Bharat Vaibhav

Bharat Vaibhav NEWS& MEDIA

28/09/2022

ರಾಯಬಾಗ : ತಾಲೂಕಿನ ಹುಬ್ಬರವಾಡಿ ಗ್ರಾಮದ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸ್ವಚ್ಛತಾಹಿ ಸೇವಾ ಕಾರ್ಯಕ್ರಮ ಮಾಡುವ ಮೂಲಕ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಅದ್ಯಕ್ಷರು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದರು

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅವ್ವಕ್ಕಾ ಬಬಲೇಶ್ವರ,
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ಮಂಜುನಾಥ ಡೊಳ್ಳಿ,
ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸಹದೇವ ಬಡೋದೆ,
ಶ್ರೀ ಮಲಕಾರಿ ಕೊಟ್ರೆ,
ಹಾಗೂ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಗ್ರಾಮದ ಯುವಕರು ಪಾಲ್ಗೊಂಡಿದ್ದರು

ವರದಿ ಚಂದ್ರು ಮಾನೆ

ರಾಯಬಾಗ : ತಾಲೂಕಿನ ಹುಬ್ಬರವಾಡಿ ಗ್ರಾಮದ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸ್ವಚ್ಛತಾಹಿ ಸೇವಾ ಕಾರ್ಯಕ್ರಮ ಮಾಡುವ ಮೂಲಕ ಗ್ರಾಮ ಪಂಚಾಯತಿ ಸದಸ್ಯರು ...
28/09/2022

ರಾಯಬಾಗ : ತಾಲೂಕಿನ ಹುಬ್ಬರವಾಡಿ ಗ್ರಾಮದ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸ್ವಚ್ಛತಾಹಿ ಸೇವಾ ಕಾರ್ಯಕ್ರಮ ಮಾಡುವ ಮೂಲಕ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಅದ್ಯಕ್ಷರು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿದರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅವ್ವಕ್ಕಾ ಬಬಲೇಶ್ವರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ಮಂಜುನಾಥ ಡೊಳ್ಳಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸಹದೇವ ಬಡೋದೆ, ಶ್ರೀ ಮಲಕಾರಿ ಕೊಟ್ರೆ, ಹಾಗೂ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಗ್ರಾಮದ ಯುವಕರು ಪಾಲ್ಗೊಂಡಿದ್ದರು ವರದಿ ಚಂದ್ರು ಮಾನೆ

https://bharathvaibhav.com/cleanliness-service-program-in-hubbarwadi-village/

ರಾಯಬಾಗ : ತಾಲೂಕಿನ ಹುಬ್ಬರವಾಡಿ ಗ್ರಾಮದ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸ್ವಚ್ಛತಾಹಿ ಸೇವಾ ಕಾರ್ಯಕ್ರಮ ಮಾಡುವ ಮೂಲಕ ಗ್ರಾಮ ಪಂಚಾಯತ...

28/09/2022
https://bharathvaibhav.com/district-collector-nitesh-patil-was-felicitated-in-new-delhi-on-september-26/ #ಸೆ_26_ರಂದು_ನವದ...
28/09/2022

https://bharathvaibhav.com/district-collector-nitesh-patil-was-felicitated-in-new-delhi-on-september-26/

#ಸೆ_26_ರಂದು_ನವದೆಹಲಿಯಲ್ಲಿ_ಜಿಲ್ಲಾಧಿಕಾರಿ_ನಿತೇಶ್_ಪಾಟೀಲರಿಗೆ_ಗೌರವ_ಪ್ರದಾನ

ಬೆಳಗಾವಿ : ಕೇಂದ್ರ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಬೆಳಗಾವಿ ಜಿಲ್ಲೆಯು ದೇಶದಲ್ಲಿಯೇ ಹತ್ತನೇ ರ್ಯಾಂಕ್ ಗಳಿಸಿದೆ. ಕೇಂದ್ರ ಸರಕಾರದ ವತಿಯಿಂದ ಏಪ್ರಿಲ್ 12, 2022 ರಿಂದ ಹಮ್ಮಿಕೊಳ್ಳಲಾಗಿದ್ದ ಆಝಾದಿಸೇ ಅಂತ್ಯೋದಯ ತಕ್ (ಎ.ಎಸ್.ಎ.ಟಿ) ಅಭಿಯಾನವು 15ನೇ ಆಗಸ್ಟ್ 2022 ರಂದು ಮುಕ್ತಾಯಗೊಂಡಿತ್ತು. ಈ ಅಭಿಯಾನದಲ್ಲಿ ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 75 ಜಿಲ್ಲೆಗಳು ಭಾಗವಹಿಸಿದ್ದವು. ಈ ಅಭಿಯಾನದಲ್ಲಿ ಕೇಂದ್ರ ಸರಕಾರದ ಆಯ್ದ 9 ಇಲಾಖೆಗಳ 17 ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ನಾಗರಿಕರಿಗೆ ಹಾಗೂ ಫಲಾನುಭವಿಗಳಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಿ ಶೇ.84-85 ರಷ್ಟು ಸಾಧನೆಯನ್ನು ಬೆಳಗಾವಿ ಜಿಲ್ಲೆಯು ದಾಖಲಿಸಿತ್ತು. ಬೆಳಗಾವಿ ಜಿಲ್ಲೆಯ ಈ ವಿಶಿಷ್ಟ ಸಾಧನೆಯನ್ನು ಗುರುತಿಸಿದ ಕೇಂದ್ರ ಸರಕಾರವು ಗೌರವ ಸನ್ಮಾನ ಹಾಗೂ ಪ್ರಶಸ್ತಿ ಸ್ವೀಕರಿಸಲು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಹಾಗೂ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ ಅವರನ್ನು ಅವರನ್ನು ನವದೆಹಲಿಗೆ ಆಹ್ವಾನಿಸಿದೆ. ನವದೆಹಲಿಯ ಹ್ಯಾಬಿಟ್ಯಾಟ್ ಸೆಂಟರ್ ನಲ್ಲಿ ಸೆಪ್ಟೆಂಬರ್ 26 ರಂದು ಸನ್ಮಾನ ಸಮಾರಂಭ ನಡೆಯಲಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಆರೋಗ್ಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾರ್ಮಿಕ ಇಲಾಖೆ ಸೇರಿದಂತೆ ಒಟ್ಟಾರೆ 9 ಇಲಾಖೆಗಳ 17 ಯೋಜನೆಗಳ ಪ್ರಗತಿಯನ್ನು ಪರಿಗಣಿಸಿ ಈ ರ್ಯಾಂಕ್ ನೀಡಲಾಗಿರುತ್ತದೆ.

ಬೆಳಗಾವಿ : ಕೇಂದ್ರ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಬೆಳಗಾವಿ ಜಿಲ್ಲೆಯು ದೇಶದಲ್ಲಿಯೇ ಹತ್ತನೇ ರ್ಯಾಂಕ್ ಗಳಿಸಿ...
28/09/2022

ಬೆಳಗಾವಿ : ಕೇಂದ್ರ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಬೆಳಗಾವಿ ಜಿಲ್ಲೆಯು ದೇಶದಲ್ಲಿಯೇ ಹತ್ತನೇ ರ್ಯಾಂಕ್ ಗಳಿಸಿದೆ. ಕೇಂದ್ರ ಸರಕಾರದ ವತಿಯಿಂದ ಏಪ್ರಿಲ್ 12, 2022 ರಿಂದ ಹಮ್ಮಿಕೊಳ್ಳಲಾಗಿದ್ದ ಆಝಾದಿಸೇ ಅಂತ್ಯೋದಯ ತಕ್ (ಎ.ಎಸ್.ಎ.ಟಿ) ಅಭಿಯಾನವು 15ನೇ ಆಗಸ್ಟ್ 2022 ರಂದು ಮುಕ್ತಾಯಗೊಂಡಿತ್ತು. ಈ ಅಭಿಯಾನದಲ್ಲಿ ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 75 ಜಿಲ್ಲೆಗಳು ಭಾಗವಹಿಸಿದ್ದವು. ಈ ಅಭಿಯಾನದಲ್ಲಿ ಕೇಂದ್ರ ಸರಕಾರದ ಆಯ್ದ 9 ಇಲಾಖೆಗಳ 17 ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ನಾಗರಿಕರಿಗೆ ಹಾಗೂ ಫಲಾನುಭವಿಗಳಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಿ ಶೇ.84-85 ರಷ್ಟು ಸಾಧನೆಯನ್ನು ಬೆಳಗಾವಿ ಜಿಲ್ಲೆಯು ದಾಖಲಿಸಿತ್ತು....

https://bharathvaibhav.com/district-collector-nitesh-patil-was-felicitated-in-new-delhi-on-september-26/

ಬೆಳಗಾವಿ : ಕೇಂದ್ರ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಬೆಳಗಾವಿ ಜಿಲ್ಲೆಯು ದೇಶದಲ್ಲಿಯೇ ಹತ್ತನೇ ರ.....

https://bharathvaibhav.com/hindu-rashtra-sankalpane-abhiyan/ #ಹಿಂದೂ_ರಾಷ್ಟ್ರ_ಸಂಕಲ್ಪನೆ_ಅಭಿಯಾನದಿನಾಂಕ: 28.9.2022 ಹಿಂದೂ ಜನಜಾಗ...
28/09/2022

https://bharathvaibhav.com/hindu-rashtra-sankalpane-abhiyan/

#ಹಿಂದೂ_ರಾಷ್ಟ್ರ_ಸಂಕಲ್ಪನೆ_ಅಭಿಯಾನ

ದಿನಾಂಕ: 28.9.2022 ಹಿಂದೂ ಜನಜಾಗೃತಿ ಸಮಿತಿ ದ್ವಿದಶಕ-ಪೂರ್ಣಗೊಂಡಿರುವ ನಿಮಿತ್ತ ಬೆಳಗಾವಿ ಜಿಲ್ಲೆಯಲ್ಲಿ ಹಿಂದೂ ರಾಷ್ಟ್ರ ಸಂಕಲ್ಪನೆ ಅಭಿಯಾನ ನಡೆಯಿತು..

ಹಿಂದೂರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ಕಳೆದ 20 ವರ್ಷಗಳಿಂದ ಅವಿರತವಾಗಿ ಕಾರ್ಯನಿರತವಾಗಿರುವ ಹಿಂದೂ ಜನಜಾಗೃತಿ ಸಮಿತಿಯು ಸ್ಥಾಪನೆಗೊಂಡು 26 ಸಪ್ಟೆಂಬರ 2022 ರಂದು ಅರ್ಥಾತ್ ಘಟಸ್ಥಾಪನೆಯ ದಿನದಂದು 20 ವರ್ಷಗಳು ಪೂರ್ಣಗೊಂಡಿತು. ಈ ದ್ವಿದಶಕ-ಪೂರ್ಣಗೊಂಡಿರುವ ನಿಮಿತ್ತ ಸಂಪೂರ್ಣ ದೇಶಾದ್ಯಂತ ಸಮಿತಿಯ ವತಿಯಿಂದ ವ್ಯಾಪಕವಾಗಿ `ಹಿಂದೂ ರಾಷ್ಟ್ರ ಸಂಕಲ್ಪನೆ ಅಭಿಯಾನ’ ಕೈಕೊಳ್ಳಲಾಗುತ್ತಿದೆ.

8 ನವ್ಹೆಂಬರ 2022ರ ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಈ ಅಭಿಯಾನವನ್ನು ಜರುಗಿಸಲಾಗುವುದು ಎನ್ನುವ ಮಾಹಿತಿಯನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ ರಮೇಶ ಶಿಂದೆಯವರು ಇಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ಶ್ರೀ ಹೃಷಿಕೇಶ ಗುರ್ಜರ ಇವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಹಿಂದೂ ರಾಷ್ಟ್ರ ಸಂಕಲ್ಪನೆ ಅಭಿಯಾನದ ವಿವಿಧ ಉಪಕ್ರಮಗಳು!
`ಹಿಂದೂ ರಾಷ್ಟ್ರ ಸಂಕಲ್ಪನೆ ಅಭಿಯಾನ’ದಲ್ಲಿ `ಹಿಂದೂ ರಾಷ್ಟ್ರದ ಆವಶ್ಯಕತೆ’, `ಹಿಂದೂ ಧರ್ಮದ ಮಹಾನತೆ’, `ಶೌರ್ಯ ಜಾಗರಣೆಯ ಆವಶ್ಯಕತೆ’, `ಲವ್ ಜಿಹಾದ’, `ಹಲಾಲ ಜಿಹಾದ’ ಮುಂತಾದ ವಿಷಯಗಳ ಕುರಿತು ಸ್ಥಳೀಯ ಸ್ತರದಲ್ಲಿ ಉಪನ್ಯಾಸಗಳು, ಹಿಂದೂ ರಾಷ್ಟ್ರಜಾಗೃತಿಗೊಳಿಸುವ ಫಲಕ ಪ್ರದರ್ಶನ ಏರ್ಪಡಿಸುವುದು, ಮಂದಿರಗಳ ಮತ್ತು ಐತಿಹಾಸಿಕ ಸ್ಥಳಗಳ ಸ್ವಚ್ಛತೆ, ಮಹಿಳಾ ಸಂಘಟನೆಗಳಿಂದ ಉಪಕ್ರಮಗಳು ಅಂದರೆ ಮಹಿಳೆಯರಿಗಾಗಿ ಸ್ವಸಂರಕ್ಷಣೆ ಪ್ರಶಿಕ್ಷಣ ಉಪಕ್ರಮಗಳನ್ನು ಕೈಕೊಳ್ಳಲಾಗುವುದು.

ಇದಲ್ಲದೇ `ಹಿಂದೂ ರಾಷ್ಟ್ರ ಸಂಘಟನೆ ಸಮ್ಮೇಳನ’, `ವರ್ಧಂತಿ ದಿನ ಸಮಾರಂಭ’ `ಹಿಂದೂ ರಾಷ್ಟ್ರ ಪರಿಸಂವಾದ’, ಸಂಘಟನೆಗಳ ಸಭೆಗಳು, ವಕೀಲರುಗಳ ಸಭೆ ಮುಂತಾದ ಉಪಕ್ರಮಗಳನ್ನು ದೇಶಾದ್ಯಂತ ಕೈಕೊಳ್ಳಲಾಗುವುದು.

ಈ ಉಪಕ್ರಮಗಳಿಂದ ಹಿಂದೂ ಸಮಾಜದಲ್ಲಿ ಹಿಂದೂ ರಾಷ್ಟ್ರದ ಸಂಕಲ್ಪನೆ ದೃಢಗೊಳ್ಳಬೇಕು ಮತ್ತು ಹಿಂದೂ ಸಮಾಜ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಕಾರ್ಯಗತವಾಗಬೇಕು ಎನ್ನುವ ದೃಷ್ಟಿಯಿಂದ ಈ ಉಪಕ್ರಮಗಳನ್ನು ಸಿದ್ಧಪಡಿಸಲಾಗಿದೆ.

ಕಳೆದ 20 ವರ್ಷಗಳಿಂದ ನಿರಂತರವಾಗಿ ಕೈಕೊಂಡ ಜಾಗೃತಿಗಳಿಂದ ಹಿಂದೂಗಳ ಶ್ರದ್ಧಾಸ್ಥಾನಗಳ ವಿಡಂಬಣೆಗಳನ್ನು ತಡೆಗಟ್ಟಲು ರಾಜ್ಯಮಟ್ಟದಲ್ಲಿ ಮಾತ್ರವಲ್ಲ, ಭಾರತಾದ್ಯಂತ ಹಿಂದೂಗಳು ಕೃತಿಶೀಲರಾಗಿರುವುದು ಕಂಡು ಬಂದಿದೆ. ಧರ್ಮಶಿಕ್ಷಣ, ಧರ್ಮಜಾಗೃತಿ, ಹಿಂದೂ ಸಂಘಟನೆ, ರಾಷ್ಟ್ರರಕ್ಷಣೆ ಮತ್ತು ಧರ್ಮರಕ್ಷಣೆ ಈ ಪಂಚಸೂತ್ರಗಳ ಆಧಾರದಲ್ಲಿ ಸಮಿತಿಯ ವತಿಯಿಂದ ವರ್ಷವಿಡೀ ವಿವಿಧ ಉಪಕ್ರಮಗಳನ್ನು ದೇಶಾದ್ಯಂತ ಜರುಗಿಸಲಾಗುವುದು. ಈ ಎಲ್ಲ ಕಾರ್ಯಗಳು ಈಶ್ವರನ ಕೃಪೆ, ಸಂತರ ಆಶೀರ್ವಾದ ಮತ್ತು ಹಿಂದುತ್ವನಿಷ್ಠರ ಕೃತಿಶೀಲ ಸಹಭಾಗಿತ್ವದಿಂದ ಜರುಗುತ್ತಿದೆಯೆಂದು ಕೃತಜ್ಞತೆಯ ಭಾವವನ್ನು ಸಮಿತಿಯ ಶ್ರೀ ಹೃಷಿಕೇಶ ಗುರ್ಜರ ಇವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

#ವರದಿ_ಪ್ರಕಾಶ್_ಕುರಗುಂದ

ಬೆಳಗಾವಿ: ದಿನಾಂಕ: 28.9.2022 ಹಿಂದೂ ಜನಜಾಗೃತಿ ಸಮಿತಿ ದ್ವಿದಶಕ-ಪೂರ್ಣಗೊಂಡಿರುವ ನಿಮಿತ್ತ ಬೆಳಗಾವಿ ಜಿಲ್ಲೆಯಲ್ಲಿ ಹಿಂದೂ ರಾಷ್ಟ್ರ ಸಂಕಲ್ಪನೆ...
28/09/2022

ಬೆಳಗಾವಿ: ದಿನಾಂಕ: 28.9.2022 ಹಿಂದೂ ಜನಜಾಗೃತಿ ಸಮಿತಿ ದ್ವಿದಶಕ-ಪೂರ್ಣಗೊಂಡಿರುವ ನಿಮಿತ್ತ ಬೆಳಗಾವಿ ಜಿಲ್ಲೆಯಲ್ಲಿ ಹಿಂದೂ ರಾಷ್ಟ್ರ ಸಂಕಲ್ಪನೆ ಅಭಿಯಾನ ನಡೆಯಿತು.. ಹಿಂದೂರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ಕಳೆದ 20 ವರ್ಷಗಳಿಂದ ಅವಿರತವಾಗಿ ಕಾರ್ಯನಿರತವಾಗಿರುವ ಹಿಂದೂ ಜನಜಾಗೃತಿ ಸಮಿತಿಯು ಸ್ಥಾಪನೆಗೊಂಡು 26 ಸಪ್ಟೆಂಬರ 2022 ರಂದು ಅರ್ಥಾತ್ ಘಟಸ್ಥಾಪನೆಯ ದಿನದಂದು 20 ವರ್ಷಗಳು ಪೂರ್ಣಗೊಂಡಿತು. ಈ ದ್ವಿದಶಕ-ಪೂರ್ಣಗೊಂಡಿರುವ ನಿಮಿತ್ತ ಸಂಪೂರ್ಣ ದೇಶಾದ್ಯಂತ ಸಮಿತಿಯ ವತಿಯಿಂದ ವ್ಯಾಪಕವಾಗಿ `ಹಿಂದೂ ರಾಷ್ಟ್ರ ಸಂಕಲ್ಪನೆ ಅಭಿಯಾನ’ ಕೈಕೊಳ್ಳಲಾಗುತ್ತಿದೆ. 8 ನವ್ಹೆಂಬರ 2022ರ ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಈ ಅಭಿಯಾನವನ್ನು ಜರುಗಿಸಲಾಗುವುದು ಎನ್ನುವ ಮಾಹಿತಿಯನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ ರಮೇಶ ಶಿಂದೆಯವರು ಇಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ನೀಡಿದರು....

https://bharathvaibhav.com/hindu-rashtra-sankalpane-abhiyan/

ಬೆಳಗಾವಿ: ದಿನಾಂಕ: 28.9.2022 ಹಿಂದೂ ಜನಜಾಗೃತಿ ಸಮಿತಿ ದ್ವಿದಶಕ-ಪೂರ್ಣಗೊಂಡಿರುವ ನಿಮಿತ್ತ ಬೆಳಗಾವಿ ಜಿಲ್ಲೆಯಲ್ಲಿ ಹಿಂದೂ ರಾಷ್ಟ್ರ ಸಂಕಲ...

 #ಜ್ಞಾನಗಂಗ_ಸಾಹಿತ್ಯ_ಮತ್ತು_ಸಾಂಸ್ಕೃತಿಕ_ರಂಗದ_ವತಿಯಿಂದ_ಅದ್ದೂರಿ_ಕರುನಾಡು_ಕವಿ - #ಕಲಾವಿದರ_ಸಮ್ಮೇಳನ_2022" ಸಂಘ- ಸಂಸ್ಥೆಗಳು ಎಲೆಮರೆಕಾಯಿಯ...
28/09/2022

#ಜ್ಞಾನಗಂಗ_ಸಾಹಿತ್ಯ_ಮತ್ತು_ಸಾಂಸ್ಕೃತಿಕ_ರಂಗದ_ವತಿಯಿಂದ_ಅದ್ದೂರಿ_ಕರುನಾಡು_ಕವಿ - #ಕಲಾವಿದರ_ಸಮ್ಮೇಳನ_2022"

ಸಂಘ- ಸಂಸ್ಥೆಗಳು ಎಲೆಮರೆಕಾಯಿಯಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸುವಂತಾಗಲಿ
-- ಸಮಾಜ ಸೇವಕ ಜಗದೀಶ್ ಚೌಧರಿ

ಗಾಂಧಿ ಭವನದ ಇಡೀ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಸಭಾಂಗಣದ ಹೊರಗಡೆಯೂ ಅಪಾರ ಜನಸ್ತೋಮ. ನಾಡಿನ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಸಾಧಕರ ಸಂಭ್ರಮ ಮುಗಿಲು ಮುಟ್ಟಿತ್ತು. ನಮ್ಮ ಜೀವಮಾನದಲ್ಲಿ ವೇದಿಕೆಯನ್ನೇರಿ ಪ್ರಶಸ್ತಿಗಳನ್ನು ಸ್ವೀಕರಿಸುತ್ತೇವೆಂದು ಕನಸು ಮನಸ್ಸಿನಲ್ಲಿಯೂ ಎಣಿಸಿರದ ಮುಗ್ಧ ಮನೋಭಾವ. ರೈತರು, ವೈದ್ಯರು, ಕವಿಗಳು, ಕಲಾವಿದರು, ಪರಿಸರವಾದಿಗಳು, ಪತ್ರಕರ್ತರು, ಶೈಕ್ಷಣಿಕ ಸಾಧಕರು --ಹೀಗೆ ಹತ್ತು ಹಲವಾರು ರಂಗಗಳಲ್ಲಿ ಸಾಧನೆಗೈದ ಸಾಧಕರ ಸಮ್ಮಿಲನ ಅಲ್ಲಿತ್ತು.

ಇದು ಬೆಂಗಳೂರಿನ ಗಾಂಧಿ ಭವನದಲ್ಲಿ "ಜ್ಞಾನಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ, ಬೆಂಗಳೂರು" ಹಾಗೂ "ಕರುನಾಡು ಹಣತೆ ಕವಿಬಳಗ ಮತ್ತು ಸಾಂಸ್ಕೃತಿಕ ಘಟಕ", ಚಿತ್ರದುರ್ಗದ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ "ಕರುನಾಡು ಕವಿ -ಕಲಾವಿದರ ಸಮ್ಮೇಳನ 2022"ರ ದೃಶ್ಯ ವೈಭವ.

"ಕೊರೊನಾ ಸಂದರ್ಭದಲ್ಲಿ ಸಾವಿರಾರು ಜನ ವಲಸೆ ಕಾರ್ಮಿಕರು ಊಟವಿಲ್ಲದೆ ನರಳಿದರು. ಅಂತಹ ಸಂದರ್ಭದಲ್ಲಿ ಅವರ ಕೈ ಹಿಡಿಯದ ಜನಪ್ರತಿನಿಧಿಗಳು ಮತ್ತು ಸರ್ಕಾರ, ಕವಿ- ಕಲಾವಿದರನ್ನು ಪ್ರೋತ್ಸಾಹಿಸುತ್ತಾರೆ ಎಂಬುದು ಸುಳ್ಳು. ಹಾಗಾಗಿ ನಾಡಿನ ಸಂಘ- ಸಂಸ್ಥೆಗಳು ಮತ್ತು ಸಮಾಜ ಸೇವಕರೇ ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾದರೆ ಈ ನಾಡು ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗುತ್ತದೆ" ಎಂದು ಸಮಾಜ ಸೇವಕ ಜಗದೀಶ್ ಚೌಧರಿ ಅವರು ತಿಳಿಸಿದರು.

"ಕರುನಾಡು ಕವಿ- ಕಲಾವಿದರ ಸಮ್ಮೇಳನ 2022" ಅನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. "ಸಮಾಜದ ಸಂಕಷ್ಟ ಸಮಯದಲ್ಲಿ ರಾಜಕಾರಣಿಗಳನ್ನೊಳಗೊಂಡು ಎಲ್ಲರೂ, ಪಕ್ಷದ ಸಿದ್ಧಾಂತಗಳಿಂದ ಹೊರಬಂದು ಸಮಾಜಸೇವೆಯಲ್ಲಿ ತೊಡಗುವುವುದು ನಿಜವಾದ ಮಾನವೀಯತೆ" ಎಂದು ಧಾರ್ಮಿಕವಾಗಿ ನುಡಿದರು. ತಮ್ಮ ಭಾಷಣದುದ್ದಕ್ಕೂ ವ್ಯವಸ್ಥೆಯೊಳಗಿನ ಅವ್ಯವಸ್ಥೆಯನ್ನು ಕಟುವಾಗಿ ಖಂಡಿಸಿದರು. "ನಾನು ಸದಾ ಇಂತಹ ಸಾಧಕರ ಜೊತೆ ನಿಂತು ಪ್ರೋತ್ಸಾಹಿಸುತ್ತೇನೆ" ಎಂದು ಭರವಸೆ ನೀಡಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಲೇಖಕ ಮತ್ತು ಅಂಕಣಕಾರ ಮಣ್ಣೆ ಮೋಹನ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಪೌರಾಣಿಕವಾಗಿ ಹಾಗೂ ಐತಿಹಾಸಿಕವಾಗಿ ಕನ್ನಡ ನಾಡು ಬೆಳೆದು ಬಂದ ರೀತಿಯನ್ನು ಸವಿಸ್ತಾರವಾಗಿ ವಿವರಿಸುತ್ತಾ, ಬನವಾಸಿ ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಕಲ್ಯಾಣಿ ಚಾಲುಕ್ಯರು, ವಿಜಯನಗರದ ಅರಸರು, ಮೈಸೂರು ಅರಸರು, ಬೆಂಗಳೂರಿನ ಕೆಂಪೇಗೌಡ, ಚಿತ್ರದುರ್ಗದ ಪಾಳೆಗಾರರು, ಕಿತ್ತೂರಿನ ರಾಣಿ ಚೆನ್ನಮ್ಮ ಹೀಗೆ ಕನ್ನಡ ನಾಡಿನ ಎಲ್ಲ ರಾಜಮನೆತನಗಳು ಈ ನಾಡಿಗೆ ನೀಡಿದ ಅಪಾರವಾದ ಕೊಡುಗೆಯನ್ನು ಸ್ಮರಿಸುತ್ತಾ, ಅಂತಹ ಶ್ರೇಷ್ಠ ಪರಂಪರೆಯ ವಾರಸುದಾರರು ನಾವಾಗಿದ್ದೇವೆ. ಆ ಹೆಮ್ಮೆ ನಮ್ಮೆಲ್ಲರದಾಗಲಿ ಎಂದು ಆಶಿಸಿದರು. ಮುಂದುವರೆದು ಮಾತನಾಡಿದ ಅವರು, ನಮ್ಮ ಶ್ರೀಮಂತ ಪರಂಪರೆಯನ್ನು ಇಲ್ಲಿ ನೆರೆದಿರುವ ಎಲ್ಲಾ ಕವಿ- ಕಲಾವಿದ ಸಾಧಕರುಗಳು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕೆಂದು ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ 'ಇಂದು ಸಂಜೆ' ಪತ್ರಿಕೆಯ ಸಂಪಾದಕರಾದ ಡಾ. ಪದ್ಮ ನಾಗರಾಜ್ ಅವರು ಮಾತನಾಡಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿ "ಕರುನಾಡ ಸೇವಾ ರತ್ನ ಪ್ರಶಸ್ತಿ" ಪಡೆದ ಎಲ್ಲಾ ಸಾಧಕರಿಗೆ, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಶ್ರೇಷ್ಠ ಕಾರ್ಯವನ್ನು ಮಾಡುತ್ತಿರುವ ಜ್ಞಾನಗಂಗಾ ಸ್ವಾಹಿತ್ಯರಂಗ ವೇದಿಕೆಗೆ ಶುಭವಾಗಲಿ" ಎಂದು ಅಭಿನಂದಿಸಿದರು. ನಮ್ಮ ಪತ್ರಿಕೆ ಇಂತಹ ಉದಯೋನ್ಮುಖ ಕವಿಗಳಿಗೆ ಸದಾ ವೇದಿಕೆ ಒದಗಿಸುತ್ತದೆ ಎಂದು ನುಡಿದರು.

ಕರ್ನಾಟಕ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಡಾ. ಸತೀಶ್ ಕುಮಾರ್ ಹೊಸಮನಿ ಅವರು ಮಾತನಾಡಿ "ನಾಡಿನ ಎಲ್ಲ ಭಾಗಗಳಿಂದ ಬಂದಿರುವ ಸಾಧಕರಿಗೆ ಅಭಿನಂದನೆ ಸಲ್ಲಿಸುತ್ತಾ, "ಇಲ್ಲಿರುವ ಎಲ್ಲಾ ಕವಿಗಳು ತಮ್ಮ ಪುಸ್ತಕಗಳ ಡಿಜಿಟಲೀಕರಣಕ್ಕೆ ಅನುಮತಿ ನೀಡಿದರೆ, ಗ್ರಂಥಾಲಯ ಇಲಾಖೆ ಹೂಗಳನ್ನು ತನ್ನ ಪೋರ್ಟಲ್ ನಲ್ಲಿ ಪ್ರಕಟಿಸುವ ಮೂಲಕ ಜಗತ್ತಿನಾದ್ಯಂತ ಓದುಗರಿಗೆ ಆ ಪುಸ್ತಕಗಳನ್ನು ಓದುವ ಅವಕಾಶ ಮಾಡಿಕೊಡುತ್ತದೆ" ಎಂದರು. ಹಾಗೆಯೇ ಎಲ್ಲರೂ ಗ್ರಂಥಾಲಯ ಇಲಾಖೆಯ ಸದಸ್ಯರಾಗಬೇಕೆಂದು ಕೇಳಿಕೊಂಡರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷರಾದ ಕೃಷ್ಣಪ್ಪನವರು ಮಾತನಾಡಿ " ಜ್ಞಾನ ಗಂಗ ಸಾಹಿತ್ಯ ರಂಗ ಸಂಸ್ಥೆಯು ಮಾಡುತ್ತಿರುವ ಕನ್ನಡ ಕೈಂಕರ್ಯ ಅದ್ವಿತೀಯವಾದದ್ದು. ಯುವ ಕವಿಗಳನ್ನು ಗುರುತಿಸಿ, ಅವರ ಕವನಗಳನ್ನು ಪರಿಷ್ಕರಿಸಿ, ಪತ್ರಿಕೆಗಳಲ್ಲಿ ಪ್ರಕಟಿಸಿ, ನಾಡಿಗೆ ಪರಿಚಯಿಸಿ, ಅವರಿಗೆ ಬೆನ್ನು ತಟ್ಟುವ ಕೆಲಸವನ್ನು ಈ ಸಂಸ್ಥೆಯ ಮೂಲಕ ಮಣ್ಣೆ ಮೋಹನ್ ರವರು ಮಾಡುತ್ತಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ,ಧೀಮಂತವಾಗಿರುವ ಕನ್ನಡ ನಾಡು ಈ ಹೊಸ ತಲೆಮಾರಿನಿಂದ ಇನ್ನಷ್ಟು ಮೆರಗನ್ನು ಪಡೆಯಲಿ. ಈ ನಾಡಿನ ಭವ್ಯತೆ, ಹಿರಿಮೆ, ಗರಿಮೆ ನಮ್ಮೆಲ್ಲರ ಹೆಮ್ಮೆ ಆಗಿದೆ" ಎಂದರು. ತಮ್ಮ ಸ್ಪೂರ್ತಿಯುತ ಭಾಷಣದಿಂದ ಸಭಿಕರ ಮನೆಗೆದ್ದರು.

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ಸಮತಾ ದೇಶಮಾನೆಯವರು ಮಾತನಾಡಿ "ಎಲ್ಲಾ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸಿ, ಪುರಸ್ಕರಿಸುವ ಮಣ್ಣೆ ಮೋಹನ್ ರವರ ಜ್ಞಾನಗಂಗಾ ಸಾಹಿತ್ಯ ರಂಗದ ಕಾರ್ಯ ಅದ್ಭುತವಾದದ್ದು. ಎಲ್ಲ ಸಮುದಾಯಗಳ, ಎಲ್ಲಾ ಕ್ಷೇತ್ರಗಳ ಸಾಧಕರು ಇಲ್ಲಿ ನೆರೆದಿದ್ದಾರೆ. ಹಾಗಾಗಿ ಇದೊಂದು ಸಮತಾ ಸಮಾವೇಶವಾಗಿದೆ" ಎಂದು ಬಣ್ಣಿಸಿದರು. ತಮ್ಮ ಅಧೀನದಲ್ಲಿ 14 ಪಿ ಎಚ್ ಡಿ ಪ್ರಬಂಧಗಳು ಮಂಡನೆಯಾಗಿವೆ ಎಂದು ತಿಳಿಸುತ್ತಾ, ಅವುಗಳ ವಸ್ತು ವಿಶೇಷತೆಗಳನ್ನು ವಿವರಿಸಿದರು.

'ಸಂಜೆ ಪ್ರಭ' ಪತ್ರಿಕೆಯ ಉಪಸಂಪಾದಕರಾದ ರಜನಿ ಪೈರವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.'ವಿಶ್ವವಾಣಿ' ಪುರವಣಿ ವಿಭಾಗದ ಸಂಪಾದಕರಾದ ಶಶಿಧರ ‌ಹಾಲಾಡಿ, ಲಯಾಬಿನಯ ಕಲ್ಚರ್ ಫೌಂಡೇಶನ್ ನ ಡಾ.ಜಯಶ್ರೀ ರವಿ ಹೆಗಡೆ, ಸಮಾಜ ಸೇವಕರಾದ ರಾಮಕೃಷ್ಣಯ್ಯ ಮುಂತಾದವರು ವೇದಿಕೆಯಲ್ಲಿದ್ದರು.150ಕ್ಕೂ ಹೆಚ್ಚು ಸಾಧಕರಿಗೆ "ಕರುನಾಡು ಸೇವಾ ರತ್ನ" ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗೋಷ್ಟಿ, ಮಹಿಳಾ ಗೋಷ್ಠಿ, ಕವಿಗೋಷ್ಠಿ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.ಬೀದರ್ ನಿಂದ ಕೊಡಗು ಜಿಲ್ಲೆಯವರೆಗೆ ಎಲ್ಲ ಜಿಲ್ಲೆಗಳ ಸಾದಕರನ್ನು ಗುರುತಿಸಿ ಸನ್ಮಾನಿಸಿದ್ದು ವಿಶೇಷವಾಗಿತ್ತು. ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ನಾಗರಾಜಪ್ಪ,ಮಣ್ಣೆ; ರಂಗನಾಥ್, ಶ್ರೀಪತಿಹಳ್ಳಿ; ಗಿರೀಶ್,ಮುದ್ದಲಿಂಗನಹಳ್ಳಿ ; ವೆಂಕಟೇಶ್, ಬೆಟ್ಟಹಳ್ಳಿ; ಜಗದೀಶ್ ಜಿ.ಎ.ಬೇವೂರು. ರವರನ್ನು ಸನ್ಮಾನಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಇದೇ ಸಂದರ್ಭದಲ್ಲಿ ಮಣ್ಣೆ ಮೋಹನ್ ವಿರಚಿತ "ಉತ್ತುಂಗದಲ್ಲಿ ವನಿತೆಯರು-೧" ಕೃತಿ, ಗಣಪತಿ ಗೋ. ಚಲವಾದಿಯವರ "ಕಾವ್ಯಾಮೃತ" ಕವನ ಸಂಕಲನ, ರಾಘವೇಂದ್ರ ಡಿ ತಳವಾರರವರ"ಆತ್ಮಾನುಬಂಧದ ಸಖಿ" ಕೃತಿಗಳು ಲೋಕಾರ್ಪಣಗೊಂಡವು.

ವಿದ್ಯಾರ್ಥಿ ಗೋಷ್ಠಿ

"ಭವ್ಯ ಭಾರತದ ಅಡಿಯಲ್ಲಿ ಯುವಜನರ ಪಾತ್ರ"ವಿಷಯದ ಕುರಿತು ನಮ್ಮೂರ ಟಿವಿಯ ವರ್ಷ ನಾಯಕ್, "ಡಿಜಿಟಲ್ ಯುಗದಲ್ಲಿ ಸ್ಟಾರ್ಟ್ ಆಪ್‌ಗಳಂದ ದೇಶದ ಎಕಾನಮಿ ಅಭಿವೃದ್ಧಿ"ವಿಷಯದ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿನಿ ಶೈಲಸುತೆ ರಂಜಿತಾ, "ಅಪರಾಧ ತಡೆಯುವಲ್ಲಿ ಯುವಜನತೆಯ ಪಾತ್ರ" ವಿಷಯದ ಕುರಿತು ರಾಮುಹುರಳಿಹಳ್ಳಿ, "ದೇಶಾಭಿಮಾನ ಮತ್ತು ಯುವ ಪೀಳಿಗೆ" ವಿಷಯದ ಕುರಿತು ತೃತೀಯ ಬಿಎ ವಿದ್ಯಾರ್ಥಿ ಚೇತನ್ ತಾವರೆಕೆರೆ ಮತ್ತು "ನೂತನ ಶಿಕ್ಷಣ ನೀತಿಯಿಂದ ಅನುಕೂಲಗಳು ಮತ್ತು ಅನಾನುಕೂಲಗಳು" ವಿಷಯದ ಕುರಿತು ದ್ವಿತೀಯ ಬಿಕಾಂ ವಿದ್ಯಾರ್ಥಿ ಮನು ಭೈರನಹಳ್ಳಿ ವಿಚಾರ ಮಂಡಿಸಿದರು.

ಮಹಿಳಾ ಗೋಷ್ಠಿ

"ಸ್ವಾತಂತ್ರ್ಯ ನಂತರ ಶೈಕ್ಷಣಿಕವಾಗಿ ಮಹಿಳೆಯರ ಬೆಳವಣಿಗೆ" ವಿಷಯ ಕುರಿತು ಆದರ್ಶ ಮಹಿಳಾ ವೇದಿಕೆಯ ಅಧ್ಯಕ್ಷರಾದ ಪುಷ್ಪ ವಿಶ್ವೇಶ್ವರ, "ಮಕ್ಕಳ ಬೌದ್ಧಿಕ, ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಮಾತೆಯರ ಕೊಡುಗೆ" ವಿಷಯದ ಕುರಿತು ವಿದ್ಯಾವಾಹಿನಿ ಶಾಲೆಯ ಮುಖ್ಯ ಶಿಕ್ಷಕಿ ವಾತ್ಸಲ್ಯ,"ಭಾರತ ಕ್ರೀಡಾ ಕ್ಷೇತ್ರದಲ್ಲಿ ಮಹಿಳಾ ಕ್ರೀಡಾಪಟುಗಳು & ಅವರ ಸಾಧನೆಗಳು" ವಿಷಯ ಕುರಿತು ಕವಯಿತ್ರಿ ಮತ್ತು ಉಪನ್ಯಾಸಕಿ ನಂದಾದೀಪ, "ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ" ವಿಷಯದ ಬಗ್ಗೆ ಪ್ರೆಸ್ ಕ್ಲಬ್ ಕೌನ್ಸಿಲ್ ನ ಪ್ರಧಾನ ಕಾರ್ಯದರ್ಶಿ ಆಶಾ ಸೀನಪ್ಪ ಮತ್ತು "ಸ್ವಾತಂತ್ರ್ಯ ನಂತರ ಭಾರತ ದೇಶದಲ್ಲಿ ಮಹಿಳೆಯರ ಸ್ಥಾನಮಾನ" ವಿಷಯ ಕುರಿತು ಅಫಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ರೂಪ ರವರು ವಿಚಾರ ಮಂಡಿಸಿದರು.

ಚಿನ್ಮಯಿ ಭಾರದ್ವಾಜ್ ಪ್ರಾರ್ಥನೆ ಮಾಡಿದರು. ಡಾ. ಯಶೋಧ ಸ್ವಾಗತ ಕೋರಿದರು. ಡಾ.ಎಂ ವಿ ನೆಗಳೂರು ರವರು ಪ್ರಾಸ್ತಾವಿಕ ನುಡಿಗಳನ್ನು ಹಾಡಿದರು. ನಟ- ನಿರೂಪಕ ಧನಂಜಯ್ ಕಾರ್ಯಕ್ರಮವನ್ನು ನಿರೂಪಿಸಿದರು. ನರಸಿಂಹ ರಾಜುರವರು ಸಮ್ಮೇಳನದ ಉದ್ಘಾಟಕರ ಪರಿಚಯ, ಕವಿಗೋಷ್ಠಿಯ ನಿರೂಪಣೆ ಮಾಡಿದರು.ಡ್ರಾಮಾ ಜೂನಿಯರ್ ಸೀಸನ್ 4ರ ಫೈನಲಿಸ್ಟ್ ಕುಮಾರಿ ಬೈರವಿ ಹಾಗೂ ಬಾಲನಟಿ ಗನಿಕಾ ಅವರ ಭರತನಾಟ್ಯ ಎಲ್ಲರ ಮನಸೂರೆಗೊಂಡಿತು.

ವರದಿ: ಮಣ್ಣೆ ಮೋಹನ್

 ್ಷಗಳ_ನಂತರ_ಮಾದಿಗ_ಸಮುದಾಯಕ್ಕೆ_ಜ್ಞಾನೋದಯ_ಆಯಿತೇ?ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದಲಿತ ಸಮುದಾಯದ ಸಾಮಾಜಿಕ ಸ್ಥಿತಿಯನ್ನೂ ನಾವು ಈಗಲೂ ನೆನಪಿಸ...
28/09/2022

್ಷಗಳ_ನಂತರ_ಮಾದಿಗ_ಸಮುದಾಯಕ್ಕೆ_ಜ್ಞಾನೋದಯ_ಆಯಿತೇ?

ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದಲಿತ ಸಮುದಾಯದ ಸಾಮಾಜಿಕ ಸ್ಥಿತಿಯನ್ನೂ ನಾವು ಈಗಲೂ ನೆನಪಿಸಿಕೊಂಡರೆ ಕಣ್ಣಲ್ಲಿ ತನ್ನಿಂದ ತಾನೇ ಕಣ್ಣೀರು ಬರುತ್ತದೆ.ಅದರಲ್ಲಿಯೂ ದಲಿತ ಸಮುದಾಯದಲ್ಲಿಯೇ ಕಟ್ಟ ಕಡೆಯ ಸಮುದಾಯಗಳಾದ ಅಸ್ಫೂರ್ಶ ಸಮುದಾಯಗಳ ಸಾಮಾಜಿಕ ಸ್ಥಿತಿಯನ್ನೂ ಹೇಳತೀರದು. ನಮ್ಮ ಅಜ್ಜ, ಮುತ್ತಜ್ಜ ಅವರು ಪಟ್ಟಿರುವ ಕಷ್ಟ ನಮ್ಮ ಮುಂದಿನ ನಮ್ಮ ಮಕ್ಕಳಿಗೆ ಬರಬಾರದು ಎಂಬ ಆಲೋಚನೆಯೂ ನಮ್ಮ ಅಜ್ಜ ಮುತ್ತಜ್ಜ ಅವರು ಎಂದು ಯೋಚನೆ ಮಾಡಿಯೇ ಇಲ್ಲಾ ಆ ಯೋಚನೆ ಮಾಡುವಷ್ಟು ಬುದ್ದಿವಂತರು ನಮ್ಮ ಅಜ್ಜ , ಮುತ್ತಜ್ಜರು ಇಲ್ಲದೆ ಇರೊದಕ್ಕೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿದದರೂ ಎಲ್ಲಾ ರಂಗದಲ್ಲಿ ದಲಿತರಿಗೆ ಸ್ವಾತಂತ್ರ್ಯ ಬರದೇ ಇರುವುದು ದುರಾದುಷ್ಟಕರ ಸಂಗತಿ.

ದೇಶಕ್ಕೆ ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವನ್ನು ದೇಶವೇ ಬಹಳಷ್ಟು ವೀಜೃಂಭನೆಯಿಂದ ಆಚರಣೆ ಮಾಡಲಾಯಿತು ಆದ್ರೆ ದಲಿತರಿಗೆ ಅದರಲ್ಲೂ ಮಾದಿಗರಿಗೆ ಯಾವಾಗ ಆ ಸ್ವಾತಂತ್ರ್ಯದ ಸಂಭ್ರಮ?? ದೇವರ ಗುಡಿಯೊಳಗೆ ಹೋದರೇ ದಂಡ, ದೇವರ ಕೋಲು ಹಿಡಿದರೆ ದಂಡ, ಅಂಗಡಿಯಲ್ಲಿ ಚೆಂಬು ಹಿಡಿದರೆ ಹೊಡೆತ, ಹಟ್ಟಿಯಯೊಳಗೆ ಹೋಗಲು ಸಚಿವರಿಗೆ ನಿರ್ಬಂಧ, ಹೀಗೆ ಹಲವಾರು ರೀತಿಯಲ್ಲಿ ನಿರ್ಬಂಧ ಇಂದಿಗೂ ಮಾದಿಗ ಸಮುದಾಯ ಎದಿರಿಸುವ ಪರಸ್ಥಿತಿ ಸಾಮಾನ್ಯ ಮಾದಿಗನಿಗೆ ಮತ್ತು ರಾಜಕೀಯ ನಾಯಕರಿಗೂ ಇದರ ಬಿಸಿ ತಪ್ಪಿಲ್ಲ.

ಮಾದಿಗ ಸಮಾಜ ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ವಿಶೇಷವಾಗಿ ಶೈಕ್ಷಣಿಕವಾಗಿ ಬಹಳಷ್ಟು ಹಿಂದೆ ಉಳಿದಂತ ಸಮಾಜ ಆಗಿದೆ. ಈ ಸಮುದಾಯಕ್ಕೆ ಯಾವುದೇ ರೀತಿಯ ಒಂದೇ ನಾಯಕತ್ವ, ಒಂದೆ ವೇದಿಕೆ, ಒಂದೆ ಸಂಘಟನೆ ಇಲ್ಲದೆ ಇರೋದೇ ಎಲ್ಲಾ ರಂಗದಲ್ಲಿ ಈ ಸಮುದಾಯ ಹಿಂದೆ ಉಳಿಯೂಕೇ ಕಾರಣ ಆಗಿದೆ.
ಮಾದಿಗರು ಸಂಘಗಳ ಸರದಾರರು ಆಗಿದ್ದಾರೆ ಎಲ್ಲಾರೂ ಸಮುದಾಯದ ಹೆಸರಲ್ಲಿ ಸಂಘಟನೆ ಕಟ್ಟಿ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ತಲೂಕದ್ಯಾಕ್ಷರು ಎಂಬ ಹುದ್ದೆಗೆ ಜೋತು ಬಿದ್ದು ಹೋಗಿರುವ ಸಂಗತಿಗಳು ಇದ್ದು ಬಹಳಷ್ಟು ನಮ್ಮ ಕಣ್ಣ ಮುಂದೇ ಇವೆ ಹಾಗಾಗಿ ಸಮುದಾಯ ಇನ್ನೂ ಅಭಿವೃದ್ದಿ ಆಗದೇ ಹಿಂದೆ ಉಳಿಯೊಕೇ ಕಾರಣ ಆಗಿದೆ ಎಂದರೆ ತಪ್ಪಾಗಲಾರದು. ಇಷ್ಟೂ ವರ್ಷ ಆದರು ಇಂದಿಗೂ ನಮ್ಮ ರಾಜಕೀಯ ನಾಯಕರು, ಹಿರಿಯ ಹೋರಾಟಗಾರರು ಎಲ್ಲಾರು ಒಂದೇ ವೇದಿಕೆಗೆ ಬಾರದೆ ಸಮುದಾಯದ ಅಭಿವೃದ್ಧಿಗೆ ಬಗ್ಗೆ ಯೋಚನೆ ಮಾಡದೆ, ಸದಾಶಿವ ಆಯೋಗದ ಬಗ್ಗೆ ಎಲ್ಲಾರು ಒಮ್ಮತದ ನಿರ್ಣಯ ತೆಗೆದುಕೊಳ್ಳದೆ ಇರೊದರಿಂದಲೇ
ಸಮುದಾಯ ಎಲ್ಲಾ ರಂಗದಲ್ಲಿ ಹಿಂದೆ ಉಳಿಯೊಕೇ ಕಾರಣ ಎಂದು ನೇರವಾಗಿಯೇ ಹೇಳಬಹುದು.

ಏನೆ ಆಗಲಿ ಸ್ವಾತಂತ್ರ್ಯ ಬಂದು 75 ವರ್ಷ ಆದ ಮೇಲೆ ಕರ್ನಾಟಕದ ಮಾದಿಗ ಸಮುದಾಯಕ್ಕೆ , ಮಾದಿಗ ನಾಯಕರಿಗೆ ಜ್ಞಾನೋದಯ ಅಯೀತೊ ಏನೋ ಗೊತ್ತಿಲ್ಲ ಸಮುದಾಯಕ್ಕೆ ಏನಾದ್ರೂ ಕೊಡುಗೆ, ಒಳ್ಳೆಯ ಸಂದೇಶ, ಒಳ್ಳೆಯ ವಿಚಾರ ಕೊಡುವ ಉದ್ದೇಶದಿಂದ ಎಲ್ಲಾ ಪಕ್ಷದ ನಾಯಕರು, ಹಿರಿಯ ಹೋರಾಟಗಾರರು, ಬಹಳಷ್ಟು ಯುವ ಬಳಗ ಒಂದೆ ವೇದಿಕೆಯತ್ತ ಪದಾರ್ಪಣೆ ಮಾಡಿದ್ದು ಒಳ್ಳೆಯ ಸಂತಷದ ಕ್ಷಣಗಳು. ಈ ಒಂದು ಸಂತೋಷದ ಕ್ಷಣಗಳನ್ನ ನಾವು ಸಹ ಒಪ್ಪಿಕೊಳ್ಳಲೇಬೇಕು ಆಗುತ್ತದೆ ಇಲ್ಲಾ ಅಂದ್ರೆ ನಾವು ಹಿಂದೆ ಇದ್ದ ಕಾಲಘಟ್ಟಕ್ಕೆ ಬಂದರೂ ಅಚ್ಚರಿ ಪಡಬೇಕಿಲ್ಲ.

23/9/2022 ರಂದು ಬೆಂಗಳೂರಿನ ಖಾಸಗಿ ಹೊಟೇಲಯೊಂದರಲ್ಲಿ ಈ ಸ್ವಾಭಿಮಾನಿ ಮಾದಿಗರ ಮಹಾಸಭಾ ಕಾರ್ಯಕ್ರಮದಲ್ಲಿ ಆ ಕಾರ್ಯಕ್ರಮದ ಮೂಲ ರೂವಾರಿ ಎ. ನಾರಾಯಣಸ್ವಾಮಿ ಅದರ ಅಧ್ಯಕ್ಷತೆವಹಿಸಿದ್ದರು ಅಲ್ಲದೆ ಆ ಕಾರ್ಯಕ್ರಮದ ಎಲ್ಲಾ ವ್ಯವಸ್ಥೆಯನ್ನು ಬಹಳ ಅಚ್ಚು ಕಟ್ಟಾಗಿ ನಡೆಸಿಕೊಟ್ಟಿದ್ದು ಮರೆಯುವಂತಿಲ್ಲ.

ಈ ಕಾರ್ಯಕ್ರಮದಲ್ಲಿ ಗೋವಿಂದ ಕಾರಜೋಳ ಅವರು ತಮ್ಮ ಮಂದಗತಿಯ ದಾಟಿಯಲ್ಲಿ ಸಮಾಜದ ಹಿಂದಿನ ಮತ್ತು ಈಗಿನ ವಿಷಯಗಳನ್ನ ಚರ್ಚಿಸಿದರೆ, ಸಮುದಾಯದ ಡೈನಾಮಿಕ್ ಎಂಬ ಖ್ಯಾತಿಯ ನಾರಾಯಣಸ್ವಾಮಿ ಅವರು ತಮ್ಮ ಏರು ದ್ವನಿಯಲ್ಲಿ ಸಮುದಾಯದ ಮುಂದಿನ ಕಾರ್ಯಕ್ರಮ ಬಗ್ಗೆ,ಹಲವಾರು ಯೋಜನೆಗಳ ಬಗ್ಗೆ, ಆರ್ಥಿಕತೆಯ ಬಗ್ಗೆ ಸಮುದಾಯವನ್ನು ಅಭಿವೃದ್ದಿ ಮಾಡುವುದರ ಕಡೆಗೆ ತಮ್ಮ ಭಾಷಣದಲ್ಲಿ ಎಳೆ ಎಳೆಯಾಗಿ ಬಿಚ್ಚಿ ಇಟ್ಟರು, ಇನ್ನೂ ಸಮಾಜದ ಮಾಣಿಕ್ಯ, ಅಭಿವೃದ್ಧಿಯ ಹರಿಕಾರ ಎಚ್ ಆಂಜನೇಯ ಅವರು ಸಮುದಾಯದ ನೋವುಗಳನ್ನ ತೋಡಿಕೊಂಡರು.ಸಮುದಾಯದ ಹಿಂದಿನ ಹಲವಾರು ವಿಷಯಗಳನ್ನ ಎಳೆ ಎಳೆಯಾಗಿ ಬಿಚ್ಚಿ ಇಟ್ಟರು. ಸಮುದಾಯ ಹೆಸರಲ್ಲಿ ನಾವೂ ಅಧಿಕಾರ ಅನುಭವಿಸಿದ್ದೀಸಿ, ಅನುಭವಿಸುತ್ತ ಇದ್ದೇವೆ ಹಾಗಾಗಿ ನಾವೆಲ್ಲರು ಜೋತೆಗೂಡಿ ನೊಂದ ನನ್ನ ಸಮುದಾಯಕ್ಕೆ ಏನಾದರೂ ಅಭಿವೃದ್ದಿಯ ದೃಷ್ಠಿಯಿಂದ ಕೊಡುಗೆ ಕೊಡೊಣ ಎಂದು ಹೇಳುತ್ತ ತಮ್ಮ ನೋವನ್ನು ತೋಡಿಕೊಂಡರು. ಎಲ್ ಹನಮಂತಯ್ಯ ಅವರು ಸಹ ಹೊಸ ಸಂಘಟನೆಯ ಕಾರ್ಯಗಳ ಬಗ್ಗೆ ವಿವರಿಸುತ್ತಾ ಇದಕ್ಕೇ ಎಲ್ಲಾರು ಕೈ ಜೋಡಿಸುದರ ಮೂಲಕ ಬದಲಾವಣೆ ಇಂದಿನಿಂದಲೇ ತರೋಣ ಎಂಬ ಮಾತನ್ನು ಹೇಳಿದರು.ವೆಂಕಟೇಶ ದೊಡ್ಡೇರಿ ಸರ್ ಕಾನೂನಾತ್ಮಕವಾದ ವಿಷಯಗಳನ್ನ ಹೇಳುತ್ತಾ ಕಾರ್ಯಕ್ರಮದ ಜವಾಬ್ದಾರಿ ಇವರೇ ತೆಗೆದುಕೊಂಡಿದರು. ಪ್ರಶಾಂತರಾವ್ ಐಹೊಳೆ ಅವರು ಕಾರ್ಯಕ್ರಮಕ್ಕೆ ಮತ್ತು ಸಂಘಟನೆಯ ವಿಷಯವಾಗಿ ಹಲವಾರು ರೀತಿಯಲ್ಲಿ ಸೂಚನೆ ಮತ್ತು ಸಲಹೆ ನೀಡಿದರು. ಒಟ್ಟಾರೆ ಈ ಕಾರ್ಯಕ್ರಮದಿಂದ ಸಮುದಾಯಕ್ಕೆ ಏನಾದರೂ ಬದಲಾವಣೆ ಆಗಬಹುದು ಎಂಬ ನಿರೀಕ್ಷೆ ಅಲ್ಲಿ ಸೆರಿದ್ದ ಎಲ್ಲಾ ಜನರ ಭರವಸೆ ಅಂತೂ ಬಂದಿದೆ.

ಹಲವಾರು ಯುವ ಹೋರಾಟಗಾರರು ನನಗೆ ಕಾಲ್ ಮತ್ತು ಮೆಸೇಜ್ ಮಾಡಿ ಇದು ಬಿಜೆಪಿ ಪ್ರಾಯೋಜಿತ ಮತ್ತು ಚುನಾವಣೆ ಗಿಮಿಕ್ ಅಂಥಾ ಹೇಳುತ್ತಿದ್ಡಿರಿ ಅದು ತಪ್ಪೇನಿಲ್ಲ ಅದು ನಿಮ್ಮ ಅಭಿಪ್ರಾಯ ಒಂದು ಅಂತೂ ಸತ್ಯ ನಾನು ಆ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮ, ಚುನಾವಣೆ ಗಿಮಿಕ್ ಅಂದುಕೊಂಡಿದ್ದೆ.
ಆದ್ರೆ ಬಹಳ ಮುಖ್ಯವಾಗಿ ಆ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಆ ತರಾ ಚಟುವಟಿಕೆಗಳು ನಡೆದಿಲ್ಲ.
ಸಮುದಾಯದ ಬಗ್ಗೆ ಬಹಳಷ್ಟು ವಿಚಾರಗಳು ನಡೆದಿವೆ.
ಸದಾಶಿವ ಆಯೋಗದ ಎಲ್ಲಾ ಪಕ್ಷದ ನಾಯಕರ ಮೇಲೆ ನಾರಾಯಣಸ್ವಾಮಿ, ಕಾರಜೋಳ, ಎಚ್ ಆಂಜನೇಯ, ಎಲ್ ಹಣಮಂತಯ್ಯ ಅವರು ಪ್ರಾಮಾಣಿಕವಾಗಿ ಒತ್ತಡ ಹಾಕಿದ್ದಾರೆ ಅನ್ನೋದು ಅವರ ಮಾತಿನ ಶೈಲಿಯಲ್ಲಿ ಗೊತ್ತಾಗಿದೆ. ಅವರು ಹೇಳಿದ ಮಾತುಗಳ ಮುಖಾಂತರ ನಮಗೂ ಹಿರಿಯ ನಾಯಕರ ಮೇಲೆ ಒತ್ತಡ ಹಾಕಿದ್ದಾರೆ ಎಂಬ ಭಾವನೆ ಬಂದಿದೆ. ಅಲ್ಲದೆ ಬಹಳಷ್ಟು ಸಮಾಜಮುಖಿ ಚರ್ಚೆ ಆಗಿವೆ. ಪಕ್ಷ ಭೇದ ಮರೆತು ಒಂದೆ ವೇದಿಕೆಗೆ ಬಂದಿದ್ದಾರೆ.
ಸಮುದಾಯವನ್ನ ಬಲಪಡಿಸಲು ಮುಂದೇ ಬಂದಿದ್ದಾರೆ. ವಿಶೇಷವಾಗಿ
ಎಲ್ಲಾ ಜಾತಿಯಲ್ಲಿ ಚುನಾವಣೆ ಮುಖಾಂತರ ಸಂಘದ ನಾಯಕರನ್ನ ಅಥವಾ ಪದಾಧಿಕಾರಿಗಳನ್ನ ಹೇಗೆ ಅಯ್ಕೆ ಮಾಡುತ್ತಾರೆಯೋ ಹಾಗೇ ನಮ್ಮ ಸಮುದಾಯದಲ್ಲಿಯೂ ಕೂಡಾ ಚುನಾವಣೆ ಮೂಲಕವೇ ಅಯ್ಕೆ ಮಾಡೋ ನಿರ್ಧಾರಕ್ಕೆ ಬಂದಿದ್ದು ಒಳ್ಳೆಯ ಬೆಳವಣಿಗೆ ಆಗಿದೆ. ಇದು ಆದಷ್ಟೂ ಬೇಗನೇ ಆದರೇ ಸಮುದಾಯ ಏನೋ ಬದಲಾವಣೆ ಹಂತದಲ್ಲಿ ಬರುತ್ತಿದೆ ಎಂಬ ಸಂದೇಶ ನಮ್ಮ ಜನರಿಗೆ ಹೋಗುತ್ತೆ.
ಸಮುದಾಯದ ಹೆಸರಲ್ಲಿ ಕಾಂಪ್ಲೆಕ್ಸ್ ಮಾಡೋ ವಿಚಾರ.
ಎಲ್ಲಾ ಸಂಘಟನೆಗಳನ್ನ ಒಂದೆ ವೇದಿಕೆಗೆ ತರುವ ವಿಚಾರ ಹೀಗೆ ಹಲವಾರು ವಿಚಾರಗಳು ನಾಯಕರ ಮುಂದೇ ಇದೇ ಮುಂದೇ ಏನು ಮಾಡುತ್ತಾರೆ ಕಾದು ನೋಡೋಣ ಬಂಧುಗಳೇ ದಯಮಾಡಿ ಎಲ್ಲಾರು ಇದನ್ನ ಒಪ್ಪಿಕೊಳ್ಳೋಣ ಇವರಿಗೆ ಬೆಂಬಲ ಕೊಡುವುದರ ಮೂಲಕ ಸಮುದಾಯ ಬದಲಾವಣೆಯ ಹಾದಿಯಲ್ಲಿ ಮುನ್ನಡಿಯುವ ಹಾಗೇ ಎಲ್ಲಾ ಶ್ರಮವಹಿಸಿ ದುಡಿಯೋಣ ಬಂಧುಗಳೇ.

#ಮೈಲಾರಪ್ಪ_ಡಿ_ಎಚ್
#ವಕೀಲರು

ಹರಪನಹಳ್ಳಿ: ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿರುವ ಮಾದಿಗ ಸಮಾಜಕ್ಕೆ 5 ಎಕರೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಜಾಗ ಹಸ...
28/09/2022

ಹರಪನಹಳ್ಳಿ: ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿರುವ ಮಾದಿಗ ಸಮಾಜಕ್ಕೆ 5 ಎಕರೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಜಾಗ ಹಸ್ತಾಂತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಕರುಣಾಕರರೆಡ್ಡಿ ಭರವಸೆ ನೀಡಿದರು. ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಮಾದಿಗ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ಮಾದಿಗ ಜಾಗೃತಿ ಸಮಾವೇಶ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಮಾದಿಗ ಸಮಾಜ ಸಾಮಾಜಿಕ, ಶೈಕ್ಷಣಿಕ, ಅರ್ಥಿಕವಾಗಿ ಹಿಂದುಳಿದಿದೆ. ಶಿಕ್ಷಣ ಪಡೆಯುವ ಮೂಲಕ ಮುನ್ನೆಲೆಗೆ ಬರಬೇಕು. ಅಂಬೇಡ್ಕರ್ ಹೆಸರಿನಲ್ಲಿ ಗ್ರಂಥಾಲಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇನೆ....

https://bharathvaibhav.com/mlas-promise-letter-to-district-collector-to-allot-5-acres-of-land-to-madiga-samaj/

ಹರಪನಹಳ್ಳಿ: ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿರುವ ಮಾದಿಗ ಸಮಾಜಕ್ಕೆ 5 ಎಕರೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬ....

https://bharathvaibhav.com/mlas-promise-letter-to-district-collector-to-allot-5-acres-of-land-to-madiga-samaj/ #ಮಾದಿಗ_ಸಮ...
28/09/2022

https://bharathvaibhav.com/mlas-promise-letter-to-district-collector-to-allot-5-acres-of-land-to-madiga-samaj/

#ಮಾದಿಗ_ಸಮಾಜಕ್ಕೆ_5_ಎಕರೆ_ಜಮೀನು_ಮಂಜೂರು_ಮಾಡಲು_ಜಿಲ್ಲಾಧಿಕಾರಿಗಳಿಗೆ_ಪತ್ರ: #ಶಾಸಕರ_ಭರವಸೆ

ಹರಪನಹಳ್ಳಿ: ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿರುವ ಮಾದಿಗ ಸಮಾಜಕ್ಕೆ 5 ಎಕರೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಜಾಗ ಹಸ್ತಾಂತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಕರುಣಾಕರರೆಡ್ಡಿ ಭರವಸೆ ನೀಡಿದರು.

ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಮಾದಿಗ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ಮಾದಿಗ
ಜಾಗೃತಿ ಸಮಾವೇಶ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಮಾದಿಗ ಸಮಾಜ ಸಾಮಾಜಿಕ, ಶೈಕ್ಷಣಿಕ, ಅರ್ಥಿಕವಾಗಿ ಹಿಂದುಳಿದಿದೆ. ಶಿಕ್ಷಣ ಪಡೆಯುವ ಮೂಲಕ ಮುನ್ನೆಲೆಗೆ ಬರಬೇಕು. ಅಂಬೇಡ್ಕರ್ ಹೆಸರಿನಲ್ಲಿ ಗ್ರಂಥಾಲಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇನೆ. ಈಗಾಗಲೇ ಮಾದಿಗ ಕೇರಿಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಅಂಬೇಡ್ಕರ್ ಸಮುದಾಯ ಭವನ, ತಾಲೂಕಿನಲ್ಲಿ 20 ಎಸ್ಸಿ-ಎಸ್ಟಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಶೋಷಿತ ಮಕ್ಕಳ ಶಿಕ್ಷಣಕ್ಕೆ ಅದ್ಯತೆ ನೀಡಿದ್ದೇನೆ ಎಂದರು.

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಶ್ರೀಗಳು ನಡೆಸುತ್ತಿರುವ ಧರಣಿ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಕುರಿತು ಶೀಘ್ರವೇ ಘೋಷಣೆಯಾಗಲಿದೆ ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ
ಮಾಡಿ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು, ಮನುಷ್ಯ ಹುಟ್ಟಿದಾಗ ಮಂಗಳ ಕಾರ್ಯ ಜಂಗಮರಿಂದ ಶುರುವಾಗಿ ಸತ್ತಾಗ ಮಾದಿಗ ಸಮಾಜದಿಂದ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮನುಷ್ಯನ ಜೀವನ ಅಂತ್ಯಗೊಳ್ಳುತ್ತದೆ. ಹೀಗಾಗಿ ನಾವು ಮತ್ತು ನೀವು ಇಬ್ಬರೂ ಬೇರೆ ಅಲ್ಲ. ಪ್ರತಿಯೊಂದು ಸಮಾಜಕ್ಕೂ ತಮ್ಮದೇ ಆದ ಕಾಯಕದ ಶ್ರೇಷ್ಠತೆಯಿದೆ. ಹೀಗಾಗಿ ಮಾದಿಗ ಸಮಾಜವೂ ಕೂಡ ಶೇಷ್ಠವಾಗಿದೆ. ಗಾಂಧೀಜಿ ಅವರು ತಮ್ಮನ್ನು ಹರಿಜನ ಅಂತ ಕರೆದಿದ್ದಾರೆ. ಹರಿಜನ ಅಂದ್ರೆ ವಿಷ್ಣು ಪರಮಾತ್ಮನ ಪ್ರೀತಿಗೆ
ಪಾತ್ರರಾದವರು ಎಂದರ್ಥವಿದೆ. ಈ ಸಮಾಜದವರನ್ನು ಎಲ್ಲರೂ ಗೌರವದಿಂದ ಕಾಣಬೇಕು. ಭಾರತ ದೇಶಕ್ಕೆ ಈ ಸಮಾಜದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಕೊಟ್ಟಿದ್ದಾರೆ. ಮಾದಿಗ ಸಮಾಜಕ್ಕೆ ಅನ್ಯಾಯವಾದಾಗ ನಾವೆಲ್ಲರೂ ಅವರ ಬೆಂಬಲಕ್ಕೆ ನೀಲ್ಲಬೇಕು. ಸಮಾಜದ ಬಂಧುಗಳು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಸಾನಿಧ್ಯವಹಿಸಿದ್ದ ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ಮಾದಿಗ ಸಮಾಜಕ್ಕೆ ಹುಬ್ಬಳ್ಳಿ ಬಳಿ 85 ಎಕರೆ ಜಮೀನು ಮಂಜೂರು ಮಾಡಿದ್ದು, ಅಲ್ಲಿ ಸಮಾಜದ 5 ಸಾವಿರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಸತಿ ಶಾಲೆ ನಿರ್ಮಾಣ ಮಾಡಲಾಗುವುದು ಎಂದ ಅವರು ಸಮಾಜದ ಯುವಕರು ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರ ಬಂದು ಶಿಕ್ಷಣ ಪಡೆದುಕೊಂಡು ಉದ್ಯೋಗ ಹಿಡಿಯಬೇಕು. ಶಿಕ್ಷಣವಂತರಾದಾಗ ಮಾತ್ರ ಮಾದಿಗ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಅರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ. ಅದ್ದರಿಂದ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು.

ಹಿರಿಯೂರು ಕೋಡಿಹಳ್ಳಿ ಮಠದ ಷಡಾಕ್ಷರಮುನಿ ಸ್ವಾಮೀಜಿ ಮಾತನಾಡಿ, ಚುನಾವಣೆ ಬಂದಾಗ
ರಾಜಕೀಯ ಪಕ್ಷಗಳು ಮಾದಿಗರಿಗೆ ಟಿಕೆಟ್ ಕೊಡುವಾಗ ಮೀನಾಮೇಷ ಎಣಿಸದೇ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು. ಭಕ್ತರು ಸಹ ಮಠಾಧೀಶರನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತಗೊಳಿಸಬೇಡಿ ಎಂದು ಮನವಿ ಮಾಡಿದರು.

ನಿವೃತ್ತ ಪ್ರಾಂಶುಪಾಲರಾದ ಪ್ರೋ.ಟಿ.ರಾಜಪ್ಪ ಅವರು ಮಾದಿಗ ಸಮಾಜದ ಸ್ಥಿತಿಗತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್, ನಂದಿಹಳ್ಳಿ ಹಾಲಪ್ಪ, ಪುರಸಭೆ ಅಧ್ಯಕ್ಷ ಹಾರಾಳು ಅಶೋಕ್, ಮುಖಂಡರಾದ ಎಂ.ಬಿ.ಯಶವಂತಗೌಡ, ಶಶಿಧರ ಪೂಜಾರ್, ಎಂ.ಟಿ.ಸುಭಾಶ್ಚಂದ್ರ ಮಾತನಾಡಿದರು. ಹೊಸಪೇಟೆ ಮಾತಂಗ ಮಹರ್ಷಿ ಸೇವಾಶ್ರಮದ ಪೂರ್ಣನಂದ ಭಾರತಿ ಸ್ವಾಮೀಜಿ ಸಾನಿಧ್ಯವಹಿಸಿದ್ದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಪಟ್ಟಣದ ಹಿರೆಕೆರೆ ವೃತ್ತದಿಂದ ಮಾದಿಗ ಸಮಾಜದ ಬಂಧುಗಳು ಹಲಗಿ ವಾದ್ಯದೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು. ಅಂಬೇಡ್ಕರ್ ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ ಅಧ್ಯಕ್ಷತೆವಹಿಸಿದ್ದರು.

ಮುಖಂಡರಾದ ಕಣವಿಹಳ್ಳಿ ಮಂಜುನಾಥ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಮುಖಂಡರಾದ ಎನ್.ಕೊಟ್ರೇಶ್, ಹೆಚ್.ಬಿ.ಪರುಶುರಾಮಪ್ಪ, ಕೆಪಿಸಿಸಿ ಕಾರ್ಯದರ್ಶಿ ಕವಿತಾರೆಡ್ಡಿ, ಐಗೋಳ್ ಚಿದಾನಂದ, ಅಂಬಾಡಿ ನಾಗರಾಜ್, ಬೇಲೂರು ಅಂಜಪ್ಪ, ಮುಖಂಡರಾದ ಹುಲಿಕಟ್ಟಿ ಚಂದ್ರಪ್ಪ, ಮೈದೂರು ಓ.ರಾಮಪ್ಪ, ಮತ್ತಿಹಳ್ಳಿ ಪಿ.ರಾಮಪ್ಪ, ಓ.ಮಹಾಂತೇಶ್, ಪುಣಬಗಟ್ಟಿ ನಿಂಗಪ್ಪ, ಕಬ್ಬಳ್ಳಿ ಪರಸಪ್ಪ, ಗೌರಿಹಳ್ಳಿ ಮಂಜಪ್ಪ, ಮತ್ತಿಹಳ್ಳಿ ಶಿವಣ್ಣ, ಅರಸೀಕೆರೆ ಕೆ.ಡಿ.ಅಂಜಿನಪ್ಪ, ಕಲ್ಲಹಳ್ಳಿ ಹನುಮಂತಪ್ಪ, ಅರಸೀಕೆರೆ ಪೂಜಾರ್ ಮರಿಯಪ್ಪ,
ಕೊಂಗಹೊಸೂರು ಶಿವಣ್ಣ, ನೀಲಗುಂದ ಸಣ್ಣಪ್ಪ, ಶೃಂಗಾರದೋಟ ನಿಂಗರಾಜ್, ಕಬ್ಬಳ್ಳಿ ಮೈಲಪ್ಪ, ಪುಣಬಗಟ್ಟ ಆರ್.ಕೆ.ಮಂಜಪ್ಪ, ಭಂಗಿ ಚಂದ್ರಪ್ಪ, ಭಂಗಿ ರಮೇಶ್, ನಂದಿಬೇವೂರು ಚಾರೆಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಕುಮಾರ್ ಪುಣಬಗಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಸಮಿತಿ ಸದಸ್ಯರಾದ ಅಲಗಿಲವಾಡ ಎ.ಎಂ.ವಿಶ್ವನಾಥ್, ಹುಣಸಿಹಳ್ಳಿ ಕೋಟ್ರಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಪತ್ರಕರ್ತರ ಧ್ವನಿ ಸಂಘದ ತಾಲ್ಲೂಕು ಅಧ್ಯಕ್ಷ ಮಾಳ್ಗಿ ಮಂಜುನಾಥ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಉಪಾಧ್ಯಕ್ಷ ಜೈರಾಜ್ ಮತ್ತಿತರರು ಉಪಸ್ಥಿತರಿದ್ದರು.

ಹುಬ್ಬಳ್ಳಿ : ದೇಶದ್ಯಂತ ಪೇಸಿಎಂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.‌ಇದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದರ ಮಾದರಿಯಲ್ಲಿಯೇ ವಾಣಿಜ...
28/09/2022

ಹುಬ್ಬಳ್ಳಿ : ದೇಶದ್ಯಂತ ಪೇಸಿಎಂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.‌ಇದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದರ ಮಾದರಿಯಲ್ಲಿಯೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಬೆಂಗಳೂರು ಪೇಮೇಯರ್ ಅಭಿಯಾನ ಆರಂಭವಾಗಿದೆ. ಪೇ ಸಿಎಂ ಚರ್ಚೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಪೇ ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೇಯರ್ ಈರೇಶ್ ಅಂಚಟಗೇರಿ ವಿರುದ್ದ ಪೇ ಮೇಯರ್ ಅಭಿಯಾನ ಸದ್ದು ಮಾಡಿದೆ. ಕೈ ನಾಯಕರಿಂದ ಪೇ ಮೇಯರ್ ಅಭಿಯಾನ ಆರಂಭವಾಗಿದ್ದು, ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮದ ಹೆಸರಲ್ಲಿ ಸುಮಾರು 1.5 ಕೋಟಿ ದುಂದು ವೆಚ್ಚ ಮಾಡಿದ್ದಕ್ಕೆ ಪೇ ಮೇಯರ್ ಅಭಿಯಾನ ಆರಂಭಿಸಿದ್ದಾರೆ ಎನ್ನಲಾಗಿದ್ದು, ಪೆಂಡಾಲ್ ಹಾಕಿದ ನಂತರ ಕೊಟೇಶನ್ ಕೇಳಿ ಹುಬ್ಬಳ್ಳಿಯ ಮಾನ ಕಳೆದ ಮೇಯರ್ ತಕ್ಷಣ ರಾಜೀನಾಮೆ ಕೊಡಿ ಎಂದು ಅಭಿಯಾ‌ನ ನಡೆಸಿದ್ದಾರೆ. ಸುಧೀರ್ ಕುಲಕರ್ಣಿ

https://bharathvaibhav.com/after-pay-cm-pay-mayor-went-viral-on-social-media/

ಹುಬ್ಬಳ್ಳಿ : ದೇಶದ್ಯಂತ ಪೇಸಿಎಂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.‌ಇದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದರ ಮಾದರಿಯಲ್...

ಹುಬ್ಬಳ್ಳಿ : ದೇಶದ್ಯಂತ ಪೇಸಿಎಂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.‌ಇದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದರ ಮಾದರಿಯಲ್ಲಿಯೇ ವಾಣಿಜ...
28/09/2022

ಹುಬ್ಬಳ್ಳಿ : ದೇಶದ್ಯಂತ ಪೇಸಿಎಂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.‌ಇದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದರ ಮಾದರಿಯಲ್ಲಿಯೇ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಬೆಂಗಳೂರು ಪೇಮೇಯರ್ ಅಭಿಯಾನ ಆರಂಭವಾಗಿದೆ.

ಪೇ ಸಿಎಂ ಚರ್ಚೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಪೇ ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೇಯರ್ ಈರೇಶ್ ಅಂಚಟಗೇರಿ ವಿರುದ್ದ ಪೇ ಮೇಯರ್ ಅಭಿಯಾನ ಸದ್ದು ಮಾಡಿದೆ.

ಕೈ ನಾಯಕರಿಂದ ಪೇ ಮೇಯರ್ ಅಭಿಯಾನ ಆರಂಭವಾಗಿದ್ದು, ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮದ ಹೆಸರಲ್ಲಿ ಸುಮಾರು 1.5 ಕೋಟಿ ದುಂದು ವೆಚ್ಚ ಮಾಡಿದ್ದಕ್ಕೆ ಪೇ ಮೇಯರ್ ಅಭಿಯಾನ ಆರಂಭಿಸಿದ್ದಾರೆ ಎನ್ನಲಾಗಿದ್ದು, ಪೆಂಡಾಲ್ ಹಾಕಿದ ನಂತರ ಕೊಟೇಶನ್ ಕೇಳಿ ಹುಬ್ಬಳ್ಳಿಯ ಮಾನ ಕಳೆದ ಮೇಯರ್ ತಕ್ಷಣ ರಾಜೀನಾಮೆ ಕೊಡಿ ಎಂದು ಅಭಿಯಾ‌ನ ನಡೆಸಿದ್ದಾರೆ.

ಸುಧೀರ್ ಕುಲಕರ್ಣಿ

ಯಕ್ಷಂಬಾ: ದ್ವಿಚಕ್ರ ವಾಹನ ಹಾಗೂ ಮಾಕ್ಷಿಕ್ಯಾಬ (ಲಾರಿ) ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸಮೀಪದ ಬೋರಗಾಂವ ಪಟ್ಟಣದ ಯುವಕನೋರ್ವ ಸ್ಥಳದಲ್ಲಿ...
28/09/2022

ಯಕ್ಷಂಬಾ: ದ್ವಿಚಕ್ರ ವಾಹನ ಹಾಗೂ ಮಾಕ್ಷಿಕ್ಯಾಬ (ಲಾರಿ) ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸಮೀಪದ ಬೋರಗಾಂವ ಪಟ್ಟಣದ ಯುವಕನೋರ್ವ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಬೋರಗಾಂವ-ಇಚಲಕರಂಜಿ ಮಾರ್ಗದ ಮಧ್ಯೆ ಸೋಮವಾರ ಸಂಜೆ ಸಂಭವಿಸಿದೆ. ರಾಮಾ ಕೃಷ್ಣಾ ಸನದಿ (32) ಮೃತಪಟ್ಟ ಯುವಕ. ರಾಮಾ ಇವರು ಇಚಲಕರಂಜಿಯಿಂದ ಬೋರಗಾಂವ ಪಟ್ಟಣಕ್ಕೆ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಮ್ಯಾಕ್ಸಿಕ್ಯಾಬ ಲಾರಿ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಡಿವೈಎಸ್‌ಪಿ ಬಸವರಾಜ ಯಲಿಗಾರ, ಸದಲಗಾ ಪಿ.ಎಸ್.ಐ. ಎಚ್‌. ಭರತಗೌಡಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿ ಚಾಲಕ ಪರಾರಿಯಾಗಿದ್ದಾನೆಸದಲಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದರೆ. ವರದಿ : ರಾಜು ಮುಂಡೆ

https://bharathvaibhav.com/a-young-man-died-in-an-accident/

ಯಕ್ಷಂಬಾ: ದ್ವಿಚಕ್ರ ವಾಹನ ಹಾಗೂ ಮಾಕ್ಷಿಕ್ಯಾಬ (ಲಾರಿ) ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸಮೀಪದ ಬೋರಗಾಂವ ಪಟ್ಟಣದ ಯುವಕನೋರ್ವ ....

28/09/2022
ರಾಯಚೂರು: ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ತಾಲೂಕಿನ ಬಾಯಿದೊಡ್...
27/09/2022

ರಾಯಚೂರು: ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ತಾಲೂಕಿನ ಬಾಯಿದೊಡ್ಡಿ ಗ್ರಾಮದಲ್ಲಿ ನಡೆಯಿತು ಸಭೆಯಲ್ಲಿ ಲಿಂಗಸೂರು ಹಾಗೂ ಮುದಗಲ್ಲ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾಯ೯ಕತ೯ರು ಭಾಗಿ.. ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ಮೊಹಮ್ಮದ್ ಹಾರಿಸ್ ನಲಪಾಡ್ ಭಾರತ್ ಜೋಡು ಪಾದ ಯಾತ್ರೆ ಪೂರ್ವ ಭಾವಿ ಸಭೆ ನಡೆಸಿ ಜಿಲ್ಲೆಯ ಯುವ ಘಟಕ ಅಧ್ಯಕ್ಷರನ್ನು ಭೇಟಿ ಮಾಡಿದರು. ರಾಯಚೂರು ಜಿಲ್ಲಾಧ್ಯಕ್ಷ ಅರುಣ್ ಮುದ್ಗಲ್ ಬ್ಲಾಕ್ ಅಧ್ಯಕ್ಷ ಮುನ್ನ ವಾಸೀಂ ಲಿಂಗಸೂರು ಬ್ಲಾಕ್ ಅಧ್ಯಕ್ಷ ಕುಪ್ಪಣ್ಣ ಅಸ್ಲಾಂ ಹಟ್ಟಿ ಉಪಸ್ಥಿತರಿದ್ದರು.. ವರದಿ: ಮಂಜುನಾಥ ಕುಂಬಾರ

https://bharathvaibhav.com/bharat-jodu-pada-yatra-purva-bhavi/

ರಾಯಚೂರು: ಭಾರತ್ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ತಾಲೂಕ....

ರಬಕವಿ-ಬನಹಟ್ಟಿ : ಮಾಜಿ ಮುಖ್ಯಮಂತ್ರಿ ಹಾಗೂ ವಿಧಾಸಭಾ ವಿರೋಧಪಕ್ಷದ ನಾಯಕ ಎಸ್.ಸಿದ್ರಾಮಯ್ಯನವರಿಗೆ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಧುರೀಣ ಹಾಗ...
27/09/2022

ರಬಕವಿ-ಬನಹಟ್ಟಿ : ಮಾಜಿ ಮುಖ್ಯಮಂತ್ರಿ ಹಾಗೂ ವಿಧಾಸಭಾ ವಿರೋಧಪಕ್ಷದ ನಾಯಕ ಎಸ್.ಸಿದ್ರಾಮಯ್ಯನವರಿಗೆ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಧುರೀಣ ಹಾಗೂ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಕಮೀಟಿಯ ಉಪಾಧ್ಯಕ್ಷ ಮಹಾಲಿಂಗಪುರದ ಡಾ|| ಎ. ಆರ್. ಬೆಳಗಲಿ ಶ್ರೀ ಬಸವೇಶ್ವರರ ಬೆಳ್ಳಿ ಮೂರ್ತಿ ಕಾಣಿಕೆಯಾಗಿ ನೀಡಿದರು. ಮುಧೋಳದಲ್ಲಿ ನಡೆದ ತಿಮ್ಮಾಪೂರರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕಾಣಿಕೆ ನೀಡಿ, ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜನಪರ ಸರಕಾರ ನೀಡಿದ ಮಾಜಿ ಮುಖ್ಯಮಂತ್ರಿಗಳಿಗೆ ಬಸವೇಶ್ವರರ ಮೂರ್ತಿ ನೀಡಬೇಕೆಂಬುದು ಬಹುದಿನ ಕನಸಾಗಿತ್ತು. ಇಂದು ಅದು ನನಸಾಗಿರುವುದು ಬಹಳ ಸಂತಸವಾಗಿದೆ ಎಂದು ಡಾ|| ಎ.ಆರ್.ಬೆಳಗಲಿ ಹೇಳಿದರು. ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮೀತಿಯ ಅಧ್ಯಕ್ಷ ಎಂ.ಬಿ.ಪಾಟೀಲ, ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ, ಮಾಜಿ ರಾಮಲಿಂಗಾರಡ್ಡಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅರುಣ ಗಾಣಿಗೇರ, ಯಶವಂತ ಗೊಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವರದಿ : ಮಾಧವಾನಂದ ಪ್ರಭು ಕೋಪರ್ಡೆ

https://bharathvaibhav.com/silver-statue-presented-to-former-chief-minister-sidramaiah/

ರಬಕವಿ-ಬನಹಟ್ಟಿ : ಮಾಜಿ ಮುಖ್ಯಮಂತ್ರಿ ಹಾಗೂ ವಿಧಾಸಭಾ ವಿರೋಧಪಕ್ಷದ ನಾಯಕ ಎಸ್.ಸಿದ್ರಾಮಯ್ಯನವರಿಗೆ ತೇರದಾಳ ಮತಕ್ಷೇತ್ರದ ಕಾಂಗ್ರೆಸ....

ರಬಕವಿ-ಬನಹಟ್ಟಿ : ಹಟಗಾರ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಜನತಾ ಶಿಕ್ಷಣ ಸಂಘದ ನಿರ್ದೇಶಕ ಬನಹಟ್ಟಿಯ ರಾಜಶೇಖರ (ಶಂಕರ) ಸೋರಗಾಂವಿ ಅಧಿಕಾರ ಸ್...
27/09/2022

ರಬಕವಿ-ಬನಹಟ್ಟಿ : ಹಟಗಾರ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಜನತಾ ಶಿಕ್ಷಣ ಸಂಘದ ನಿರ್ದೇಶಕ ಬನಹಟ್ಟಿಯ ರಾಜಶೇಖರ (ಶಂಕರ) ಸೋರಗಾಂವಿ ಅಧಿಕಾರ ಸ್ವೀಕರಿಸಿದರು. ಶ್ರೀ ಚಿಕ್ಕರೇವಣಸಿದ್ಧ ಶಿವಶರಣರ ಸಾನಿಧ್ಯದಲ್ಲಿ ಅಕ್ಕಲಕೋಟೆಯ ಸಂಸ್ಥಾನ ಮಠದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ, ಅವರು ಸಮಾಜದ ಬಾಂಧವರ ಸಹಕಾರ ಬಹಳ ಮುಖ್ಯವಾಗಿದ್ದು, ಹಟಗಾರ ಸಮಾಜ ಇನ್ನಷ್ಟು ಬಲಪಡಿಸಲು ಪ್ರಯತ್ನ ಮಾಡುತ್ತೇನೆ. ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಏಳ್ಗಿಗೆ ಶ್ರಮಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ರಾಜಶೇಖರ ಮಾಲಾಪೂರ, ರವೀಂದ ಬಾಡಗಿ, ರಾಜು ಬೀಳಗಿ, ಸೋಮನಾಥ ಗೊಂಬಿ, ಓಂಪ್ರಕಾಶ ಮನಗೂಳಿ, ದೇವೇಂದ್ರ ಶೀಲವಂತ, ಈರಪ್ಪ ಕೊಣ್ಣೂರ, ಮಲ್ಲಿಕಾರ್ಜುನ ಸೋರಗಾಂವಿ, ಸದಾಶಿವ ತಟಕೋಟಿ, ಸುರೇಶ ಬೀಳಗಿ, ಅಶೋಕ ಮಹಾಜನ, ಪರಮೇಶ್ವರಿ ಸಹಕಾರಿ ಸಂಘದ ಅಧ್ಯಕ್ಷೆ ಮಾಲಾ ಬಾವಲತ್ತಿ, ಶಾಂತಾ ಮಂಡಿ, ದಾನೇಶ್ವರಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶಾಂತಾ ಸೋರಗಾಂವಿ, ಗಂಗಪ್ಪಾ ಮಂಟೂರ ಸೇರಿದಂತೆ ರಬಕವಿ-ಬನಹಟ್ಟಿ, ಜಮಖಂಡಿ ತಾಲೂಕಿನ ಹಟಗಾರ ಸಮಾಜ ಬಾಂಧವರು ಉಪಸ್ಥಿತರಿದ್ದರು....

https://bharathvaibhav.com/rajashekar-soragami-as-national-vice-president-of-hatagara-samaj/

ರಬಕವಿ-ಬನಹಟ್ಟಿ : ಹಟಗಾರ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಜನತಾ ಶಿಕ್ಷಣ ಸಂಘದ ನಿರ್ದೇಶಕ ಬನಹಟ್ಟಿಯ ರಾಜಶೇಖರ (ಶಂಕರ) ಸೋರಗಾಂವಿ ಅ...

ಕಲಘಟಗಿ: ರಾಜಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಜನಸಂಖ್ಯೆ ಆಧಾರಿತವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಆಗ್...
27/09/2022

ಕಲಘಟಗಿ: ರಾಜಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಜನಸಂಖ್ಯೆ ಆಧಾರಿತವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಆಗ್ರಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಸೇವಾ ಸಂಘದ ತಾಲೂಕಾ ಮುಖಂಡರು ತಹಶೀಲ್ದಾರ ಯಲ್ಲಪ್ಪ ಗೋಣೆಣ್ಣವರಿಗೆ ಮನವಿ ನೀಡಿದರು. ಪಟ್ಟಣದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ದಿ ೯ರಂದು ಆಚರಿಸುವ ವಾಲ್ಮೀಕಿ ಜಯಂತಿ ಅಂಗವಾಗಿ ಕರೆದ ಪೂರ್ವಬಾವಿ ಸಭೆಯಲ್ಲಿ ಸಂಘದ ತಾಲೂಕಾ ಅಧ್ಯಕ್ಷರಾದ ಫಕ್ಕೀರಗೌಡ ದೊಡಮನಿ ಮಾತನಾಡಿ, ರಾಜನಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ೨೩೦ ದಿವಸಗಳಿಂದ ಅಹೋರಾತ್ರಿ ಧರಣ ಯನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಸುತ್ತಿದ್ದು ಸರಕಾರ ಇದುವರೆಗೂ ಇದನ್ನು ಗಂಭೀರವಾಗಿ ಪರಿಗಣಸಿಲ್ಲ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಬರುವ ೯ನೇ ದಿನಾಂಕದoದು ನಡೆಸುವ ವಾಲ್ಮೀಕಿ ಜಯಂತಿಗೆ ರಾಜ್ಯಾದ್ಯಂತ ಶಾಸಕರನ್ನು, ಸಚೀವರನ್ನು, ಸಂಘಟನೆಯ ಮೂಲಕ ಕಾರ್ಯಕ್ರಮಕ್ಕೆ ಭಾಗವಹಿಸದಂತೆ ತಡೆಯುವುದಾಗಿ ತಿಳಿಸಿದರು....

https://bharathvaibhav.com/maharshi-valmiki-jayanti-celebration-pre-meeting-calls-for-increase-in-scst-reservation-2/

ಕಲಘಟಗಿ: ರಾಜಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಜನಸಂಖ್ಯೆ ಆಧಾರಿತವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್.....

ರೋಣ : ತಾಲೂಕಿನ ಬಸರಕೋಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲಿ.ಬಿಜಿಪಿ ಮಂಡಲ ಅಧ್ಯಕ್ಷ ಮುತ್ತನ ಕಡಗದ ಅವರ ನಾಯಕತ್ವದಲಿ. ಪ್ರಧಾನ ಮಂತ್ರಿ ನರೇಂದ...
27/09/2022

ರೋಣ : ತಾಲೂಕಿನ ಬಸರಕೋಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲಿ.ಬಿಜಿಪಿ ಮಂಡಲ ಅಧ್ಯಕ್ಷ ಮುತ್ತನ ಕಡಗದ ಅವರ ನಾಯಕತ್ವದಲಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 72ನೇ ಹುಟ್ಟು ಹಬ್ಬದ ಪ್ರಯುಕ್ತವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು. ಗ್ರಾಮೀಣ ಪ್ರದೇಶದಲಿ ಜನರು ಆರೋಗ್ಯವಂತರಾಗಿ ಇರುಲು ದೇಶದ ಪ್ರಧಾನಿಯ ಆಶೇಯ ದಂತೆ ಉಚಿತ ಆರೋಗ್ಯ ಕಾರ್ಡ ವಿತರಣಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರವು ಜಾರಿಗೆ ತಂದಿರುತ್ತದೆ. ಎಲ್ಲಾ ನಾಗರಿಕರು ಉಪಯೋಗ ಪಡೆಯಬೇಕು ಎಂದು ಮುತ್ತನ ಕಡಗದ ಪ್ರಸ್ಥವಿಕವಾಗಿ ಮಾತನಾಡಿದರು. ಮಾಜಿ ಜಿ ಪಂ ಅಧ್ಯಕ್ಷ ನಿಂಗಪ್ಪ ಕೆಂಗಾರ ಮಾಜಿ ತಾ ಪಂ ಉಪಾಧ್ಯಕ್ಷೆ ಇಂದಿರಾ ತೇಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಟಾಕಪ್ಪ ಜೊಂಡಿ. ಇನೂ ಅನೇಕರು ಭಾಗವಹಿಸಿದರು

https://bharathvaibhav.com/free-health-checkup-camp/

ರೋಣ : ತಾಲೂಕಿನ ಬಸರಕೋಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲಿ.ಬಿಜಿಪಿ ಮಂಡಲ ಅಧ್ಯಕ್ಷ ಮುತ್ತನ ಕಡಗದ ಅವರ ನಾಯಕತ್ವದಲಿ. ಪ್ರಧಾನ ಮಂತ್...

ಸೇಡಂ: ತಾಲೂಕಿನ ತಾಲೂಕಿನ ಸರಕಾರಿ ಹಿರಿಯ ಮತ್ತು ಪ್ರೌಡ ಶಾಲೆಗಳಲ್ಲಿ ಒಲೆ ಉರಿಸಲು ಸಿಲೆಂಡರ್ ವ್ಯವಸ್ಥೆ ಇಲ್ಲಾದೆ ಬಿಸಿಯೂಟ ಮಕ್ಕಳಿಗೆ ಹಾಕುತ್ತಿ...
27/09/2022

ಸೇಡಂ: ತಾಲೂಕಿನ ತಾಲೂಕಿನ ಸರಕಾರಿ ಹಿರಿಯ ಮತ್ತು ಪ್ರೌಡ ಶಾಲೆಗಳಲ್ಲಿ ಒಲೆ ಉರಿಸಲು ಸಿಲೆಂಡರ್ ವ್ಯವಸ್ಥೆ ಇಲ್ಲಾದೆ ಬಿಸಿಯೂಟ ಮಕ್ಕಳಿಗೆ ಹಾಕುತ್ತಿಲ್ಲ ಕೆಲವು ಗ್ರಾಮಗಳಲ್ಲಿ ಶಾಲೆ ಕೇಂದ್ರಬಿಂದುವಾಗಿದ್ದು 4-5 ಕಿಲೋಮೀಟರ್ ದೂರದಿಂದ ಮಕ್ಕಳು ಬೇಳಿಗೆ ಕಾಲ್ನಡಿಗೆಯಲ್ಲಿ ಶಾಲೆಗೆ ಬರುತ್ತಾರೆ ಮನೆಯಲ್ಲಿ ಊಟದ ವ್ಯವಸ್ಥೆ ಸರಿಯಾದ ಸಮಯಕ್ಕೆ ಆಗುವುದಿಲ್ಲ ಶಾಲೆಗೆ ಬಂದರು ಮದ್ಯಾಹ್ನ ಊಟ ಇಲ್ಲಾದೆ ಏಷ್ಟು ವಿದ್ಯಾರ್ಥಿಗಳು ಶಾಲೆ ಬಿಟ್ಟು ಮನೆಯಲ್ಲೇ ಉಳಿಯುತ್ತಿದ್ದಾರೆ ಈ ಸಮಸ್ಯೆ ನಡೆದು ತಿಂಗಳು ಗತಿಸಿದರೂ ಇಲ್ಲಿಯವರೆಗೆ ಯಾವುದೇ ರೀತಿ ಸ್ಪಂದನೆ ಸಿಗುತ್ತಿಲ್ಲ ಅತಿ ಶೀಘ್ರದಲ್ಲೇ ಪ್ರತಿ ಶಾಲೆಗಳಿಗೆ ಸಿಲೆಂಡರ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ರಾಮಚಂದ್ರ ಗುತ್ತೇದಾರ್ ಅವರು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದರು ಹಾಗೆ ಈ ಸಮಸ್ಯೆ ಬಗ್ಗೆ ಗಮನ ಹರಿಸಿ ಎರಡು ದಿನಗಳಲ್ಲಿ ಸಿಲೆಂಡರ್ ವ್ಯವಸ್ಥೆ ಮಾಡಿಕೊಡಬೇಕು ಇಲ್ಲವಾದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯ ಎದುರುಗಡೆ ಶಾಲಾ ಮಕ್ಕಳ ಪರವಾಗಿ ಉಪವಾಸ ಸತ್ಯಾಗ್ರಹ ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದರು....

https://bharathvaibhav.com/there-is-a-request-for-immediate-provision-of-gas-cylinders-in-government-schools-without-gas-cylinders/

ಸೇಡಂ: ತಾಲೂಕಿನ ತಾಲೂಕಿನ ಸರಕಾರಿ ಹಿರಿಯ ಮತ್ತು ಪ್ರೌಡ ಶಾಲೆಗಳಲ್ಲಿ ಒಲೆ ಉರಿಸಲು ಸಿಲೆಂಡರ್ ವ್ಯವಸ್ಥೆ ಇಲ್ಲಾದೆ ಬಿಸಿಯೂಟ ಮಕ್ಕಳಿಗ...

Address

Belgaum
590001

Alerts

Be the first to know and let us send you an email when Bharat Vaibhav posts news and promotions. Your email address will not be used for any other purpose, and you can unsubscribe at any time.

Contact The Business

Send a message to Bharat Vaibhav:

Videos

Share