S news 24 kannada

  • Home
  • S news 24 kannada

S news 24 kannada ಸಮಾನತೆಯ ಬೆಳಕು

ತಾಯಿ ಹುಲಿ ಊರಮ್ಮನ ದರ್ಶನ
28/12/2024

ತಾಯಿ ಹುಲಿ ಊರಮ್ಮನ ದರ್ಶನ

14/08/2024

78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹುಳಿಮಾವಿನಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣ ಶಿಬಿರ

78ನೇ ಸ್ವತಂತ್ರ ದಿನಾಚರಣೆಯ ಅಂಗವಾಗಿ ಹುಳಿಮಾವಿನ bjp ಮುಖಂಡರು ನಿಖಿಲ್ ಗೌಡ ಈ ಬಿ ಟಿ ಗ್ರೂಪ್ಸ್ ಮಾಲೀಕರು ಮತ್ತು ಶ್ರೀ ಮತಿ ಅರ್ಪಿತಾ ನಿಖಿಲ್ ಗೌಡ ಇವರ ನೇತೃತ್ವದಲ್ಲಿ NGS ತಂಡದ ವತಿಯಿಂದ ಉಚಿತ ಅರೋಗ್ಯ ತಪಾಸಣೆ ನೆಡೆಸಲಾಯಿತು ಈ ಒಂದು ಚಿಕಿತ್ಸೆ ಯನ್ನು ನಮ್ಮ ಬಿ ಬಿ ಎಂ ಪಿ ಪೌರಾ ಕಾರ್ಮಿಕರು ಮತ್ತು ಹುಳಿಮಾವು ಸರ್ಕಾರಿ ಮತ್ತು ಖಾಸಗಿ ಶಾಲಾಮಕ್ಕಳು ಹಾಗೂ ಗ್ರಾಮಸ್ಥರು ಸದುಪಯೋಗ ಪಡೆದು ಕೊಂಡರು ಈ ಒಂದು ಕಾರ್ಯಕ್ರಮಕ್ಕೆ ಪ್ರೋತ್ಸಹಿಸಿದ ಬೊಮ್ಮನಹಳ್ಳಿ ಜನಪ್ರಿಯ ಶಾಸಕರು ಶ್ರೀಎಂ ಸತೀಶ್ ರೆಡ್ಡಿ ರವರು , ಮಾಜಿ ಬಿ ಬಿ ಎಂ ಪಿ ನಗರ ಸಭಾ ಸದಸ್ಯರು ಶ್ರೀ ಪುರುಷೋತ್ತಮ್ ರವಿ ಅಣ್ಣಾ ರವರು ಮತ್ತು ಶ್ರೀ ಮಾಜಿ ಬಿ ಬಿ ಎಂ ಪಿ ನಗರ ಸಭಾ ಸದಸ್ಯರು ಮುರಳಿ ರವರು, ಮಾಜಿ ಬಿ ಬಿ ಎಂ ಪಿ ಸದಸ್ಯರು ಶ್ರೀ ಮತಿ ಭಾಗ್ಯಲಕ್ಷ್ಮಿ ಮುರಳಿ ರವರು ಮತ್ತು DSS ಸಂಘದ ಶ್ರೀ ಆನಂದ್ ರವರಿಗೆ NGS ತಂಡದವರಿಂದ ಹುತ್ಪೂರ್ವಕ ವಂದನೆಗಳನ್ನು ತಿಳಿಸಿದರು

29/07/2024

ಮಹೇಂದ್ರ ಹಾಗೂ ಸಂಗಡಿಗರಿಗೆ ಸೋತು ಶರಣಾದ ಬನ್ನೇರುಘಟ್ಟ ಅರಣ್ಯದ ಮಕ್ನ ಆನೆ

29/07/2024

ಇಂದು ಬನ್ನೇರುಘಟ್ಟ ಅರಣ್ಯವ್ಯಾಪ್ತಿಯಲ್ಲಿ ನಡೆದ ಕಾಡನೆ ಸೆರೆ ಕಾರ್ಯಾಚರಣೆ ಯಶಸ್ವಿ

ಬನ್ನೇರುಘಟ್ಟ ಅರಣ್ಯಾ ವ್ಯಾಪ್ತಿಯಲ್ಲಿ ಮಕ್ನ ಎಂಬ ಕಾಡಾನೆಯನ್ನು ಹಿಡುಯುವುದರಲ್ಲಿ ಯಶಸ್ವಿಯಾದ ಅರಣ್ಯಾಧಿಕರಿಗಳು ಹಾಗು ಮಹೇಂದ್ರ ಆನೆ ತಂಡ

13/07/2024

ಬನ್ನೇರುಘಟ್ಟ ಜಿಗಣಿ ಮುಖ್ಯ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದ ಸಿಸಿಟಿವಿ ದೃಶ್ಯಾವಳಿ

03/07/2024

ಅಂಜನಾಪುರ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ

ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ತಲಘಟ್ಟಪುರ ಸಮೀಪದ ಅಂಜನಾಪುರದ ಯುವತಿ ಅಂಜನಾ(20) ಮತ್ತು ಕೋಣನಕುಂಟೆ ನಿವಾಸಿ ಯುವಕ ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳು. ಜುಲೈ 1 ರಂದು ನಾಪತ್ತೆಯಾಗಿದ್ದ ಪ್ರೇಮಿಗಳು ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ವಿದ್ಯಾರ್ಥಿನಿ ಪೋಷಕರಿಂದ ಇವರ ಪ್ರೀತಿಗೆ ವಿರೋಧವಿತ್ತು ಎನ್ನಲಾಗಿದ್ದು ಡಿಸಿಪಿ ಲೊಕೇಶ್ ಪ್ರತಿಕ್ರಿಯೆ ನೀಡಿದ್ದಾರೆ

30/06/2024

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ KSRTC

ಚಾಲಕನ ನಿಯಂತ್ರಣ ತಪ್ಪಿ KSRTC ಬಸ್‌ವೊಂದು ಹಳ್ಳಕ್ಕೆ ಬಿದ್ದ ಘಟನೆ ಮಂಡ್ಯದ ತೂಬಿನಕೆರೆ ಗ್ರಾಮದ ಬಳಿ ನಡೆದಿದೆ. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಬಸ್ ಅಪಘಾತ ಕಂಡು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರನ್ನ ರಕ್ಷಣೆ ಮಾಡಿದ್ದಾರೆ. ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

28/06/2024

ಬನ್ನೇರುಘಟ್ಟ ವೃತ್ತದಲ್ಲಿ ವಿಜೃಂಭಣೆಯಿಂದ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತೋತ್ಸವ.

ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ಒಕ್ಕಲಿಗರ ಸೇವಾ ಅಭಿವೃದ್ಧಿ ಸಂಘದ ವತಿಯಿಂದ ಬೆಂಗಳೂರು ನಿರ್ಮಾತೃ ಕೆಂಪೇಗೌಡರ 515ನೇ ಜಯಂತೋತ್ಸವವನ್ನು ಇಂದು ಬನ್ನೇರುಘಟ್ಟ ವೃತ್ತದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ನಡೆಸುವ ಮೂಲಕ ಆಚರಿಸಲಾಯಿತು ಸಮಯದಲ್ಲಿ ಆಯುಷ್ಮಾನ್ ಕಾರ್ಡ್ ಹಾಗೂ ಸೀನಿಯರ್ ಕಾರ್ಡ್ ವಿತರಣೆ ಮತ್ತು ಬಸ್ ಪಾಸ್ ಗಾಗಿ ಉಚಿತ ಆನ್ಲೈನ್ ಅರ್ಜಿ ಸಲ್ಲಿಸುವ ಕಾರ್ಯಕ್ರಮವನ್ನು ಹಾಗೂ ಈ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಆನೇಕಲ್ ತಾಲ್ಲೂಕು ಅಧ್ಯಕ್ಷರಾದ ಜೆ.ಮಂಜುನಾಥ್, ಸಂಸ್ಥಾಪಕ ಅಧ್ಯಕ್ಷ ಎ,ಕೇಶವಮೂರ್ತಿ ಪದಾಧಿಕಾರಿಗಳು ಹಾಗೂ ಬನ್ನೇರುಘಟ್ಟ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು

28/06/2024

ಭೀಕರ ರಸ್ತೆ ಅಪಘಾತ: 13 ಜನರು ಸಾವು

ಹಾವೇರಿ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 13 ಜನರು ಮೃತಪಟ್ಟಿದ್ದಾರೆ. ಹೈವೇ ಬದಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರಲ್ಲಿ 7 ಜನ ಮಹಿಳೆಯರು ಸೇರಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

Address


Alerts

Be the first to know and let us send you an email when S news 24 kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to S news 24 kannada:

  • Want your business to be the top-listed Media Company?

Share