07/09/2024
```ಗೌರಿ ಗಣೇಶ ಹಬ್ಬದ ಶುಭಾಶಯಗಳು```
*ಯುಗ ಸಂದಿಕಾಲದ ಪರಿವರ್ತನೆಗಾಗಿ ನಮ್ಮ ಗಣಪನ ಹಬ್ಬ.*
ನಮ್ಮ ಸಂಸ್ಕೃತಿಯಲ್ಲಿ ಹಬ್ಬ - ಹರಿದಿನ ಜಾತ್ರೆ ಉತ್ಸವಗಳಿಗೆ ಯಾವುದೇ ಕೊರತೆಯಿಲ್ಲ.
ಶ್ರಾವಣ ಮಾಸದಿಂದ ಆರಂಭವಾದ ಪೂಜಾ ಶುಭ ಕಾರ್ಯಕ್ರಮಗಳು ಕೊನೆಗೊಳ್ಳುವುದು ಅಶ್ವಯುಜ ಮಾಸದವರೆಗೆ ನಿರಂತರವಾಗಿ ಒಂದಲ್ಲ ಒಂದು ದೇವರ ಉತ್ಸವ ಹಬ್ಬ ಹರಿದಿನ ಮಂಗಳ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ.
ನಮ್ಮ ಸಮಾಜದಲ್ಲಿ ಹಬ್ಬಗಳು ಕೇವಲ ವೈಯಕ್ತಿಕ ಆಚರಣೆಗೆ ಸೀಮಿತವಾಗಿವೆ.
ನಾನು, ನನ್ನದು, ಎನ್ನುವ ಬದಲು ನಾವು , ನಮ್ಮದು ಎನ್ನುವ ಭಾವ ನಿರ್ಮಾಣವಾಗಬೇಕಾಗಿದೆ.
ಪರಿವರ್ತನೆಯ ಹರಿಕಾರ ಲೋಹಪುರುಷರಾದ ಎಂದೇ ಹೆಸರಾದ ಲೋಕಮಾನ್ಯ ಶ್ರೀ ಬಾಲಗಂಗಾಧರ ತಿಲಕರು ಗಣೇಶನ ಉತ್ಸವವನ್ನು ವೈಯಕ್ತಿಕ ಹಿನ್ನೆಲೆಯಲ್ಲಿ ಆಚರಿಸುವಂತೆ ಮಾಡದೆ,
ಗಣೇಶನ ಉತ್ಸವ ಸಮಾಜದ ಸಾಮಾಜಿಕ ಸಾಮರಸ್ಯತೆ, ಸಾಂಸ್ಕೃತಿಕ ಚಟುವಟಿಕೆಗಳ ಮತ್ತು ಹಿಂದೂ ಸಮಾಜದ ಏಕತೆ ಹಾಗೂ ಸ್ವದೇಶಿ ಭಾವಜಾಗರಣ ನಿರ್ಮಾಣಕ್ಕಾಗಿ ಈ ಉತ್ಸವವನ್ನು ಆರಿಸಿಕೊಂಡು ಈ ಕಾರ್ಯಕ್ರಮ ಕೇವಲ ಉತ್ಸವ ವಾಗದೆ ಸಮಾಜ ಆಂದೋಲನವನ್ನಾಗಿ ಮಾಡಿದ ಕೀರ್ತಿ ಶ್ರೇಯಸ್ಸು ತಿಲಕರಿಗೆ ಸಲ್ಲಬೇಕು.
ವಯಸ್ಸಿನ ಇತಿ - ಮಿತಿ ಇಲ್ಲದೆ, ಲಿಂಗ -ಭೇದವಿಲ್ಲದೆ ಮೇಲು-ಕೀಲುಗಳಿಲ್ಲದೆ ಮತ್ತು ಸ್ಫೃಶ್ಯ- ಅಸ್ಪೃಶ್ಯ ಭಾವನೆಗಳಿಲ್ಲದೆ ಸದಾ ಕಾಲ ಸರ್ವದ ಎಲ್ಲರಿಂದಲೂ ಪೂಜೆ ಪೂಜೆಗೊಳ್ಳುವವನು ವಿಘ್ನ ವಿನಾಯಕ ವಿಘ್ನೇಶ,
ಇಂದಿನ ದೇಶ ಕಾಲ ಪರಿಸ್ಥಿತಿ ಅನುಸಾರ ಗಣಪತಿ ಆಚರಣೆಯಲ್ಲಿ ಗ್ರಾಮ / ನಗರಗಳಲ್ಲಿ ಇರುವ ಯುವ ವೃoದಗಳು ಅಗತ್ಯ ಪರಿವರ್ತನೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇಂದು ಬಂದಿದೆ,
ಮತ್ತೆ ಭಾದ್ರಪದ ಮಾಸ ಬಂದಿದೆ .ಗೌರಿ ಗಣೇಶ ಹಬ್ಬದ ಸಡಗರ -ಸಂಭ್ರಮ ಕ್ಕೆ ಸಮಸ್ತ ದೇಶವಾಸಿಗಳು ಸಜ್ಜಾಗಿದ್ದಾರೆ ಸಕಲರ ಪ್ರೀತಿ ಪಾತ್ರಗಳಿಗೆ ಗೌರವಕ್ಕೆ ಒಡೆಯನಾದ ಆ ಮಹಾ ಗಣಪನ ಮಹಿಮೆಯರಿಯದ ಭಾರತೀಯ ಇರಲು ಸಾದ್ಯವೇ! ಇಲ್ಲ...
*ಆಚರಿಸಬೇಕಾದ ರೀತಿ*
*ಗಣೇಶನ ಉತ್ಸವದ ಆಚರಣೆ ಭಕ್ತಿ ಭಾವ ಸಂಗೀತದಿಂದ ಕೂಡಿರಲಿ,
*ಪರಿಸರಕ್ಕೆ ಪೂರಕವಾದ ವಸ್ತುಗಳ ಬಳಕೆ ಆಗಲಿ.
*ಸ್ವದೇಶಿ ಭಾವ ಜಾಗರಣವಾಗಲಿ.
*ಧರಿಸುವ ವೇಷ ಆಡುವ ಭಾಷೆ ಬಂದ ಭಕ್ತಾದಿಗಳಿಗೆ ಆನಂದ ಉಂಟುಮಾಡುವಂತೆ ಇರಲಿ.
*ನಿತ್ಯವೂ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವಂತೆ ಆಗಲಿ,
*ಸ್ವದೇಶಿ ಕ್ರೀಡೋತ್ಸವಗಳು ಜರಗಲಿ
*ಸರಳತೆ ಸ್ವಚ್ಛತೆಗೆ ಸದಾ ಗಮನವಿರಲಿ.
*ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ಬಳಸೋಣ.
*ನಾವು ಬದಲಾಗೋಣ, ಸಮಾಜವನ್ನು ಬದಲಾಯಿಸೋಣ.
*ಗಣಪ*
ಗಣಪ ಹಲವು ಭಿನ್ನ ಭಾವಗಳಲ್ಲಿ ಕಲಾವಿದನ ಕೈಯಿಂದ ಅಭಿವ್ಯಕ್ತಗೊಳ್ಳುತ್ತ ,ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ . ಕಾರ್ಗಿಲ್ ಪರ್ವತದಲ್ಲಿ ಸೈನಿಕನಾದ ಗಣೇಶನಾಗಿ ,
ಶಾಲೆಯ ವಿದ್ಯಾರ್ಥಿಯ ವೇಷದಲ್ಲಿ.
ಪರಂನ ವಿಜ್ಞಾನಿಯ ರೂಪದಲ್ಲಿ, ನಾಡಿಗೆ ಅನ್ನ ನೀಡುವ ರೈತನ ವೇಷದಲ್ಲಿ,
ಗರುಡವಾಹನನಾಗಿ, ಅಮರನಾಥದ ಹಿಮಲಿಂಗದಲ್ಲಿ ನಿಂತ ಗಣಪನ್ನಾಗಿ
ಭಕ್ತಿಯಿಂದ ಪೂಜಿಸುತ್ತಾರೆ.
*ಉದ್ದೇಶ*
🚩ಅಂದು ತಿಲಕರು ಕಂಡ ಕನಸು ನನಸಾಗಲಿ ಸಮಾಜದ ಏಕತೆಗಾಗಿ ಮತ್ತು ಹಿಂದೂ ಸಂಘಟನೆಗಾಗಿ ಆರಂಭಿಸಿದರು .
🚩ಗಣೇಶೋತ್ಸವ ವೇದಿಕೆಗಳು ರಾಜಕೀಯ ಭಾಷಣಗಳಿಗೆ, ದೂರು- ದುಮ್ಮಾನಗಳಿಗೆ ವೇದಿಕೆಯಾಗದೆ .
🚩ರಾಷ್ಟ್ರವನ್ನು ಭೀಕರವಾಗಿ ಕಾಡುತ್ತಿರುವ ಭಯೋತ್ಪಾದನೆ,
ಹಿಂದೂ ಸಮಾಜಕ್ಕೆ ಅಂಟಿರುವ ಅಸ್ಪೃಶ್ಯತೆಯ ರೋಗದ ಮುಕ್ತಿಗಾಗಿ ,
🚩ಮತಾಂತರವೆಂಬ ಚಿನ್ನದ ಚೂರಿಯ ಮೂಲಕ ಹಿಂದೂ ಸಮಾಜಕ್ಕೆ ಆಗುತ್ತಿರುವ ಹಾನಿ ಹಾಗೂ ಸಾಮಾಜಿಕ ಕಳಕಳಿಯ ವಿಷಯಗಳು ಮೂಡಿಬರಬೇಕು .
🚩ಗೋ ಸಂರಕ್ಷಣೆ, ಸಾಂಸ್ಕೃತಿಕ ಆಕ್ರಮಣಗಳ ಕುರಿತು ಚಿಂತನೆಯ ನೆಲೆಯಾಗಲಿ,
🚩ಪರಿಸರಕ್ಕೆ ಹೊರೆಯಾಗದ ಬಣ್ಣ ಶಿಲ್ಪ ವಸ್ತುಗಳಿಂದ ಗಣಪನ ಮೂರ್ತಿ ರೂಪ ಪಡೆಯಬೇಕು .
🚩ಆಚರಣೆ ಅತಿರೇಕಕ್ಕೆ ಹೊರಳದೆ ಸಾಮಾಜಿಕ ಪುನರುತ್ಥಾನದ ಮಹತ್ವದ ಮೈಲುಗಲ್ಲಾಗಲಿ ಎಂಬುದೇ ಎಲ್ಲರ ಅಂತರಾಳದ ಆಶಯ .
🚩ನಮ್ಮೂರಿನ ಗಣೇಶೋತ್ಸವ ಆದರ್ಶದ ಗಣೇಶ ಉತ್ಸವವಾಗಲಿ .
🚩ಎಲ್ಲರೂ ಒಂದಾಗಿ ಒಟ್ಟಾಗಿ ಗಣಪತಿಯನ್ನು ಪೂಜಿಸೋಣ
🚩ಸಂಸ್ಕೃತಿ ಅರಳಿಸುವ ಕಾರ್ಯಕ್ರಮಗಳು ಆಗಲಿ.
🚩ಎಲ್ಲರೂ ನಮ್ಮವರು ಎನ್ನುವ ಭಾವ ನಮ್ಮೆಲ್ಲರದಾಗಲಿ
🚩ಗುಡಿಯಿಂದ ಗುಡಿಸಲಿನವರಿಗೂ ಗಣಪತಿಯ ಪೂಜೆ ಮಾಡಿಸೋಣ .
🚩 ನಮ್ಮ ಗಣಪತಿಯ ಉತ್ಸವ ನೊಂದು ಬೆಂದವರಿಗೆ ಸಹಕಾರ ಕೊಡುವ ಗಣಪತಿ ಸಮಿತಿ ನಮ್ಮದಾಗಲಿ .
🚩ಭಕ್ತಿಯ ಅಮಲಿನ ಕುಣಿತ- ಗಲಭೆ ರಹಿತ , ನಮ್ಮ ಉತ್ಸವವಾಗಲಿ.
ಮನುಷ್ಯ ಸ್ವಭಾವತಃ ಸಂಘಜೀವಿ. ಆದಿಮಾನವನಿಂದ ಹಿಡಿದು ಆಧುನಿಕ ಪ್ರಜ್ಞಾವಂತ ನಾಗರೀಕ ನವರೆಗೆ ಮನುಕುಲಕ್ಕೆ ಕರೆದುಕೊಂಡು ಬದುಕಿದ್ದ ಮನುಕುಲದ ನೈಜ ಇತಿಹಾಸ
'ತೇನ ತ್ಯಕ್ತೇನ ಭುಂಜಿತಾ' ಎಂಬ ಉಪನಿಷದೋಕ್ತಿಯ೦ತೆ ತ್ಯಾಗದಿಂದ ಹಂಚಿ ತಿನ್ನುವ ಭಾವ ಹಿಂದೂ ಸಮಾಜದಲ್ಲಿ ರಕ್ತಗತವಾಗಿದೆ.
ಸಮಾಜದ ಆಗು ಹೋಗುಗಳಿಗೆ ಸದಾ ತೆರೆದ ಕಣ್ಣುಗಳಾಗಿ ಸಂಸ್ಕೃತಿ ಪರಂಪರೆಯ ಮಿತಿಯೊಳಗೆ ತಳುಕು ಹಾಕುವ ಹಿಂದೂ ಸಮಾಜಕ್ಕೆ ಒಗ್ಗಟ್ಟಿನ ಅರಿವು ಬಹಳವಾಗೇ ಇದೆ .
ಆಂತರಿಕ ಅಸಹಜ ಕಾರಣಗಳಿಂದ ವಿಘಟಿತ ಹಿಂದೂ ಸಮಾಜವನ್ನು ಒಂದು ಗೂಡಿಸುವ ಅನೇಕ ಪ್ರಯತ್ನಗಳು ಈ ನೆಲದಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಿತ್ತು .ಹಬ್ಬ ಹರಿದಿನಗಳಿಗೆ ಕೊರತೆಯಿಲ್ಲದ ಹಿಂದೂ ಸಮಾಜದಲ್ಲಿ ಸಾಮಾಜಿಕ ಪುನರುತ್ಥಾನದ ಒಂದು ಮಹತ್ವದ ಮೈಲಿಗಲ್ಲಾಗಿ ಗಣಪನ ಹಬ್ಬ ಪಾತ್ರ ವಹಿಸಬಹುದೆ೦ದು ಮೊದಲು ಆಲೋಚಿಸಿದವರೇ ಲೋಕಮಾನ್ಯ ಬಾಲಗಂಗಾಧರ ತಿಲಕರು.
ತಿಲಕರ ಉದ್ದೇಶ ಮತ್ತು ಕಲ್ಪನೆಯ ಸಕಾರಕ್ಕಾಗಿ ಕಾರ್ಯ ಮಾಡೋಣ....
- ಗಣಪತಿ ಬಪ್ಪಾ ಮೋರಯಾ .....
ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು💐💐💐🙏 ==============================.
ಮನೋಹರ ಮಠದ್, ಪ್ರಚಾರಕ್ ,ದೇವಾಲಯ ಸಂವರ್ಧನಾ ಸಮಿತಿ ,ಕರ್ನಾಟಕ ರಾಜ್ಯ ಸಂಯೋಜಕ್.(ಬೆಂಗಳೂರು)