ಬೇಲೂರು ನ್ಯೂಸ್
#ಅಧ್ಯಕ್ಷ_ಸ್ಥಾನ_ಇರುವಷ್ಟು_ಕೆಲಸ_ಅವಿರತ
ರಾಜಕೀಯವಾಗಿ ಅಧಿಕಾರ ವಿಕೇಂದ್ರೀಕರಣ ಸಾಮಾನ್ಯ, ನಾನು ಅಧ್ಯಕ್ಷನಾಗಿ ಇರುವಷ್ಟು ದಿನ ಬೇಲೂರು ಪಟ್ಟಣದ ಸಮಗ್ರ ಅಭಿವೃದ್ಧಿ ಬದ್ಧವಾಗಿದ್ದು ಈ ಬಗ್ಗೆ ಯಾವ ಸಂಶಯ ಬೇಡವೆಂದು ಬೇಲೂರು ಪುರಸಭಾ ಅಧ್ಯಕ್ಷ ಸಿ.ಎನ್. ದಾನಿ ಹೇಳಿದರು.
ಬೇಲೂರು ನ್ಯೂಸ್
#ಮಲೇರಿಯಾ_ಮನುಕುಲಕ್ಕೆ_ಶಾಪ_ನಿರ್ಮೂಲನೆಗೆ_ಒತ್ತು
ಮನುಕುಲಕ್ಕೆ ಶಾಪವಾಗಿರುವ ಮಲೇರಿಯಾ ವಿರುದ್ಧ ಸರಕಾರ ವಿವಿಧ ರೀತಿಯಲ್ಲಿ ಹೋರಾಟ ಮಾಡುತ್ತಿದೆ. ಭಾರತ ಮಲೇರಿಯಾ ಮುಕ್ತವಾಗಬೇಕು ಎಂದು ಕೇಂದ್ರ ಸರಕಾರ ಶ್ರಮಿಸುತ್ತಿದೆ. ಕರ್ನಾಟಕದಲ್ಲಿ ಮುಂದಿನದಲ್ಲಿ ಮಲೇರಿಯಾ ನಿರ್ಮೂಲನೆ ಆಗಬೇಕಿದೆ ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ತನ್ನ ಕಾರ್ಯಕ್ಷಮತೆ ಜೊತೆ ಸಾರ್ವಜನಿಕರ ಸಹಕಾರದಿಂದ ಮಲೇರಿಯಾ ನಿರ್ಮೂಲನೆ ಒತ್ತು ನೀಡಬೇಕು ಎಂದು ಪುರಸಭಾ ಅಧ್ಯಕ್ಷ ಸಿ.ಎನ್.ದಾನಿ ಹೇಳಿದರು.
ಬೇಲೂರು ನ್ಯೂಸ್
ಬೇಲೂರು ಶ್ರೀಚನ್ನಕೇಶವಸ್ವಾಮಿ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಹಾಗೂ ಸದಸ್ಯ ಮೋಹನಕುಮಾರ್ ಇವರನ್ನು ಬೇಲೂರು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಪ್ರಮುಖರು ಗೌರವಿಸಿದರು.
ಬೇಲೂರು ನ್ಯೂಸ್
#ಕೆರೆಗೆ_ಸೇರುತ್ತಿದ್ದ_ಯುಜಿಡಿ_ನೀರು_ನಿಲ್ಲಿಸಿ_ಕಾಮಗಾರಿ_ಪ್ರಾರಂಭಿಸಿದ_ಅಧಿಕಾರಿಗಳು.
ಕೆರೆಯ ನೀರಿಗೆ ಕಲುಷಿತ ನೀರು ಸೇರಿ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ಸಾವನ್ನಪ್ಪಿರುವಂತಹ ಘಟನೆ ಬೇಲೂರು ಪುರಸಭೆ ಕೂಗಳತೆ ದೂರದ ಕಳಸಿನ ಕೆರೆಯಲ್ಲಿ ನಡೆದಿರುವ ಬಗ್ಗೆ ನಮ್ಮ ವಾಹಿನಿಯಲ್ಲಿ ವಿಸ್ತ್ರತವಾಗಿ ವರದಿಯಾದ ಬೆನ್ನಲ್ಲೆ ನಮ್ಮ ವರದಿಗೆ ಸ್ಪಂದಿಸಿ ಬೇಲೂರು ಪುರಸಭಾ ಅಧ್ಯಕ್ಷರು ಹಾಗೂ ಪುರಸಭೆ ಅಧಿಕಾರಿಗಳು ಯುಜಿಡಿ ಕಾಮಗಾರಿ ಪ್ರಾರಂಭ ಮಾಡಿಸಿದ್ದಾರೆ.
ಬೇಲೂರು ನ್ಯೂಸ್
ಕಳೆದ ಹತ್ತಾರು ವರ್ಷಗಳಿಂದ ನಕಾಶೆ ಕಂಡ ದಾರಿಯನ್ನು ಒತ್ತುವರಿ ಮಾಡಿ ಕೃಷಿ ಚಟುವಟಿಕೆ ಮಾಡಲು ಅಡ್ಡಿಪಡಿಸುತ್ತಿದ್ದ ಭೂಮಾಲೀಕರ ಮನವೊಲಿಸಿ ಬದಲಿ ರಸ್ತೆಯನ್ನು ಬಿಡಿಸಿ ಕೊಡುವ ಮೂಲಕ ತಹಸೀಲ್ದಾರ್ ಮೋಹನ್ ಕುಮಾರ್ ರವರು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಬೇಲೂರು ನ್ಯೂಸ್
ಬೇಲೂರು ಮಿನಿವಿಧಾನಸೌಧದ ಆವರಣದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಪ್ರತಿಷ್ಠಾಪನಕ್ಕೆ ಪೂರಕವಾಗಿ ಪುತ್ಥಳಿಯ ಕೆಳಹಂತದ ವೇದಿಕೆಯನ್ನು ಬೆಂಗಳೂರಿನ ವಿಧಾನಸೌಧದ ಬಳಿ ಇರುವಂತೆ ನಿರ್ಮಿಸಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು.
ಬೇಲೂರು ನ್ಯೂಸ್
#ಸರಣಿ_ಅಪಘಾತದಿಂದ_೭_ಜನರಿಗೆ_ಪೆಟ್ಟು
ಹಾಸನದಿಂದ ಬೇಲೂರಿಗೆ ಬರುತ್ತಿದ್ದ ಬೆಂಗಳೂರು ಮೂಲಕ 3 ಕಾರುಗಳು ಸರಣಿ ಅಪಘಾತಕ್ಕೆ ಒಳಗಾಗಿದ್ದು 7 ಜನ ಪ್ರಯಾಣಿಕರು ಸಣ್ಣಪುಟ್ಟ ಪೆಟ್ಟಿನೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೇಲೂರು ನ್ಯೂಸ್
#ದುರಸ್ತಿಯಾಗದ_ಬೇಲೂರು_ದೇಗುಲದ_ಪುರಾತತ್ವ_ಇಲಾಖೆ_ಸಿಸಿ_ಕ್ಯಾಮರಾ
ವಿಶ್ವ ವಿಖ್ಯಾತ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವಕ್ಕೆ ಕೇವಲ 9 ದಿನ ಬಾಕಿಯಿದೆ. ಯುಗಾದಿ ಹಬ್ಬದ ದಿನದಿಂದಲೆ ಪ್ರತಿನಿತ್ಯ ದೇವರ ಉತ್ಸವಗಳು ಜರುಗುತ್ತಿದೆ. 2 ವರ್ಷದಿಂದ ಕೋವಿಡ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ದೊಡ್ಡರಥೋತ್ಸವ ಈ ವರ್ಷ ನಡೆಯಲಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಲಿದೆ, ಈ ನಡುವೆ ಹಿಜಾಬ್, ಅನ್ಯಧರ್ಮೀಯರಿಗೆ ವ್ಯಾಪಾರ ವಹಿವಾಟು ನಿಷೇಧದ ಚರ್ಚೆಗಳು ಸಹ ನಡೆದಿದ್ದು ಇದಕ್ಕೆ ಪೂರಕವಾದ ರಕ್ಷಣಾ ವ್ಯವಸ್ಥೆ ಆಗಬೇಕಿದೆ.
ಬೇಲೂರು ನ್ಯೂಸ್
#ಬಿಜೆಪಿ_ನಾಯಕರ_ಸಮ್ಮುಖದಲ್ಲೇ_ಹಿಗ್ಗಾಮುಗ್ಗ_ವಾಗ್ದಾಳಿ
ಬೇಲೂರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಬಾಬು ಜಗಜೀವನ ರಾಮ್ ಮತ್ತು ಕೈವಾರ ತಾತಯ್ಯ ನವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ, ಬಿಜೆಪಿ ನಾಯಕರೇ ಉಪಸ್ಥಿತಿರುವ ಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹಿಗ್ಗಮುಗ್ಗ ವಾಗ್ದಾಳಿ ನಡೆಸಿದಲ್ಲದೆ, ಬೇಲೂರು ಶಾಸಕರು ಕೂಡ ಪರಿಶಿಷ್ಟ ಜಾತಿ ಪಂಗಡಕ್ಕೆ ಸಿಗುವ ಸವಲತ್ತುಗಳನ್ನು ಸರ್ಕಾರದಿಂದ ತರಲು ವಿಫಲವಾಗಿದ್ದಾರೆ. ರಾಜ್ಯದಲ್ಲಿ ಧರ್ಮಾಂಧತೆಯ ವಿಷ ಬೀಜ ಬಿತ್ತುವ ಮೂಲಕ ಜನರ ಸೌಹಾರ್ದತೆಗೆ ಧಕ್ಕೆ ತರುತ್ತದೆ. ಅಭಿವೃದ್ಧಿ ಮಂತ್ರದ ಬದಲು ಹಿಜಾಬ್, ಹಲಾಲ್, ಮೈಕ್, ವ್ಯಾಪಾರ ಹೀಗೆ ನಾನಾ ಸಲ್ಲದ ವಿಚಾರಗಳಿಂದ ಕೋಮುಗಲಭೆಗೆ ಕಾರಣವಾಗಿರುವ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಿ ಎಂದು ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬೇಲೂರು ನ್ಯೂಸ್
ವಸ್ತುಪ್ರದರ್ಶನ ನಡೆಸಲು ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ವಸ್ತುಪ್ರದರ್ಶನ ನಡೆಸಲಾಗುತ್ತಿದೆ ಎಂದು ಆಯೋಜಕರಾದ ಗಿರೀಶ್ ತಿಳಿಸಿದರು.
ಬೇಲೂರು ನ್ಯೂಸ್
ಕಳೆದ ಎರಡು ವರ್ಷಗಳಿಂದ ಕೋವಿಡ್ ಆತಂಕದ ನಡುವೆ ನಡೆದ ಎಸ್ಸೆಸ್ಸೆಲಿ ಪರೀಕ್ಷೆಗೆ ಸದ್ಯ ಹಿಜಾಬ್ ವಿವಾದ ಸಂಘರ್ಷದ ಹಾದಿ ಹಿಡಿದ್ದು, ಪ್ರಸಕ್ತ ಸಾಲಿನ ೧೦ ನೇ ತರಗತಿ ಪರೀಕ್ಷೆಗೂ ಗ್ರಹಣ ಛಾಯೆ ಮೂಡಿತ್ತು. ಈ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಂಡ ಗಟ್ಟಿ ನಿರ್ಧಾರದಿಂದ ಎಸ್ಸೆಸ್ಸೆಲಿ ಪರೀಕ್ಷೆ ಪೊಲೀಸರ ಸೂಕ್ತ ಭದ್ರತೆಯೊಂದಿಗೆ ಶಾಂತಿಯುತವಾಗಿ ನಡೆದಿದ್ದು, ತಾಲ್ಲೂಕಿನಲ್ಲಿ ಒಟ್ಟು ೧೯ ವಿದ್ಯಾರ್ಥಿಗಳು ಗೈರಯ ಹಾಜರಿ ಹೊಂದಿದ್ದಾರೆ.
ಬೇಲೂರು ನ್ಯೂಸ್
ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಭಾರ ಎಂಬ ಭಾವನೆ ಇನ್ನೂ ಸಮಾಜದಿಂದ ದೂರವಾಗಿಲ್ಲ, ಮದುವೆಯ ನಿರ್ದಿಷ್ಟ ವಯಸ್ಸಿಗೆ ಮೊದಲೇ ಬಾಲ್ಯ ವಿವಾಹ ಮಾಡಿಸಿ, ಕೈ ತೊಳೆದುಕೊಳ್ಳುವ ಸಾಮಾಜಿಕ ಪಿಡುಗು ಇಂದಿಗೂ ಜೀವಂತವಾಗಿದೆ. ಈ ನಿಟ್ಟಿನಲ್ಲಿ ಬಾಲ್ಯವಿವಾಹ ನಿಷೇಧ ಬಗ್ಗೆ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಬೇಲೂರು ತಹಸೀಲ್ದಾರ್ ಮೋಹನಕುಮಾರ್ ತಿಳಿಸಿದರು.
ಬೇಲೂರು ನ್ಯೂಸ್
ಹೊಸ ಪ್ರಯತ್ನದೊಂದಿಗೆ ನಿಮ್ಮ ಮುಂದೆ,,,,,,, ಬೇಲೂರು ನ್ಯೂಸ್📺
ಬೇಲೂರು ನ್ಯೂಸ್
ಬೇಲೂರು ಯಗಚಿ ಜಲಾಶಯದ ಸಮೀಪ ನೂರಾರು ಎಕರೆಯಲ್ಲಿ ಬಳ್ಳೂರು ಉಮೇಶ್ ಅವರು ಹಂತ ಹಂತವಾಗಿ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿದ್ದು ಕಿಡಿಗೇಡಿಗಳು ಹಚ್ಚಿರುವ ಬೆಂಕಿಗೆ ಸಾಕಷ್ಟು ಗಿಡಗಳು ಸುಟ್ಟು ಹೋಗಿವೆ.
ಬೇಲೂರು ನ್ಯೂಸ್
ಹಚ್ಚಹಸುರಿನ ಗಿಡಮರಗಳ ನಡುವೆ ಕಾಫಿ ಹೂವು ಅರಳಿ ಕಂಗೊಳಿಸುತ್ತಿದೆ. ಗಿಡದ ತುಂಬ ಹಸಿರು ಎಲೆಗಳ ನಡುವೆ ಸೂಜಿ ಮಲ್ಲಿಗೆ ಪೋಣಿಸಿದಂತೆ ಹೂವು ಅರಳುತ್ತಿರುವ ಸಂತಸ ಒಂದೆಡೆಯಾದರೆ ಕಾಡಾನೆ ಹಾವಳಿ ಕಾಫಿ ಬೆಳೆಗಾರರನ್ನು ಚಿಂತೆಗೀಡುಮಾಡಿದೆ .
ಬೇಲೂರು ನ್ಯೂಸ್
ಶಿಕಾರಿಪುರ ತಾಲ್ಲೂಕಿನ ತೊಗರ್ಸಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಿರೇಕೆರೂರಿನ ವಕೀಲರಾದ ಜಯದೇವ ಬಿ.ಕೆರೂಡಿ ಅವರ ಮೇಲೆ ಶಿರಾಳಕೊಪ್ಪ ಠಾಣೆ ಪೊಲೀಸರು ಹಲ್ಲೆ ಮಾಡಿದ್ದಲ್ಲದೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಬೇಲೂರು ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬೇಲೂರು ನ್ಯೂಸ್
ಇತ್ತೀಚೆಗೆ ಬೇಲೂರು ಪುರಸಭೆ ಅಧ್ಯಕ್ಷ ದಾನಿ ಅಧಿಕಾರಿಗಳ ಜೊತೆ ವಾರ್ಡ್ ಸಭೆಗಳನ್ನು ನಡೆಸಿ ವಾರ್ಡ್ ನಂಬರ್ 13 ರ ಜೆಪಿ ನಗರದ ನಿವಾಸಿಗಳು ಸುಮಾರು 15 ವರ್ಷಗಳಿಂದ ಒಳಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ನೀರು ಹರಿಯುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಪತಿಶೀಲಿಸಿದ ನಂತರ ಸ್ಥಳೀಯ ನಿವಾಸಿಗಳ ಮನವೊಲಿಸಿ ಸುಮಾರು ವರ್ಷಗಳಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದ್ದ ಸಮಸ್ಯೆಗೆ ಮುಕ್ತಿ ದೊರಕಿಸಿಕೊಟ್ಟಿದ್ದಾರೆ.
ಬೇಲೂರು ನ್ಯೂಸ್
ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಬ್ಯಾದನೆ ಗ್ರಾಮದ ಕೃಷ್ಣೇಗೌಡ ಎಂಬುವರು ಭಾನುವಾರ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.
ಬೇಲೂರು ನ್ಯೂಸ್
ಗೋಶಾಲೆ, ವೃದ್ಧಾಶ್ರಮ, ಅನಾಥಾಶ್ರಮದಂತಹ ಅನೇಕಾನೇಕ ಸಮಾಜ ಮುಖಿ ಕೆಲಸಗಳನ್ನು ಮಾಡಿ ವಾಸ್ತವದಲ್ಲಿ ಅಪ್ಪು ನಮ್ಮನ್ನು ಅಗಲಿದರೂ ಸಹ ಅವರ ಸೇವಾ ಕಾರ್ಯ ಬಹಳ ಜನರಿಗೆ ಮಾದರಿಯಾಗಿದೆ ಎಂದು ಬೇಲೂರು ತಹಸೀಲ್ದಾರ್ ಯು ಎಮ್ ಮೋಹನ್ ಕುಮಾರ್ ಹೇಳಿದರು.
ಬೇಲೂರು ನ್ಯೂಸ್
ಶಿಲ್ಪಕಲಾ ನಾಡು ಹಾಸನ ಮತ್ತು ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಗಡಿ ರೇಖೆಯಲ್ಲಿನ ಭದ್ರಕಾಳಿ ಬನ ತನ್ನದೆಯಾದ ಛಾಪು ಮೂಡಿಸುವ ಮೂಲಕ ಅಸಂಖ್ಯಾತ ಭಕ್ತರಿಗೆ ಭಕ್ತಿಯ ತಾಣವಾಗಿ, ಪ್ರವಾಸಿಗರಿಗೆ ರಮ್ಯ ತಾಣವಾಗಿರುವುದು ನಿಜಕ್ಕೂ ಅಗಮ್ಯವಾಗಿದೆ. ಇಂತಹ ರಮ್ಯ ತಾಣದಲ್ಲಿ ಕಂಡು ಬರುವ ಚೋಳರ ಕಾಳದ ಪುಷ್ಕರಣಿ(ಕಲ್ಯಾಣಿ) ಕಳೆದ ೨೦ ವರ್ಷಗಳ ಬಳಿಕ ಭರ್ತಿಯಾಗುವ ಮೂಲಕ ಗಂಗೋದ್ಬವಕ್ಕೆ ಕಾರಣವಾಗಿರುವುದು ಭಕ್ತ ಹರ್ಷ ಮುಗಿಲು ಮುಟ್ಟಿದೆ.