29/01/2023
ಸರ್ಕಾರಿ ಕಾರ್ಯಕ್ರಮದಲ್ಲಿ ಹುಟ್ಟುಹಬ್ಬ , ಶಾಸಕ ಸಂಗಮೇಶ್ವರ್ ಭಾಗಿಯಾಗಿ ಜನ್ಮದಿನದ ಹಿನ್ನೆಲೆ ನೃತ್ಯ
ಗಣರಾಜ್ಯೋತ್ಸವ ಎಂದರೆ ಸರ್ಕಾರಿ ಕಾರ್ಯಕ್ರ, ಇದರಿಂದ ಜನಪ್ರತಿನಿಧಿಗಳು ಭಾಗವಹಿಸಿ ಧ್ವಜಾರೋಹಣ ಮಾಡುವುದು ಎಲ್ಲಾ ಸಮಾನ್ಯ. ಆದರೆ ಭದ್ರಾವತಿಯಲ್ಲಿ ಮಾತ್ರ ಕಾಂಗ್ರೆಸ್ ನಗರಸಭೆ ಸದಸ್ಯೆಯೊಬ್ಬರು ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ. ಹೌದು, ಸರ್ಕಾರಿ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸರ್ಕಾರಿ ಕಾರ್ಯಕ್ರಮನ ಅಥವಾ ಕಾಂಗ್ರೆಸ್ ಖಾಸಗಿ ಕಾರ್ಯಕ್ರಮನ? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ, ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಹಾಡು ಹಾಡಿ, ಕುಡಿದಿದ್ದು, ಅಲ್ಲಿನ ಶಾಸಕ ಸಂಗಮೇಶ್ವರ್ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಜನ್ಮದಿನದ ಹಿನ್ನೆಲೆ ನೃತ್ಯ ಮಾಡಿದ್ದಾರೆ. ಜನರ ದುಡ್ಡಲ್ಲಿ ಕಾರ್ಯಕ್ರಮ ಮಾಡಿ, ಈ ಕೆಲಸ ಮಾಡಿದ್ದು ಎಷ್ಟು ಸರಿ ಎಂದು ಜನ ಇದೀಗ ಆಕ್ರೋಶ ವ್ಯಕ್ತಪಡಿಸಿದ್ದು, ತಹಶೀಲ್ದಾರ್ ಉತ್ತರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.