22/06/2023
Agus Indra Udayan established a Gandhi Ashram in Bali, Indonesia in 1976 based on Gandhian principles. Influenced by Mahatma Gandhi's ideals of non- violence, truth, and compassion, this guruji of Indonesia has received our country's highest civilian award Padmasree in recognition of his service. Prime Minister Sri Narendra Modiji, during his visit to Indonesia, had praised Sri Agus Indra Udayan as a great force spreading India's legacy of yoga. The Gandhi Ashram has been training thousands in Hatayoga, Vipassana yoga, Ashtanga yoga. Karmayogi Agus Indra Udayan was honored with the Yoga Ratna award 2023. The award was presented by Sri Dinesh Gundu Rao, Minister for Health and Family welfare. Sri K Govindaraj, political secretary to CM Siddaramaiah felicitated the award winner.
ಅಗಸ್ ಇಂದ್ರ ಉದಯನ್
1976ರಲ್ಲಿಯೇ ಇಂಡೋನೇಷ್ಯಾದ ಬಾಲಿಯಲ್ಲಿ ಒಂದು ಗಾಂಧಿ ಆಶ್ರಮ ಸ್ಥಾಪಿಸಿ, ಗಾಂಧಿ ತತ್ವದ ಆಧಾರದ ಮೇಲೆ ನಡೆಸಿಕೊಂಡು ಬರುತ್ತಿರುವವರು ಅಗಸ್ ಇಂದ್ರ ಉದಯನ್. ಮಹಾತ್ಮ ಗಾಂಧಿ ಅವರ ಅಹಿಂಸಾ, ಸತ್ಯ ಮತ್ತು ಕರುಣಾ ತತ್ವಾದರ್ಶಗಳಿಂದ ಪ್ರಭಾವಿತರಾಗಿರುವ ಇಂಡೋನೇಷ್ಯಾದ ಈ ಗುರೂಜಿಯ ಕಾರ್ಯಕ್ಕೆ ನಮ್ಮ ದೇಶದ ಅತ್ಯುನ್ನತ ಪ್ರಶಸ್ತಿ ಪದ್ಮಶ್ರೀ ದೊರೆತಿದೆ. ಇಂಡೋನೇಷ್ಯಾಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು, ಇಂದ್ರ ಉದಯನ್ ಅವರನ್ನು ಭಾರತ ಪ್ರಾಚೀನ ಪರಂಪರೆ ಯೋಗ ಸಾಧನೆಯ ಹಾದಿಯ ದೊಡ್ಡ ಶಕ್ತಿ ಎಂದು ವರ್ಣಿಸಿದ್ದರು. ಇವರ ಆಶ್ರಮದಲ್ಲಿ ಹಠಯೋಗ, ವಿನ್ಯಾಸಯೋಗ, ಅಷ್ಟಾಂಗ ಯೋಗ ವಿದ್ಯೆಯನ್ನ ಸಾವಿರಾರು ಜನರಿಗೆ ಧಾರೆ ಎರೆಯಲಾಗಿದೆ. ಯೋಗ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಗುರುತಿಸಿ ಕರ್ಮಯೋಗಿ ಅಗಸ್ ಇಂದ್ರ ಉದಯನ್ ಅವರಿಗೆ, ಯೋಗರತ್ನ ಪ್ರಶಸ್ತಿ 2023 ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿದವರು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು. ಪ್ರಶಸ್ತಿ ವಿಜೇತರಿಗೆ ಸನ್ಮಾನ ನೀಡಿದವರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಕೆ ಗೋವಿಂದರಾಜ್ ಅವರು.