Suvarnsuddi.com

Suvarnsuddi.com Local News Information & advertisement

*ಗೋಕಾಕ- ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ**ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸದಿದ್ದ...
26/06/2024

*ಗೋಕಾಕ- ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

*ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಬಾಲಚಂದ್ರ ಜಾರಕಿಹೊಳಿ*
************************************************

*ಗೋಕಾಕ*: ಸಾರ್ವಜನಿಕರ ಯಾವುದೇ ಸಣ್ಣ-ಪುಟ್ಟ ಸಮಸ್ಯೆಗಳಿದ್ದರೂ ಸ್ಥಳದಲ್ಲಿಯೇ ಅಧಿಕಾರಿಗಳು ಪರಿಹರಿಸಬೇಕು. ವಿನಾಕಾರಣ ಅವರಿಗೆ ಅನಗತ್ಯ ತೊಂದರೆಗಳನ್ನು ನೀಡಿದರೇ ಸಹಿಸುವದಿಲ್ಲ. ಅಧಿಕಾರಿಗಳು ತಮಗೆ ನಿಯೋಜಿಸಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಂದ ಅಧಿಕಾರಿಗಳ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದು. ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವದಿಲ್ಲವೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಬುಧವಾರದಂದು ನಗರದ ತಾಲೂಕಾ ಪಂಚಾಯತಿ ಸಭಾ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆ ನೀಡುವುದು ಅಧಿಕಾರಿಗಳ ಮೊದಲ ಕೆಲಸವಾಗಬೇಕು ಎಂದು ಸೂಚಿಸಿದರು.

ಸಂಬಂಧಿಸಿದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಜನರ ಅಹವಾಲುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು, ಜೊತೆಗೆ ಸೌಜನ್ಯಯುತವಾಗಿ ವರ್ತಿಸಬೇಕು. ಕೆಲವರು 10 ವರ್ಷಕ್ಕಿಂತ ಮೇಲ್ಪಟ್ಟು ಇಲ್ಲಿಯೇ ಬೀಡಾರ ಹೂಡಿದ್ದಾರೆ. ಇನ್ನು ಮುಂದೆ ಅಂತವರು ಸರಿಯಾದ ಕೆಲಸ ಮಾಡದಿದ್ದರೇ ಅವರಿಗೆ ನಾವೇ ದಾರಿಯನ್ನು ತೋರಿಸಬೇಕಾಗುತ್ತದೆ. ಗೋಕಾಕ-ಮೂಡಲಗಿ ಹೊರತು ಪಡಿಸಿ ಬೇರೆ ತಾಲೂಕುಗಳಿಗೆ ಸ್ವಯಂ ಪೇರಿತರಾಗಿ ವರ್ಗಾವಣೆ ಮಾಡಿಕೊಳ್ಳುವಂತೆಯೂ ಶಾಸಕರು ಸಲಹೆ ನೀಡಿದರು.
ಪಿಡಿಓ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಭೂಮಿ ಸರ್ವೆಯರ್‍ಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಇದೇ ಪರಿಸ್ಥಿತಿ ಮುಂದುವರೆದರೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಮೂಡಲಗಿ ತಾಲೂಕಿನ ಕೆಲವೆಡೆ ವೈದ್ಯರ ಕೊರತೆಯಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಡೆಂಗ್ಯೂ ಜ್ವರ ಸಂಬಂಧ ಮುಂಜಾಗೃತ ಕ್ರಮಗಳನ್ನು ಬೀಗಿಯಾಗಿ ತೆಗೆದುಕೊಳ್ಳಬೇಕು. ರೈತರಿಂದ ಸರ್ವೆಯರ್‍ಗಳು ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದು, ಕೆಲಸಗಳು ಸಹ ಮಂದಗತಿಯಲ್ಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ರೈತರನ್ನು ಸತಾಯಿಸುತ್ತಿದ್ದಾರೆ. ಇಂತಹ ಭೂ ಸರ್ವೆಯರ್‍ಗಳ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕೌಜಲಗಿ, ಮನ್ನಿಕೇರಿ, ಬಗರನಾಳ, ಬೆಟಗೇರಿ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಮೂಡಲಗಿ ತಾಲೂಕಿನಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಕೂಡಲೇ ದುರಸ್ತಿ ಪಡಿಸಬೇಕು. ಜಿ.ಪಂ ನಬಾರ್ಡ, ಸಿಆರ್‍ಎಫ್ ಮತ್ತು ಲೋಕೋಪಯೋಗಿ ಇಲಾಖೆಯ ಅನುದಾನವನ್ನು ಸರ್ಕಾರದಿಂದ ಮಂಜೂರಾತಿ ಪಡೆಯಲು ಅಧಿಕಾರಿಗಳು ಕ್ರೀಯಾ ಯೋಜನೆಗಳನ್ನು ಸಿದ್ದಪಡಿಸಿಕೊಳ್ಳಬೇಕು. ಪ್ರಗತಿಯಲ್ಲಿರುವ ಮತ್ತು ಬಾಕಿ ಉಳಿಸಿರುವ ರಸ್ತೆ ಕಾಮಗಾರಿಗಳನ್ನು ಸ್ವತ: ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಂತೆ ಸೂಚಿಸಿದರು.

ಪ್ರಗತಿಯಲ್ಲಿರುವ ಜೆಜೆಎಮ್ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇದರಿಂದ ನಮ್ಮ ಜನರಿಗೆ ಮನೆ ಬಾಗಿಲಿಗೆ ನಲ್ಲಿಯ ಮೂಲಕ ನೀರನ್ನು ಒದಗಿಸಲು ಅನುವು ಮಾಡಿಕೊಡುವಂತೆ ಸೂಚಿಸಿದ ಅವರು, ಕಲ್ಮಡ್ಡಿ ಭಾಗದ ರೈತರಿಗೆ ನೀರಾವರಿ ಸೌಲಭ್ಯವು ಮುಟ್ಟುವಂತೆ ಕ್ರಮ ವಹಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಮೂಡಲಗಿ ತಾಲೂಕು ಮಟ್ಟದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮೀಣ ಜನ ವಸತಿ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಕಾರ್ಯಾಗಾರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಚಾಲನೆ ನೀಡಿದರು.

ವಿದ್ಯಾರ್ಥಿಗಳಿಗೆ ಕೋ ಕೋ ಡ್ರೆಸ್ ಕಾಣಿಕೆ! *********************************************ಘಟಪ್ರಭಾ; ಶಿಂದಿಕುರುಬೆಟ್ ಗ್ರಾಮದ ಮಾಧ್ಯಮಿಕ...
26/06/2024

ವಿದ್ಯಾರ್ಥಿಗಳಿಗೆ ಕೋ ಕೋ ಡ್ರೆಸ್ ಕಾಣಿಕೆ!
*********************************************
ಘಟಪ್ರಭಾ; ಶಿಂದಿಕುರುಬೆಟ್ ಗ್ರಾಮದ ಮಾಧ್ಯಮಿಕ ಪ್ರೌಢಶಾಲೆಯ ಕೋಕೋ ಆಡುವ ಎಲ್ಲಾ ವಿದ್ಯಾರ್ಥಿಗಳಿಗೆ ಕೋ ಕೋ ಡ್ರೆಸ್ ಗಳನ್ನು ಗ್ರಾಮದ ಸಮಾಜ ಸೇವಕರಾದ ನಾಗಲಿಂಗ ಪೋತದಾರ ಅವರು ಕಾಣಿಕೆಯಾಗಿ ನೀಡಿದರು.

ನಾಗಲಿಂಗ ಪೋತದಾರ ಅವರ ಕಾರ್ಯಕ್ಕೆ ಶಾಲೆಯ ಅಧ್ಯಕ್ಷರು ಹಾಗೂ ಮುಖ್ಯೋಪಾಧ್ಯಾಯರ ಎಲ್ಲಾ ಶಿಕ್ಷಕ ಸಿಬ್ಬಂದಿಯವರ ಅಭಿನಂದನೆ ಸಲ್ಲಿಸಿದ್ದಾರೆ.

ಶುಕ್ರವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿಯ ಕೆಪಿಟಿಸಿಎಲ್ ಭವನದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಸಂಸದ ಜಗದೀಶ್ ಶ...
21/06/2024

ಶುಕ್ರವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿಯ ಕೆಪಿಟಿಸಿಎಲ್ ಭವನದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಸಂಸದ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭ!
20/06/2024

ಬೆಳಗಾವಿ ಲೋಕಸಭಾ ಕ್ಷೇತ್ರದ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭ!

ಶಿಂದಿಕುರಬೇಟ ಮಾಧ್ಯಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ!*************************************************ಘಟಪ್ರಭಾ: ಸಮೀಪದ ಶಿಂಧ...
20/06/2024

ಶಿಂದಿಕುರಬೇಟ ಮಾಧ್ಯಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ!
*************************************************
ಘಟಪ್ರಭಾ: ಸಮೀಪದ ಶಿಂಧಿಕುರಬೇಟ ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಗೋಕಾಕ ಅವರಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾಧ್ಯಮಿಕ ಶಾಲೆ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಲವ್ ಕುಮಾರ್ ಉದ್ಘಾಟಿಸಿ ಮಾತನಾಡಿದ ಅವರು ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆ ಆಗುತ್ತಿದೆ. ಏಕೆಂದರೆ ಮನುಷ್ಯನ ಅತಿಯಾದ ದುರಾಸೆಯಿಂದ ಪರಿಸರವನ್ನು ನಾಶ ಮಾಡುತ್ತಿದ್ದಾನೆ ಇದರಿಂದ ಭೂಮಿಯ ಸಮತೋಲನವನ್ನು ಕಳೆದುಕೊಂಡು ಒಳ್ಳೆಯ ನೀರು, ಗಾಳಿ, ಆಹಾರ ಇಲ್ಲದೆ ಮನುಷ್ಯ ಆಯುಷ್ಯ ಹಾಗೂ ಆರೋಗ್ಯ ಕ್ಷೀಣಿಸುತ್ತಿದೆ. ಪರಿಸರ ರಕ್ಷಣೆ ಮಾಡಲು ನಮ್ಮೆಲ್ಲರ ಹೊಣೆ ಪ್ರತಿಯೊಬ್ಬರೂ ಕೂಡ ತಮ್ಮ ಜಮೀನಿನಲ್ಲಿ ಮನೆಯ ಅಂಗಳದಲ್ಲಿ ಸಸಿಗಳನ್ನು ಬೆಳೆಸುವುದರಿಂದ ಉತ್ತಮ ಪರಿಸರವನ್ನು ಕಂಡುಕೊಳ್ಳಬಹುದು ಎಂದು ಹೇಳಿದರು.

ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ಸೂಕ್ತ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಪಿ.ಹೆಚ್. ಗೋಸಬಾಳ, ಯೋಜನಾ ಅಧಿಕಾರಿ ತಿಮ್ಮೆಶ್, ಶಿಕ್ಷಕರಾದ ಎಂ.ಎಸ್.ಬೆಳಗಲಿ, ಎಸ್. ಎನ್. ವಡ್ಡರಟ್ಟಿ, ಪ್ರಶಾಂತ್ ಮಲ್ಲಾಪೂರ, ಕೃಷಿ ಅಧಿಕಾರಿ ಭೀಮಪ್ಪ ಇಟಗಿ, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಇದ್ದರು. ಕಾರ್ಯಕ್ರಮವನ್ನು ಸೇವಾ ಪ್ರತಿನಿಧಿ ಸುನಿತಾ ಗೋಕಾಕ ನಿರೂಪಿಸಿ, ವಂದಿಸಿದರು

ಪೋಟೋ:
ಘಟಪ್ರಭಾ: ಸಮೀಪದ ಶಿಂಧಿಕುರಬೇಟ ಗ್ರಾಮದ ಮಾಧ್ಯಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಗೋಕಾಕ ಅವರಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿತ್ತಿರುವುದು.

19/06/2024
ಘಟಪ್ರಭಾ (ಮಾಸ್) ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆನನಸಾದ ದೇವದಾಸಿಯರ ಮಹಿಳೆಯರ ಕನಸು! ನೂತನ ಕಟ್ಟಡ ಉದ್ಘಾಟಿಸಿದ ಎಲ್.ಐ.ಸಿ ಡಿವಿಜನಲ್ ಮ್ಯಾನೇಜರ...
19/06/2024

ಘಟಪ್ರಭಾ (ಮಾಸ್) ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ

ನನಸಾದ ದೇವದಾಸಿಯರ ಮಹಿಳೆಯರ ಕನಸು!

ನೂತನ ಕಟ್ಟಡ ಉದ್ಘಾಟಿಸಿದ ಎಲ್.ಐ.ಸಿ ಡಿವಿಜನಲ್
ಮ್ಯಾನೇಜರ್ ಬಿ.ಪಿ ರವಿ!
*************************************************
ಘಟಪ್ರಭಾ: ದೇವದಾಸಿ ಮಹಿಳೆಯರೆಲ್ಲರೂ ಸೇರಿಕೊಂಡು ತಮ್ಮದೇ ಆದ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿದ್ದಾರೆ ಎಂದು ಭಾರತೀಯ ಜೀವವಿಮಾ ನಿಗಮದ ಬೆಳಗಾವಿಯ ಡಿವಿಜನಲ್ ಮ್ಯಾನೇಜರ್ ಆದ ಬಿ.ಪಿ ರವಿ ಹೇಳಿದರು.

ಅವರು ಇತ್ತೀಚಿಗೆ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ ಘಟಪ್ರಭಾ (ಮಾಸ್) ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತ, ದೇವದಾಸಿ ಮಹಿಳೆಯರಿಗಾಗಿ ದೇವದಾಸಿ ಪದ್ಧತಿ ನಿರ್ಮೂಲನೆಗೆ ಸ್ಥಾಪನೆಯಾಗಿರುವ ಒಂದು ಸಂಸ್ಥೆಯಾಗಿದ್ದು, ಈ ಸಂಸ್ಥೆ ಸತತ 27 ವರ್ಷಗಳಿಂದ ಮಾಡಿಕೊಂಡಿಕೊಂಡು ಬಂದಿರುವ ಸಾಮಾಜಿಕ ಕಾರ್ಯ ಮತ್ತು ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಕೈಗೊಂಡ ಕ್ರಮಗಳು ಶ್ಲಾಘನಿಯವಾಗಿದೆ ಎಂದು ಹೇಳಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಮಾಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ.ಸೀತವ್ವ ಜೋಡಟ್ಟಿ ಅವರು ಸಂಸ್ಥೆಯು ೧೯೯೭ ಸೆಪ್ಟೆಂಬರ್ ೮ ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ಸ್ಥಾಪನೆಯಾಗಿ ಅನೇಕ ದಶಕಗಳಿಂದ ದೇವದಾಸಿ ಪದ್ಧತಿ ನಿರ್ಮೂಲನೆ ಬಗ್ಗೆ ಕಾರ್ಯವನ್ನು ನಿರ್ವಹಿಸುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ದೇವದಾಸಿ ಪದ್ಧತಿಯನ್ನು ಬೇರು ಸಹಿತ ಕಿತ್ತು ಹಾಕಲಾಗಿದ್ದು, ಈ ಮೂಲಕ ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಬೇಕೆಂಬ ಕನಸನ್ನು ನನಸು ಮಾಡಲಾಗಿದೆ. ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಸತತವಾಗಿ ಪ್ರಯತ್ನ ಪಟ್ಟು ಈ ಕಾರ್ಯವನ್ನು ಯಶಸ್ಸುಗೂಳಿಸಲಾಗಿದೆ.

ಹಲವಾರು ಯೋಜನೆಗಳ ಮೂಲಕ ದೇವದಾಸಿ ಹಾಗೂ ಮಾಜಿ ದೇವದಾಸಿಯವರು ಸಾಮಾಜಿಕವಾಗಿ ಆರ್ಥಿಕವಾಗಿ ಸಮಾಜದಲ್ಲಿ ಸಬಲೀಕರಣವಾಗುವಂತೆ ಮಾಡಲಾಗಿದೆ. ಅದರ ಜೊತೆಗೆ ದಲಿತ ಹಾಗೂ ದೇವದಾಸಿಯ ಮಕ್ಕಳು ಮತ್ತು ಮೋಮ್ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ಅವರಿಗೆ ಉನ್ನತ ಶಿಕ್ಷಣ ನಿಧಿಯನ್ನು ಸಹ ನೀಡಲಾಗುತ್ತಿದ್ದು, ಸರ್ಕಾರದಿಂದ ಮಾಸಿಕ ಪಿಂಚಣಿ ಹಾಗೂ ಸಂಸ್ಥೆಯಿಂದ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದೆ ಈಗ ಸ್ವಂತ ಕಟ್ಟಡ ನಿರ್ಮಾಣದಿಂದ ದೇವದಾಸಿಯರ ಕನಸು ಈಗ ನನಸಾಗಿದೆ ಎಂದು ಹೇಳಿದರು.

ಅದೇ ರೀತಿ ಉತ್ತಮ ಕಟ್ಟಡ ನಿರ್ಮಿಸಲು ಭಾರತೀಯ ಜೀವವಿಮಾನ ನಿಗಮ ಹಾಗೂ ಇನ್ನೂ ಹಲವಾರು ಸಂಸ್ಥೆಗಳು ಸಹಾಯ ಮಾಡಿರುವುದರಿಂದ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಉದ್ಘಾಟನಾ ಸಮಾರಂಭದಲ್ಲಿ ಹಾಗೂ ಎಲ್.ಐ.ಸಿ ಸೇಲ್ಸ್ ಮ್ಯಾನೇಜರ್ ಎಂ.ಎಸ್.ಮಾನೆ ಮತ್ತು ಇತರೆ ಅಧಿಕಾರಿಗಳು, ಸಂಸ್ಥೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಪೋಟೋ:
ಘಟಪ್ರಭಾ: ಸ್ಥಳೀಯ (ಮಾಸ್) ಸಂಸ್ಥೆಯ ನೂತನ ಕಟ್ಟಡವನ್ನು ಎಲ್.ಐ.ಸಿ ಡಿವಿಜನಲ್ ಮ್ಯಾನೇಜರ್ ಬಿ.ಪಿ ರವಿ ಉದ್ಘಾಟಿಸಿದರು.

ನರಸಿಂಗ್ ವೃತ್ತಿ ಎಲ್ಲಕ್ಕಿಂತ ಹೆಚ್ಚಿನದು! ನರಸಿಂಗ್ ವಿದ್ಯಾರ್ಥಿಗಳ ವಿಧಿ ಬೋಧನೆ ಕಾರ್ಯಕ್ರಮದಲ್ಲಿ ಗಣ್ಯರ ಅಭಿಪ್ರಾಯ! ********************...
18/06/2024

ನರಸಿಂಗ್ ವೃತ್ತಿ ಎಲ್ಲಕ್ಕಿಂತ ಹೆಚ್ಚಿನದು!

ನರಸಿಂಗ್ ವಿದ್ಯಾರ್ಥಿಗಳ ವಿಧಿ ಬೋಧನೆ ಕಾರ್ಯಕ್ರಮದಲ್ಲಿ ಗಣ್ಯರ ಅಭಿಪ್ರಾಯ!
*************************************************
ಘಟಪ್ರಭಾ :ಸ್ಥಳೀಯ ಜೆ.ಜಿ.ಆಸ್ಪತ್ರೆ ಸೊಸಾಯಟಿಯ ನರ್ಸಿಂಗ ಕಾಲೇಜಿನ ದೀಪ ಬೆಳಗಿಸುವ ಹಾಗೂ ನರ್ಸಿಂಗ ವಿದ್ಯಾರ್ಥಿಗಳ ವಿಧಿ ಬೋದನಾ ಕಾರ್ಯಕ್ರಮ ಆಸ್ಪತ್ರೆಯ ಆಯುರ್ವೇದ ಮೇಡಿಕಲ್ ಕಾಲೇಜಿನ ಸಭಾ ಭವನದಲ್ಲಿ ದೀಪ ಬೆಳಗಿಸಿವದರೊಂದಿಗೆ ಸೋಮವಾರದಂದು ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೋಕಾಕ ರಾಕೇಟ ಕಂಪನಿಯ ಮುಖ್ಯಸ್ಥರಾದ ರಾಜು ಶೇಖರ ಮಾತನಾಡಿ ನರ್ಸಿಂಗ ವೃತ್ತಿಯು ಎಲ್ಲ ವೃತ್ತಗಳಿಗಿಂತ ಹೆಚ್ಚಿನದು. ಇಲ್ಲಿ ಸೇವೆಯೆ ಪ್ರಾಮುಖ್ಯವಾಗಿರಯತ್ತದೆ. ಡಾಕ್ಟರಕಿಂತ ನಾವು ಮೂದಲು ಬೆಟ್ಠಿಯಾಗುವದು ದಾದಿಗಳನ್ನು ನಂತರ ಡಾಕ್ಟರ ಸೇವೆ ಪ್ರಾರಂಭವಾಗುತ್ತದೆ ಇಂತಹ ನರ್ಸಿಂಗ ವೃತ್ತಿಯನ್ನು ಜೆಜಿ ಸಹಕಾರಿ ಆಸ್ಪತ್ರೆಯಲ್ಲಿ ಕಲಿಯುತ್ತಿರುವದು ಹೆಮ್ಮೇಯ ವಿಷಯ ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ್ದ ಕಾಹೇರ ನರ್ಸಿಂಗ ಕಾಲೇಜಿನ ಪ್ರಾಂಶುಪಾಲರಾದ ಡಾ. ವೀರಕುಮಾರ ಮಾತನಾಡುತ್ತ ಯಾವ ವಿದ್ಯಾರ್ಥಿಗಳನ್ನು ಕೇಳಿದರೆ ನಾನು ಡಾಕ್ಟರ ಆಗುತ್ತೆನೆ ನಾನು ಇಂಜನಿಯರ ಆಗುತ್ತೆನೆ ಎಂದು ಹೇಳುವ ಸಮಯದಲ್ಲಿ ನೀವುಗಳು ಬಾರತ ದೇಶದ ಏಕೈಕ ಸಹಕಾರಿ ಸಂಸ್ಥೆಯಲ್ಲಿ ನರ್ಸಿಂಗ ವೃತ್ತಿಯನ್ನು ಆಯ್ಕೆ ಮಾಡಿದ್ದು ಶ್ಲಾಘನೀಯ. ನರ್ಸಿಂಗ ಸೇವೆ ಒಂದು ಗ್ಲೊಬಲ್ ವೃತ್ತಿ ಈ ವ್ರತ್ತಿಯಲ್ಲಿ ರೋಗಿಯನ್ನು ಸಂಭಾಳಿಸುವದರ ಜೋತೆಗೆ ಅವರ ಸಂಭAದಿಕರನ್ನು ಸಂಬಾಳಿಸಬೇಕಾಗುತ್ತದೆ.

ರೋಗಿಯನ್ನು ಗುಣಮುಖ ಮಾಡಿ ಅವರನ್ನು ಮತ್ತೆ ಸಮಾಜಕ್ಕೆ ಕೊಡುವದು ಗುರುತರ ಕೆಲಸ, ಕಾರಣ ನಸಿಂಗ ಕೆಲಸದ ಬಗ್ಗೆ ಕಿಳುರಮೆ ಪಡುವದು ಬೇಡ ಎಂದು ಹೇಳಿದರು.

ಸಾನಿದ್ಯ ವಹಿಸಿದ್ದ ಗುಬ್ಬಲ ಗುಡ್ಡ ಕೆಂಪಯ್ಯಾ ಮಠದ ಮಠಾಧೀಶರಾದ ಡಾ. ಮಲ್ಲಿಕಾರ್ಜುನ ಸ್ವಾಮಿಗಳು ಆಶಿರ್ವಚನ ನೀಡಿದರು. ನರ್ಸಿಂಗ ಕಾಲೇಜಿನ ಪ್ರಾಂಶುಪಾಲರಾದ ಸಿದ್ದುಸಿಂಗ ಹಜೆರಿ ವರದಿ ವಾಚನ ಮಾಡಿದರು. ವೇದಿಕೇಯ ಮೇಲೆ .ಸಂಸ್ಥೇಯ ಆಧ್ಯಕ್ಷರಾದ ಅಪ್ಪಯ್ಯಾ ಬಡಕುಂದ್ರಿ, ಉಪಾಧ್ಯಕ್ಷರಾದ ಅನೀಲ ನೇರ್ಲಿ, ಮುಖ್ಯ ಕಾರ್ಯನಿರ್ವಾಹಕ ಆದಿಕಾರಿ ಬಿ.ಕೆ.ಎಚ್. ಪಾಟೀಲ ಆರ್.ಟಿ.ಶಿರಾಳಕರ.ಸಿ.ಎಸ್.ಕಾಡದವರ,ಎಮ್.ಎ. ಪಾಟೀಲ, ಎಸ್.ಎಸ್. ಪಾಟೀಲ,ಆಶಾದೇವಿ ಕತ್ತಿ, ಸೇರಿದಂತೆ ಎಲ್ಲ ನಿರ್ದೇಶಕ ಮಂಡಳಿಯ ಸದಸ್ಯರು, ನರ್ಸಿಂಗ ಕಾಲೇಜಿನ ಮತ್ತು ಆಯುರ್ವೇದ ಕಾಲೇಜಿನ ಬೋದಕ, ಬೋದಕೇತರ ಸಿಬ್ಬಂದಿಯವರು ಇದ್ದರು ಕೊನೇಯಲ್ಲಿ ಕಲಲಪ್ಪ ಕೊಲ್ಹಾಪುರೆ ವಂದನಾರ್ಪಣೆ ಮಾಡಿದರು

ಪೋಟೊ;
ಘಟಪ್ರಭಾ :ಜೆ.ಜಿ.ಆಸ್ಪತ್ರೆ ಸೊಸಾಯಟಿಯ ನರ್ಸಿಂಗ ಕಾಲೇಜಿನ ವಿದ್ಯಾರ್ಥಿಗಳ ದೀಪ ಬೆಳಗಿಸುವ ಕಾರ್ಯಕ್ರಮ ಆಯುರ್ವೇದ ಮೇಡಿಕಲ್ ಕಾಲೇಜಿನ ಸಭಾ ಭವನದಲ್ಲಿ ದೀಪ ಬೆಳಗಿಸಿವದರೊಂದಿಗೆ ಉದ್ಘಾಟಿಸಿದ ಗಣ್ಯರು.

ಪೋಟೊ;
ಘಟಪ್ರಭಾ : ಜೆ.ಜಿ ಆಸ್ಪತ್ರೆಯ ನರ್ಸಿಂಗ ಕಾಲೇಜಿನ ವಿದ್ಯಾರ್ಥಿಗಳು ದೀಪದೊಂದಿಗೆ ಬೋದನಾ ವಿಧಿ ಸ್ವೀಕರಿಸುತ್ತಿರುವದು.

17/06/2024

ಸರ್ ಲಕ್ಷ್ಮಣ್ ಸವದಿ ಬಿಜೆಪಿಗೆ ಬರತಾರಾ…?

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (BUDA) ಸಭೆ ನಡೆಯಿತು.
15/06/2024

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (BUDA) ಸಭೆ ನಡೆಯಿತು.

ರಸ್ತೆಯಲ್ಲಿ ತಗ್ಗು ಸೇತುವೆಗೆ ಹಾನಿಯಾಗುವ ಸಂಭವ!! ************************************************ಗೋಕಾಕ ತಾಲೂಕಿನ ಘಟಪ್ರಭಾ-ಧುಪದಾಳ ...
15/06/2024

ರಸ್ತೆಯಲ್ಲಿ ತಗ್ಗು ಸೇತುವೆಗೆ ಹಾನಿಯಾಗುವ ಸಂಭವ!!
************************************************
ಗೋಕಾಕ ತಾಲೂಕಿನ ಘಟಪ್ರಭಾ-ಧುಪದಾಳ ರಸ್ತೆಯಲ್ಲಿನ ಘಟಪ್ರಭಾ ಎಡದಂಡೆ ಕಾಲುವೆ ಮೇಲಿನ ಸೇತುವೆ ಮೇಲೆ ತಗ್ಗು ಬಿದ್ದು ರಸ್ತೆ ಹಾಳಾಗುತ್ತಿದೆ. ಕೂಡಲೆ ರಸ್ತೆ ದುರಸ್ತಿ ಮಾಡದಿದ್ದರೆ ಸೇತುವೆಗೆ ಹಾನಿಯಾಗುವ ಸಂಭವ ಇರುತ್ತದೆ.

ಸದರಿ ರಸ್ತೆಯು ಯಾವ ಇಲಾಖೆಗೆ ಸಂಬಂಧಿಸಿರುತ್ತದೆ ಎಂಬುದರ ಬಗ್ಗೆ ಜನರಲ್ಲಿ ಗೊಂದಲಗಳಿವೆ. ಈ ರಸ್ತೆಯನ್ನು ನಿರ್ಮಿಸಿದ್ದು ನೀರಾವರಿ ಇಲಾಖೆಯವರು. ಆದರೆ ಅವರು ಸದರಿ ರಸ್ತೆಯನ್ನು ಪಂಚಾಯತ್ ರಾಜ್ ಇಲಾಖೆ ಅವರಿಗೆ ಹಸ್ತಾಂತರಿಸಿದ್ದೇವೆ ಎನ್ನುತ್ತಾರೆ.

ರಸ್ತೆ ಯಾವುದೇ ಇಲಾಖೆಗೆ ಸಂಬಂಧಿಸಿದ್ದರು ಸಹ ಕೂಡಲೆ ಅಧಿಕಾರಿಗಳು ರಸ್ತೆಯನ್ನು ದುರಸ್ತಿ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಬ್ರಹ್ಮಮಕುಮಾರಿ ಆಶ್ರಮದಲ್ಲಿ ಪರಿಸರ ದಿನ ಆಚರಣೆ! *************************************************ಘಟಪ್ರಭಾ: ಪರಿಸರ ಕಾಪಡುವುದು ನಮ್ಮ...
13/06/2024

ಬ್ರಹ್ಮಮಕುಮಾರಿ ಆಶ್ರಮದಲ್ಲಿ ಪರಿಸರ ದಿನ ಆಚರಣೆ!
*************************************************
ಘಟಪ್ರಭಾ: ಪರಿಸರ ಕಾಪಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಪರಿಸರ ನಾಶವಾದರೆ ದೇಶಕ್ಕೆ ಕುತ್ತು ಎಂದು ಪ್ರಜಾಪಿತಾ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಮುಖ್ಯಸ್ಥೆಯಾದ ಸವಿತಾ ಬಿ.ಕೆ. ಅಕ್ಕನವರು ಹೇಳಿದರು.

ಅವರು ಗುರುವಾದಂದು ಇಲ್ಲಿಯ ವಿವೇಕಾನಂದ ನಗರದಲ್ಲಿರುವ ಪ್ರಜಾಪಿತಾ ಬ್ರಹ್ಮಮಕುಮಾರಿ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಪರಿಸರವು ಗಾಳಿ, ಬೆಳಕು, ನೀರು, ಆಕಾಶ, ಗಿಡಮರಗಳನ್ನು ಹೊಂದಿದೆ. ಈಗಾಗಲೆ ನಾವು ಗಿಡ ಮರಗಳನ್ನು ಕಡಿದು ಪರಿಸರ ನಾಶ ಮಾಡುತ್ತಿದ್ದೆವೆ. ಹೀಗೆಯೆ ಮುಂದುವರಿದರೆ ಮಳೆ ಇಲ್ಲದೆ ಕೂಡಿಯಲು ನಿರಲ್ಲದ ಪರಿಸ್ಥಿತಿ ಬರಬಹುದು. ಮನೆಗೊಂದು ಮರ ನೆಟ್ಟು ಪರಿಸರ ಕಾಪಾಡೊಣ ಎಂದು ಹೇಳಿದರು.

ಇನ್ನೋರ್ವ ಅಕ್ಕನವರಾದ ಆಶ್ವಿನಿಯವರು ಮಾತನಾಡಿ ನಮ್ಮ ಅಂಗಳವನ್ನು ನಾವೆ ಗುಡಿಸಬೇಕು. ಕಸವನ್ನು ಹೊರಗೆ ಬೀಸಾಡದೆ ಕಸದ ತೊಟ್ಟಯಲ್ಲಿ ಇಟ್ಟು ಕಸದ ಗಾಡಿ ಬಂದಾಗ ಹಾಕಬೇಕು. ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಸಬೇಕು. ಪ್ಲಾಸ್ಟಿಕ್ ಉಪಯೋಗ ಬಿಟ್ಟು ಬಿಡಬೇಕು. ಏಕೆಂದರೆ ಪ್ಲಾಸ್ಟಿಕ್ ಕರಗಲು 400 ವರ್ಷ ಬೇಕಾಗುತ್ತದೆ. ದುಮ್ರಪಾನ ಮಾಡುವುದರಿಂದ ಆರೋಗ್ಯದ ಜೊತೆಗೆ ಪರಿಸರವು ಹಾಳಾಗುತ್ತದೆ ಎಂದರು.

ಪ್ರಜಾಪಿತಾ ಬ್ರಹ್ಮಮಕುಮಾರಿ ವಿಶ್ವ ವಿದ್ಯಾಲಯದಲ್ಲಿ ಗುಲಾಬಿ ಹೂವಿನ ಸಸಿ ನೇಡಲಾಯಿತು. ಆಗಮಿಸಿದ ಎಲ್ಲರಿಗೂ ಪರಿಸರ ಸಂರಕ್ಷಣೆಯ ವಿದಿಯನ್ನು ಸವಿತಾ ಅಕ್ಕನವರು ಬೋದಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಘಟಪ್ರಭಾ ಪುರಸಭೆಯ ಕಂದಾಯ ಅಧಿಕಾರಿಗಳಾದ ವಾಯ್.ಎನ್.ಚಲುವಾದಿ, ಪೊಲಿಸ ಇಲಾಖೆಯ ಅಧಿಕಾರಿ ಮುಕ್ಕನ್ನವರ, ಸವಿತಾ, ಆಶ್ವಿನಿ ಅಕ್ಕನವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಸ.ಎಮ್. ಹಂಚಿನಾಳ, ಜಿ.ಎಸ್.ರಜಪೂತ, ಬೆಳ್ಳನ್ನವರ, ಸುರೇಶ ಕರೋಶಿ, ಶ್ರೀಕಾಂತ ಕುಲಕರ್ಣೀ ಸೇರಿದಂತೆ ಅನೇಕರು ಇದ್ದರು.

ಘಟಪ್ರಭಾ: ಪರಿಸರ ದಿನಾಚೆಣೆ ಅಂಗವಾಗಿ ಪ್ರಜಾಪಿತಾ ಬ್ರಹ್ಮಮಕುಮಾರಿ ವಿಶ್ವ ವಿದ್ಯಾಲಯದಲ್ಲಿ ಗುಲಾಬಿ ಹೂವಿನ ಸಸಿ ನೇಡುತ್ತಿರುವ ಗಣ್ಯರು.

ಘಟಪ್ರಭಾ: ಪರಿಸರ ದಿನಾಚೆಣೆ ಅಂಗವಾಗಿ ಪ್ರಜಾಪಿತಾ ಬ್ರಹ್ಮಮಕುಮಾರಿ ಆಶ್ರಮದಲ್ಲಿ ಹಮ್ಮಕೊಳ್ಳಲಾದ ಪರಿಸರ ದಿನಾರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಸವಿತಾ ಬಿ.ಕೆ. ಅಕ್ಕನವರು.

ಶಾಂತಿಯುತವಾಗಿ ಹಬ್ಬವನ್ನು ಆಚರಿಸಿ; ಪಿಎಸ್ಐ ನರಳೆ! ಅಹಿತಕರ ಘಟನೆಗಳು ನಡೆಯದಂತೆ ಕ್ರಮ! ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜಾಗೃತೆ ಇರಲಿ! ******...
10/06/2024

ಶಾಂತಿಯುತವಾಗಿ ಹಬ್ಬವನ್ನು ಆಚರಿಸಿ; ಪಿಎಸ್ಐ ನರಳೆ!

ಅಹಿತಕರ ಘಟನೆಗಳು ನಡೆಯದಂತೆ ಕ್ರಮ!

ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜಾಗೃತೆ ಇರಲಿ!
************************************************
ಘಟಪ್ರಭಾ; ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಜೊತೆಗೆ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ನೋಡಿಕೊಳ್ಳಬೇಕೆಂದು ಘಟಪ್ರಭಾ ಪೋಲಿಸ್ ಠಾಣೆಯ ಪಿಎಸ್.ಐ ಎನ್.ಆರ್ ನರಳೆ ಹೇಳಿದರು.

ಅವರು ಸೋಮವಾರ ಸಂಜೆ ಪೋಲಿಸ್ ಠಾಣೆಯ ಅವರಣದಲ್ಲಿ ಬಕ್ರಿದ್ ಹಬ್ಬದ ನಿಮಿತ್ತ ಕರೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಅನಧೀಕೃತವಾಗಿ ಜಾನುವಾರುಗಳ ವಧೆ, ಜಾನುವಾರು ಸಾಗಾಣಿಕೆ ತಡೆಗಟ್ಟುವ ಕುರಿತಂತ ಯೋಗ್ಯ ಕ್ರಮ ಕೈಗೊಳ್ಳಲಾಗುವುದು.

ಈ ನಿಟ್ಟಿನಲ್ಲಿ ಜೂನ 17ರಂದು ಜರುಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯುವಕರಿಗೆ ತಿಳಿ ಹೇಳಬೇಕೆಂದು ಮನವಿ ಮಾಡಿ ಮಾಡಿಕೊಂಡು, ಕಾನೂನು ಉಲ್ಲಂಘಿಸುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಯಾವುದೇ ಹೇಳಿಕೆಗಳು, ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡುವುದು ಫಾರ್ವಡ್ ಮಾಡಿ ಮತ್ತೂಬ್ಬರಿಗೆ ನೋವುಂಟು ಮಾಡುವುದು ಕಾನೂನಿನಲ್ಲಿ ಅಪರಾಧವಾಗುತ್ತದೆ. ಯಾವುದೇ ರೀತಿಯ ಕಾಯ್ದೆ ಉಲ್ಲಂಘನೆಯಾಗದ ಹಾಗೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಎ.ಎಸ್.ಐ, ಪ್ರಭಾಕರ ಪಾಟೀಲ, ಮುಸ್ಲಿಂ ಸಮುದಾಯದ ಹಿರಿಯರಾದ ಮೊಹ್ಮದಸಾಬ ಮೋಮಿನ್, ಸಯ್ಯದ ಮುಸ್ತಾಕ ಖಾಜಿ, ಕುತಬುದ್ದೀನ ತಟಗಾರ, ಪ.ಪಂ ಮಾಜಿ ಸದಸ್ಯರಾದ ಸಲೀಮ ಕಬ್ಬೂರ, ದಾದಾಪೀರ ಶಾಬಾಜಖಾನ, ಹಸನ ಇಂಗಳೆ, ರಜಾಕ ಚೌಧರಿ, ಅಬ್ದುಲ ಬೇಪಾರಿ, ಇಸ್ಮಾಯಿಲ ಚೌಧರಿ ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು ಉಪಸ್ಥಿತರಿದ್ದರು.

ಪೋಟೊ:
ಘಟಪ್ರಭಾ: ಬಕ್ರೀದ್ ಹಬ್ಬದ ನಿಮಿತ್ತ ಪೋಲಿಸ ಠಾಣೆಯಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ಮಾತನಾಡುತ್ತಿರುವ ಪಿಎಸ್ ಐ ಎನ್.ಆರ್ ನರಳೆ

09/06/2024

ಒಂಬತ್ತು ಜನರ ರಕ್ಷಣೆ ಓರ್ವ ನಾಪತ್ತೆ...!

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದ ಘಟಪ್ರಭಾ ನದಿ ಸೇತುವೆ ಮುಳುಗಡೆಯಾಗಿದೆ. ಟ್ರ್ಯಾಕ್ಟರ್ ಮೂಲಕ ಸೇತುವೆ ದಾಟುತ್ತಿದ್ದ ಹತ್ತು ಜನ ಕಾರ್ಮಿಕರ ಪೈಕಿ ಒಂಬತ್ತು ಜನ ನದಿಯ ದಡ ಸೇರಿ ಬದುಕಿದ್ದು ಓರ್ವ ಕಾರ್ಮಿಕ ನಾಪತ್ತೆಯಾಗಿದ್ದಾನೆ ಈ ಕಾರ್ಮಿಕರು ಕೊಕಲಕತ್ತಾ ಮೂಲದವರಾಗಿದ್ದು ಹುಬ್ಬಳ್ಳಿಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಾಧಿಯಲ್ಲಿ ಹೈ- ಪವರ್ ಲೈನ್ ಎಳೆಯುವ ಕೆಲಸ ನಡೆಯುತ್ತಿದೆ.

08/06/2024

ಮಹಾರಾಷ್ಟ್ರ ಹಾಗೂ ನಿಪ್ಪಾಣಿ ತಾಲೂಕಿನಾದ್ಯಂತ ಭಾರಿ ಮಳೆ ಆಗುತ್ತಿರುವ ಕಾರಣ ನದಿ ಹಳ್ಳ ಕೊಳ್ಳಗಳಿಗೆ ಕಳೆ ಬಂದಿದೆ!!

07/06/2024

ಇದು ಯಾವುದೇ ಜಲಪಾತ ಅಥವಾ ಪ್ರವಾಸಿ ತಾಣ ಅಲ್ಲ ಬೆಳಗಾವಿ ಸಮೀಪ ಸುಳೇಭಾವಿ ಹತ್ತಿರ ಬಳ್ಳಾರಿ ನಾಲಾದ ಹರಿಯುವ ನೀರಿನಲ್ಲಿ ಕಾರ್ಖಾನೆಗಳ ರಾಸಾಯನಿಕಗಳು ಕೂಡಿದ್ದರಿಂದ ತಯಾರಾದ ರಸಾಯನಿಕ ಫೋಮ್ (chemical foam,) ಇದು ಹೆಚ್ಚಾಗಿ ಬೆಂಗಳೂರು ಭಾಗದ ಕೆರೆಗಳಲ್ಲಿ ಕಂಡುಬರುವತ್ತದೆ.

ನೀರಿನಲ್ಲಿ ರಾಜಕೀಯ!!
27/05/2024

ನೀರಿನಲ್ಲಿ ರಾಜಕೀಯ!!

NMMS ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ!!**********************************************ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರ...
23/05/2024

NMMS ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ!!
**********************************************
ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಶಿಂದಿಕುರಬೇಟ ಮಾಧ್ಯಮಿಕ ಪ್ರೌಢ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿಗಳಾದ ಪ್ರವೀಣ ಶಂಕರ ತೋಟಗೇರ ಹಾಗೂ ಪ್ರಜ್ವಲ ಆನಂದ ಕಿಲಾರಿ 2023-24 ನೇ ಸಾಲಿನ *NMMS* ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ರಾಷ್ಟ್ರೀಯ ಪ್ರತಿಭಾನ್ವೇಷಣೆಯು 4 ವರ್ಷ ನೀಡುವ ಸ್ಕಾಲರಶೀಪಗೆ ಅರ್ಹರಾಗಿರುತ್ತಾನೆ.

ಪ್ರೌಢಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಯ ಸಾಧನೆಗೆ ಶಾಲೆಯ SDMC ಅಧ್ಯಕ್ಷರಾದ ಶ್ರೀ ಜ್ಯೋತೆಪ್ಪ ಬಂತಿ ಹಾಗೂ ಮುಖ್ಯೋಪಾಧ್ಯಾಯ ಪಿ.ಎಚ್.ಗೋಸಬಾಳ, ಸರ್ವ ಸದಸ್ಯರು, ಸಹ ಶಿಕ್ಷಕರು, ಶಾಲಾ ಸಿಬ್ಬಂದಿ ವರ್ಗದವರು ವಹರ್ಷ ವ್ಯಕ್ತಪಡಿಸಿದ್ದಾರೆ.

ಪುರಸಭೆಯಾದರು ಬಗೆಹರಿಯದ ಸಮಸ್ಯೆಗಳು! ಕಿತ್ತು ಹೋಗುತ್ತಿರುವ ಪೇವರ್ಸ್ ಗಳಿಗೆ ದುರಸ್ತಿ ಭಾಗ್ಯ ಯಾವಾಗ! ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಜನರ...
21/05/2024

ಪುರಸಭೆಯಾದರು ಬಗೆಹರಿಯದ ಸಮಸ್ಯೆಗಳು!

ಕಿತ್ತು ಹೋಗುತ್ತಿರುವ ಪೇವರ್ಸ್ ಗಳಿಗೆ ದುರಸ್ತಿ ಭಾಗ್ಯ ಯಾವಾಗ!

ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಜನರ ಪರದಾಟ!

ರಸ್ತೆ ಅತಿಕ್ರಮನ ತಡೆಯುವ ಹೊಣೆಗಾರಿಕೆ ಯಾರಿಗೆ!
*************************************************
ಘಟಪ್ರಭಾ: ಸ್ಥಳೀಯ ಪಟ್ಟಣ ಪಂಚಾಯತಿ ಈಗ್ ಪುರಸಭೆಯಾಗಿ ಮೆಲ್ದರ್ಜೆಗೆರಿ ಎಲ್ಲ ಕರಗಳು ಸಾಕಷ್ಟು ಹೆಚ್ಚಾದರೂ ಸಹ ಪಟ್ಟಣದ ಜನರ ಸಮಸ್ಯೆಗಳು ಮಾತ್ರ ಬಗೆ ಹರಿಯುವ ಕಾಲ ಕೂಡಿ ಬರುತ್ತಿಲ್ಲ.

ಕೆಲವೂಂದು ಓಣಿಗಳಲ್ಲಿ ಪೇವರ‍್ಸ ಅಳವಡಿಸಲಾಗಿದ್ದು ಕೆಳಗಿನ ಭರ್ತಿ ಸರಿಯಾಗಿ ಇಲ್ಲದ ಕಾರಣ ಆ ಗಲ್ಲಿಯಲ್ಲಿ ದ್ವಿಚಕ್ರ ವಾಹನ, ನಡೆದುಕೊಂಡು ಹೊದರೂ ಪೇವರ‍್ಸ ಕೆಲಗಿನ ರಾಡಿ ನೀರು ಮೈಯಲ್ಲ ಸಿಡಿಯುತ್ತಿದೆ. ಕೆಲವೂಂದು ರಸ್ತೆಗಳಿಗೆ ಹಾಕಿದ ಪೇವರ‍್ಸಗಳಿಗೆ ದಂಡೆಗಳಿಗೆ ಸರಿಯಾಗಿ ಸೀಮೆಂಟ ಹಾಕದಿರುವ ಕಾರಣ ಪೇವರ‍್ಸ ಕಿತ್ತು ತಗ್ಗು ಬಿದ್ದಿವೆ. ಕೆಲವೂಂದು ಕಡೆ ಅವೈಜ್ಞಾನಿಕ ಪೇವರ‍್ಸ ಕಾಮಗಾರಿಯಿಂದ ಅನೇಕ ಮನೆಗಳ ಮುಂದೆ ನೀರು ನಿಂತು ಹೊರಗೆ ಬರದಂತಾಗಿದೆ.

ಘಟಪ್ರಭಾದಲ್ಲಿನ ಮುಖ್ಯ ರಸ್ತೆ ಇಲ್ಲಿಯ ಜನರಿಗೆ ಸಂಚರಿಸಲು ಒಂದೇ ರಸ್ತೆ ಇದ್ದು ಅದರ ಅಕ್ಕ ಪಕ್ಕದಲ್ಲಿ ನೂರಾರು ಅಂಗಡಿಕಾರರು ತಮ್ಮ ಉದ್ಯೋಗಗಳನ್ನು ನಡೆಸುತ್ತಿದ್ದಾರೆ ಇದರಿಂದ ಟ್ರಾಪಿಕ್ ಸಮಸ್ಯೆಯಾಗುತ್ತಿದೆ. ಈ ಹಿಂದೆ ಟ್ರಾಫಿಕ ಸಮಸ್ಯೆಯಿಂದ ಮುಕ್ತವಾಗಲು ಇಲ್ಲಿನ ಕಾಯಿಪಲ್ಲೆ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲಾಯಿತು. ಆದರೆ ಖಾಲಿಯಾದ ರಸ್ತೆಯನ್ನು ಅಕ್ಕ ಪಕ್ಕದ ಅಂಗಡಿಕಾರರು ತಮ್ಮ ಮನಸ್ಸಿಗೆ ಬಂದಷ್ಟು ಅತೀಕ್ರಮಿಸಿ ತಮ್ಮ ಅಂಗಡಿಗಳನ್ನು ಮುಂದಕ್ಕೆ ತಂದು ವ್ಯಾಪಾರ ನಡೆಸುತ್ತಿರುವ ಕಾರಣ ಟ್ರಾಫಿಕ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

ಇಲ್ಲಿಯ ಮುಖ್ಯ ರಸ್ತೆ ಬೇವಾರಸಾ ಆಗಿದ್ದು, ಇಲ್ಲಿ ಅತೀಕ್ರಮಣಕಾರರಿಗೆ ಯಾರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ. ರಸ್ತೆಯನ್ನು ಅತೀಕ್ರಮಿಸಿ ಅನೇಕ ವಡಾ ಪಾವ, ಗೋಬಿ ಮಂಚೂರಿ, ಹಣ್ಣಿನ ಅಂಗಡಿಗಳು ಪ್ರಾರಂಭಿಸಲಾಗಿದೆ. ಇದರಿಂದ ಸಂಜೆ ಹಾಗೂ ಮುಂಜಾನೆ ಸಾಕಷ್ಟು ಟ್ರಾಪಿಕ ಉಂಟಾಗಿ ವಾಹನ ಸವಾರರು ಪರದಾಡುಂತಾಗಿದೆ.

ವೃತ್ತದ ಅಗಲೀಕರಣ: ಪಕ್ಕದ ಹುಕ್ಕೇರಿ, ರಕ್ಷಿ, ಶಿರಢಾಣ, ಸಂಕೇಶ್ವರ, ಗೋಕಾಕ ನಗರಗಳಲ್ಲಿ ವೃತ್ತಗಳು ಹಾಗೂ ರಸ್ತೆಗಳು ಅಗಲಿಕರಣಗೊಂಡು ಸುಂದರವಾಗಿ ಕಾಣುವ ಜೊತೆಗೆ ಜನರ ಸಂಚಾರಕ್ಕೆ ಅನುಕೂಲವಾಗಿದೆ. ಈ ಭಾಗ್ಯ ನಮ್ಮ ಪಟ್ಟಣಕ್ಕೆ ಯಾವಾಗ ಬರುತ್ತದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಪಟ್ಟಣದ ಮೃತ್ಯುಂಜಯ ವೃತ್ತದಲ್ಲ್ಲಿಯೂ ಹಣ್ಣು ಮಾರುವವರು, ಹೂವು ಮಾರುವವರು, ಸಣ್ಣ ಸಣ್ಣ ಡಬ್ಬಾಗಳು ತಮಗೆ ಬೇಕಾದ ಹಾಗೆ ವ್ಯಾಪಾರ ಮಾಡುತ್ತಿದ್ದಾರೆ. ಇವರನ್ನು ಪ್ರಶ್ನಿಸುವವರೆ ಇಲ್ಲವಾಗಿದ್ದು, ಈ ಸಣ್ಣ ಪುಟ್ಟ ಅಂಗಡಿಕಾರರಿಂದ ವೃತ್ತದಲ್ಲಿ ದಿನನಿತ್ಯ ಟ್ರಾಫಿಕ ಸಮಸ್ಯೆ ಎದುರಾಗುತ್ತಿದೆ.

ಸ್ವಛ್ಛವಾಗದ ಚರಂಡಿಗಳು: ಚರಂಡಿಗಳ ಅಕ್ಕ ಪಕ್ಕದಲ್ಲಿ ಸಾಕಷ್ಟು ಗಿಡ ಗಂಟಿ ಬೆಳೆದಿದ್ದು ಚರಂಡಿಗಳು ತುಂಬಿ ತುಳುಕುತ್ತಿವೆ. ಸ್ಚಚ್ಛಗೊಳಿಸಿದ ಚರಂಡಿಗಳ ತ್ಯಾಜ್ಯವನ್ನು ಕೂಡಲೇ ವಿಲೆವಾರಿ ಮಾಡದೇ ಇರುವ ಕಾರಣ ಜನರಿಗೆ ಸಾಕಷ್ಟು ತೂಂದರೆಯಾಗುತ್ತಿದೆ. ಈ ಕುರಿತು ಪುರಸಭೆ ಸಿಬ್ಬಂದಿಗಳಿಗೆ ಅನೇಕ ಬಾರಿ ಹೇಳಿದರೂ ಸಿಬ್ಬಂದಿಗಳು ಜನರಿಗೆ ಸ್ಪಂದಿಸುತ್ತಿಲ್ಲ.

ಪುರಸಭೆಗೆ ಕಟ್ಟಡ ಇಲ್ಲ: ಪುರಸಭೆಯಾಗಿ ಪರಿವರ್ತನೆಗೊಂಡ ಪಟ್ಟಣಕ್ಕೆ ಪುರಸಭೆಗೆ ತಕ್ಕಂತೆ ಅಗತ್ಯ ಕಟ್ಟಡ ವ್ಯವಸ್ಥೆ ಇಲ್ಲಾ. ಹೊಸ ಕಟ್ಟಡಕ್ಕೆ ಹಣ ತೆಗೆದಿಟ್ಟಿದ್ದರೂ ಸಹ ಕಟ್ಟಡಕ್ಕೆ ಸೂಕ್ತ ಜಾಗ ಇಲ್ಲಾ. ಮೂಲ ಕಛೇರಿ ಕಛೇರಿಯ ಹಳೆ ಕಟ್ಟಡದಲ್ಲಿ ನಡೆದರೆ ಧುಪದಾಳ ಭಾಗದ ಕಛೇರಿಯನ್ನು ಧುಪದಾಳ ಹಳೆ ಕಛೇರಿಯಲ್ಲಿ ನಡೆಸಲಾಗುತ್ತಿದೆ.

ಕಸದಲ್ಲಿ ಬಿದ್ದ ಕಸದ ಡಬ್ಬಿಗಳು: ಮನೆ ಮನೆಗೆ ಹಂಚಲು ಎಂದು ಪಟ್ಟಣ ಪಂಚಾಯತಿ ಸಮಯದಲ್ಲಿ ಸುಮಾರು ೬೦೦ ಕ್ಕೂ ಹೆಚ್ಚು ಕಸದ ಡಬ್ಬಿಗಳನ್ನು ಖರೀದಿ ಮಾಡಿದ್ದು, ಈ ಸದರಿ ಡಬ್ಬಿಗಳನ್ನು ಇಲ್ಲಿಯ ವರೆಗೆ ಹಂಚದೆ ಕಛೇರಿಯ ಗೋಡಾವನದಲ್ಲಿ ಎಸೆದಿದ್ದಾರೆ. ಈ ಡಬ್ಬಿಗಳನ್ನು ಈ ರೀತಿ ಗೋಡಾವನದಲ್ಲಿ ಎಸೆಯುದಾದರೆ ಅಷ್ಟೊಂದು ಹಣ ಖರ್ಚು ಮಾಡುವ ಅವಶ್ಯಕತೆ ಏನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

4 ವರ್ಷ ಕಳೆದರೂ ನಡೆಯದ ಚುನಾವಣೆ: ಪಟ್ಟಣ ಪಂಚಾಯತಿಯ ಅವದಿ ಮುಗಿದು ನಾಲ್ಕು ವರ್ಷ ಕಳೆದರೂ ಚುನಾವಣೆ ಆಗುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು ಕುಂಟ ನೆಪ ಹೇಳುತ್ತ ಕಾಲಕಳೆಯುತ್ತಿದ್ದಾರೆ. ವಾರ್ಡಗಳ ವಿಂಗಡನೆಯಾಗಿದ್ದು, ಮತದಾರರ ಯಾದಿ ಮತ್ತು ಕೆಟೆಗರಿ ಪೂರ್ಣಗೊಂಡಿಲ್ಲ ಆದರೂ ಇತ್ತಕಡೆಗೆ ಯಾವುದೇ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

ಪುರಸಭೆಗೆ ಆಡಳಿತ ಮಂಡಳಿ ಇಲ್ಲದೆ ತಮ್ಮ ಕೆಲಸ ಕಾರ್ಯುಗಳಿಗಾಗಿ ಜನರು ಪರದಾಡುವಂತಾಗಿದೆ. ಪುರಸಭೆಯ ಪರಿಸ್ಥಿತಿ ಈ ರೀತಿ ಇದ್ದರೂ ಪುರಸಭೆ ಹಿಂದಿನ ಮುಖ್ಯಾಧಿಕಾರಿ ಹಾಗೂ ಈಗಿನ ಮುಖ್ಯಾಧಿಕಾರಿ ಮತ್ತು ಸ್ಥಳೀಯ ಶಾಸಕರು ಕಣ್ಣು ಮುಚ್ಚಿ ಕುಳಿತ್ತಿದ್ದು ಏಕೆ ಎಂಬ ಪ್ರಶ್ನೇಗೆ ಸಾರ್ವಜನಿಕರಿಗೆ ಉತ್ತರ ದೊರೆಯಬೇಕಿದೆ.

ಪೋಟೋ:
ಘಟಪ್ರಭಾ: ಪುರಸಭೆ ರಸ್ತೆಗಳಿಗೆ ಹಾಕಲಾಗಿರುವ ಪೇವರ‍್ಸಗಳು ಕಿತ್ತು ಹೋಗುತ್ತಿದ್ದರೂ ಕ್ಯಾರೆ ಎನ್ನದ ಅಧಿಕಾರಿಗಳು.

ಪೋಟೋ:
ಘಟಪ್ರಭಾ: ಪುರಸಭೆ ರಸ್ತೆಗಳಿಗೆ ಹಾಕಲಾಗಿರುವ ಪೇವರ‍್ಸಗಳು ಕಿತ್ತು ಹೋಗುತ್ತಿರುವುದು.

ಪೋಟೋ:
ಘಟಪ್ರಭಾ: ಪುರಸಭೆಯ ವ್ಯಾಪ್ತಿ ರಸ್ತೆಗಳ ಪಕ್ಕ ಕಸ ಏಸೆಯಲಾಗುತ್ತಿದ್ದು, ಜನರು ಸಂಚರಿಸಲು ಪರದಾಡುವಂತಾಗಿದೆ.

ಪೋಟೋ:
ಘಟಪ್ರಭಾ: ಪುರಸಭೆಯ ವ್ಯಾಪ್ತಿ ರಸ್ತೆಗಳ ಚರಂಡಿಗಳು ಸ್ವಚ್ಛಗೊಳ್ಳದೇ ಕಸದಿಂದ ತುಂಬಿರುವುದು.

ಇದು ಸಿಂಗಾಪುರ್ ಅಲ್ಲ ಶಿಂಗಳಾಪೂರ
13/05/2024

ಇದು ಸಿಂಗಾಪುರ್ ಅಲ್ಲ ಶಿಂಗಳಾಪೂರ

12/05/2024

ಬೆಳಗಾವಿಯ ಖಾಸಬಾಗ್ ಬಜಾರ್ ದಲ್ಲಿ ರವಿವಾರ ಸಂಜೆ ಸುರಿದ ಮಳೆಗೆ ಬಡ ಮಾರಾಟಗಾರರ ತಮ್ಮ ಎಲ್ಲಾ ಉತ್ಪನ್ನಗಳನ್ನು ಅವರ ಕಣ್ಮುಂದೆ ನೀರಿನ ಕೊಚ್ಚಿ ಹೋದರು ಅಸಹಾಯಕರಾಗಿ ನಿಂತು ಮರುಗಿದರು. !!

Address

Ghataprabha, Tq:Goka, Dist: Belgaum
Ghataprabha
591306

Alerts

Be the first to know and let us send you an email when Suvarnsuddi.com posts news and promotions. Your email address will not be used for any other purpose, and you can unsubscribe at any time.

Videos

Share

Category


Other Ghataprabha media companies

Show All

You may also like