲಗಳನ್ನ ಕೋಟ್ಯಾಧಿಪತಿ ಉದ್ಯಮಿಪತಿಗಳಿಗೆ ನೀಡಿ, ಅವರಲ್ಲಿ ಇಂದು ಬಹುತೇಕ ಜನರು ದೇಶವನ್ನ ಬಿಟ್ಟು ಹೋಗಿ, ಸಾಮಾನ್ಯ ನಾಗರಿಕರಿಗೆ ಬ್ಯಾಂಕುಗಳಿಂದ ಸಾಲ ಪಡೆಯುವುದು ಬಹಳ ದುಃಸ್ತರವಾಗಿದೆ, ಅದರಲ್ಲೂ ವಿಶೇಷವಾಗಿ ಅತ್ಯಂತ ಅಗತ್ಯವಾದ ಕೃಷಿ ಕ್ಷೇತ್ರಕ್ಕೆ, ಶಿಕ್ಷಣ ಮತ್ತು ಉದ್ಯೋಗ ನಿಮಿತ್ತವಾದ ಸಾಲಗಳಿಗೆ ಬಹಳ ಕಷ್ಟ ಪಡುವಂತಾಗಿದೆ. ಈಗಲಾದರೂ ನಮ್ಮ ಎಲ್ಲಾ ಬ್ಯಾಂಕುಗಳು ಎಚ್ಚೆತ್ತುಕೊಂಡು ನಮ್ಮ ಸರ್ಕಾರಗಳು ಎಚ್ಚೆತ್ತುಕೊಂಡು ಜನಸಾಮಾನ್ಯನ ನಾಡಿಮಿಡಿತ ಕಷ್ಟಗಳನ್ನು ಅರ್ಥೈಸಿಕೊಂಡು ಈ ದೇಶದ ಬೆನ್ನೆಲುಬಾದ ರೈತರಿಗೆ ಹಾಗೂ ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಂಬಂಧಪಟ್ಟ ಸಾಲಗಳನ್ನು ಅರ್ಹ ವ್ಯಕ್ತಿಗಳಿಗೆ ನೀಡಿ ದೇಶವನ್ನ ಆರ್ಥಿಕವಾಗಿ ಅಭಿವೃದ್ದಿ ಗೊಳಿಸಲು ನೀವು ಗಳೆಲ್ಲ ಸಹಕಾರಿಗಳಾಗಬೇಕೆಂದು ನಮ್ಮ ಅಪೇಕ್ಷೆ