ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ - Kannada University, Hampi

  • Home
  • India
  • Ballari
  • ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ - Kannada University, Hampi

ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ  - Kannada University, Hampi PUBLICATION WING

ಕನ್ನಡ ವಿಶ್ವವಿದ್ಯಾಲಯ, ಹಂಪಿರಾಮಮನೋಹರ ಲೋಹಿಯಾ ಅಧ್ಯಯನ ಪೀಠ ಮತ್ತು ಪ್ರಸಾರಾಂಗದ ಸಹಯೋಗದಲ್ಲಿಕರಡು ತಿದ್ದುಪಡಿ ಮತ್ತು ಪುಟವಿನ್ಯಾಸ ಕಾರ್ಯಾಗಾರ...
31/05/2024

ಕನ್ನಡ ವಿಶ್ವವಿದ್ಯಾಲಯ, ಹಂಪಿ
ರಾಮಮನೋಹರ ಲೋಹಿಯಾ ಅಧ್ಯಯನ ಪೀಠ
ಮತ್ತು ಪ್ರಸಾರಾಂಗದ ಸಹಯೋಗದಲ್ಲಿ
ಕರಡು ತಿದ್ದುಪಡಿ ಮತ್ತು ಪುಟವಿನ್ಯಾಸ ಕಾರ್ಯಾಗಾರ
೨೦ ರಿಂದ ೨೪ ಮೇ ೨೦೨೪ರ ಐದು ದಿನಗಳವರೆಗೆ
ಕಾರ್ಯಾಗಾರದ ಪತ್ರಿಕಾ ಪ್ರಕಟಣೆ-೨೦.೫.೨೦೨೪

ಸಂಶೋಧನೆಯಲ್ಲಿ ಕರಡುತಿದ್ದುಪಡಿಯೂ ಪ್ರಮುಖ ಘಟ್ಟ : ಡಾ.ಡಿ.ವಿ.ಪರಮಶಿವಮೂರ್ತಿ

ಸಂಶೋಧನೆಯ ವಿದ್ವತ್ ಲೋಕದಲ್ಲಿ ಹೊಸ ವಿಷಯಗಳ ಚಿಂತನೆಯಷ್ಟೇ, ಬರವಣಿಗೆ ಮತ್ತು ಅದರ ಪರಿಷ್ಕರಣೆಯೂ ತುಂಬಾ ಮುಖ್ಯವಾಗಿದ್ದು, ಸಂಶೋಧನೆಯಲ್ಲಿ ಕರಡುತಿದ್ದುಪಡಿಯೂ ಪ್ರಮುಖವಾದ ಘಟ್ಟವಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ದಿನಾಂಕ ೨೦.೫.೨೦೨೪ರಂದು ರಾಮಮನೋಹರ ಲೋಹಿಯಾ ಅಧ್ಯಯನ ಪೀಠ ಮತ್ತು ಪ್ರಸಾರಾಂಗದ ಸಹಯೋಗದಲ್ಲಿ ಆಯೋಜಿಸಿದ್ದ ಐದು ದಿನಗಳ(೨೦ ರಿಂದ ೨೪ ಮೇ ೨೦೨೪ರವರೆಗೆ)ವರೆಗೆ ಕರಡು ತಿದ್ದುಪಡಿ ಮತ್ತು ಪುಟವಿನ್ಯಾಸ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಶೋಧನಾ ಬರವಣಿಗೆಯಲ್ಲಿ ವ್ಯಾಕರಣ ದೋಷಗಳಾಗದಾಗ, ವಿಷಯದ ಅರ್ಥವ್ಯತ್ಯಾಸವಾಗುವುದು. ಇದರಿಂದ ಪರಿಣಾಮಕಾರಿ ಸಂವಹನ ಸಾಧ್ಯವಾಗುವುದಿಲ್ಲ. ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದಾಗ ಹೆಚ್ಚಿನ ಮೌಲ್ಯಮಾಪಕರು ಈ ಮಹಾಪ್ರಬಂಧದಲ್ಲಿ ಅಕ್ಷರ ದೋಷಗಳಿವೆ ಎಂದು ವರದಿ ಬರೆಯುತ್ತಾರೆ. ಇತರೆ ವಿಶ್ವವಿದ್ಯಾಲಯಗಳ ಸಂಶೋಧನಾ ಪ್ರಬಂಧಗಳಲ್ಲಿ ತಪ್ಪುಗಳಾದರೆ ಹೋಗಲಿ ಎಂದು ಹೇಳಬಹುದು. ಕನ್ನಡ ಭಾಷೆ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಕನ್ನಡ ವಿಶ್ವವಿದ್ಯಾಲಯದ ಸಂಶೋಧನೆಗಳಲ್ಲಿ ಅಕ್ಷರ ದೋಷಗಳು, ವಾಕ್ಯದೋಷಗಳಾದರೆ ಅದರಿಂದ ವಿಶ್ವವಿದ್ಯಾಲಯದ ಘನತೆಗೆ ಚ್ಯುತಿ ಬರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಸಂಶೋಧನಾರ್ಥಿಗಳು ತಮ್ಮ ಮಹಾಪ್ರಬಂಧವನ್ನು ತಾವೇ ಕರಡು ತಿದ್ದುಪಡಿ ಮಾಡಿ, ಪುಟವಿನ್ಯಾಸ ಮಾಡಲು ಈ ಕಾರ್ಯಾಗಾರವು ಸಹಕಾರಿಯಾಗಲಿದೆ. ಇದರ ಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದು ಕಿವಿಮಾತು ಹೇಳಿದರು.
ಪ್ರಸಾರಾಂಗದ ನಿರ್ದೇಶಕರಾದ ಡಾ.ಮಾಧವ ಪೆರಾಜೆ ಅವರು ಮಾತನಾಡುತ್ತ ಸಂಶೋಧನಾರ್ಥಿಗಳು ತಮ್ಮ ಸಂಶೋಧನೆಯ ಮಹಾಪ್ರಬಂಧವನ್ನು ಕರಡು ತಿದ್ದುಪಡಿ ಮಾಡಲು ಇತರರಿಗೆ ಹಣಕೊಟ್ಟು ಮಾಡಿಸುವುದರ ಬದಲು ತಾವೇ ಮಾಡುವುದು ಒಳ್ಳೆಯದು. ಇದರಿಂದ ಸಂಶೋಧನ ಪ್ರಬಂಧಗಳ ಗುಣಮಟ್ಟವನ್ನು ಕಾಪಾಡಬಹುದು ಎಂದು ತಿಳಿಸಿದರು.
ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಸಂಚಾಲಕರಾದ ಡಾ.ಯರ್ರಿಸ್ವಾಮಿ ಅವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿ ಮೋಹನ್‌ಕುಮಾರ್ ನಿರೂಪಿಸಿದರು. ವಿರುಪಾಕ್ಷ ಕೆ. ವಂದಿಸಿದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

03/01/2024

ಪ್ರಸಾರಾಂಗದ ಪ್ರಕಟಣೆಗಳು
https://kannadauniversity.org/english/wp-content/uploads/2024/01/Catloge-2023%20-%20Available.pdf

ಪ್ರಸಾರಾಂಗದಲ್ಲಿ ಲಭ್ಯವಿರುವ ಪುಸ್ತಗಳ ವಿವರ
https://kannadauniversity.org/english/wp-content/uploads/2024/01/Catloge-2023%20-%20Available.pdf

03/01/2024

ಡಾ. ಶೈಲಜ ಇಂ. ಹಿರೇಮಠ
ನಿರ್ದೇಶಕರು, ಪ್ರಸಾರಾಂಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ ೫೮೩ ೨೭೬
𝐄𝐦𝐚𝐢𝐥: 𝐝𝐢𝐫𝐞𝐜𝐭𝐨𝐫.𝐩𝐫𝐚𝐬𝐚𝐫𝐚𝐧𝐠𝐚𝐤𝐮𝐡@𝐠𝐦𝐚𝐢𝐥.𝐜𝐨𝐦

ಕರ್ನಾಟಕದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿನ ಬೋಧನಾಂಗ ಮತ್ತು ಸಂಶೋಧನಾಂಗಗಳು ಪಾಶ್ಚಿಮಾತ್ಯ ಶೈಕ್ಷಣಿಕ ಮಾದರಿ ಯನ್ನು ಉಳಿಸಿಕೊಂಡಿವೆ; ಬೆಳೆಸಿಕೊಂಡಿವೆ ಹಾಗೂ ಮುಂದುವರೆಸಿವೆ. ಅಚ್ಚಗನ್ನಡ ಪರಿಕಲ್ಪನೆಯಾದ ಪ್ರಸಾರಾಂಗವು ಕುವೆಂಪು ಅವರ ದಿವ್ಯದರ್ಶನದಲ್ಲಿ ನಿಷ್ಪನ್ನಗೊಂಡು ಕನ್ನಡ ಸೊಗಡಿನಿಂದ ಅರಳಿದ ಜ್ಞಾನ ಸಂಸ್ಥೆಯಾಗಿದೆ. ಇಂತಹ ಜ್ಞಾನ ಸಂಸ್ಥೆಯು ಕನ್ನಡ ವಿಶ್ವವಿದ್ಯಾಲಯದಲ್ಲಿ ೧೯೯೨ರಲ್ಲಿ ಡಾ. ಚಂದ್ರಶೇಖರ ಕಂಬಾರ ಅವರ ದೂರದೃಷ್ಟಿ ಮತ್ತು ದಿವ್ಯಕಲ್ಪನೆಯಲ್ಲಿ ಪುನರುಜ್ಜೀವನ ಗೊಂಡಿತು. ಕನ್ನಡ ಜ್ಞಾನ ಪರಂಪರೆಯನ್ನು ಕಟ್ಟುವ ಹಾಗೂ ಅದನ್ನು ವಿಶ್ವಜ್ಞಾನವಾಗಿಸುವ ಮತ್ತು ವಿಶ್ವಜ್ಞಾನವನ್ನು ಕನ್ನಡ ಜ್ಞಾನವಾಗಿ ಪರಿವರ್ತಿಸುವ ಹಾಗೂ ಕನ್ನಡಿಗರೆಲ್ಲರಿಗೂ ದೊರೆಯುವಂತೆ ಮಾಡುವ ಮೂಲಭೂತ ಆಶಯದೊಂದಿಗೆ ನಮ್ಮ ಪ್ರಸಾರಾಂಗವು ಕಳೆದ ಮೂವತ್ತು ವರ್ಷಗಳಿಂದ ಅರ್ಥಪೂರ್ಣ ಪ್ರಕಟಣೆಗಳೊಂದಿಗೆ ಕಾರ್ಯನಿರ್ವಹಿಸುತ್ತ ಬಂದಿದೆ.

ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ, ಸಮಾಜ ವಿಜ್ಞಾನ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ವಿದ್ಯುನ್ಮಾನ ಮಾಧ್ಯಮಗಳು, ಇಂಟರ್ನೆಟ್, ವೆಬ್ಸೈಟ್, ಆಡಿಯೋ, ವಿಡಿಯೋ ಮೊದಲಾದ ತತ್ವಶಾಸ್ತ್ರ, ಮಾನವಿಕ ಹಾಗೂ ವೈಜ್ಞಾನಿಕದಂಥ ವಿಷಯಗಳ ಕ್ಷೇತ್ರದಲ್ಲಿಯೂ ಕನ್ನಡದಲ್ಲಿಯೇ ಆಲೋಚಿಸುವ, ಅಭಿವ್ಯಕ್ತಿಸುವ ಹಾಗೂ ಕನ್ನಡದ ಅನನ್ಯತೆಯನ್ನು ರೂಪಿಸುವ ಎಲ್ಲಾ ಸಾಧ್ಯತೆಗಳನ್ನು, ಸವಾಲುಗಳನ್ನು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಸ್ವೀಕರಿಸುತ್ತ ಯಶಸ್ವಿಯಾಗಿ ನಿರ್ವಹಿಸುತ್ತ ಬಂದಿದೆ.

ಎಲ್ಲ ಶೈಕ್ಷಣಿಕ ವಲಯದಲ್ಲಿರುವ ಅಧ್ಯಯನಾಸಕ್ತರಿಗೆ ಹಾಗೂ ಅನೇಕ ಕಾರಣಗಳಿಂದ ವಿಶ್ವವಿದ್ಯಾಲಯಕ್ಕೆ ಹೋಗಲು ಸಾಧ್ಯ ವಾಗದೇ ಇರುವ ಜ್ಞಾನಾಸಕ್ತರಿಗೆ ಹೀಗೆ ಎಲ್ಲ ಕನ್ನಡ ಓದುಗರ ಅಗತ್ಯಗಳನ್ನು, ಆದ್ಯತೆಗಳನ್ನು ಪೂರೈಸುತ್ತಿರುವ ಕನ್ನಡ ವಿಶ್ವ ವಿದ್ಯಾಲಯದ ಪ್ರಸಾರಾಂಗವು ಮತ್ತಷುö್ಟ ಸಶಕ್ತವಾಗಿ ಬೆಳೆಯ ಬೇಕಿದೆ. ವಿಶ್ವದ ಕನ್ನಡಿಗರೆಲ್ಲರೂ ನಮ್ಮ ಪ್ರಕಟಣೆಗಳನ್ನು ಖರೀದಿಸಿ ಓದುತ್ತ ಕನ್ನಡ ನಾಡು-ನುಡಿಗಳನ್ನು ಕಟ್ಟುವ ಕಾಯಕದಲ್ಲಿ ಪಾಲ್ಗೊಳ್ಳಬೇಕೆಂದು ವಿನಮ್ರ ಮನವಿ.

ಪುಸ್ತಕಗಳು ದೊರೆಯುವ ಸ್ಥಳ
ಮಾರಾಟ ವಿಭಾಗ, ಪ್ರಸಾರಾಂಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ ೫೮೩ ೨೭೬
ಹೊಸಪೇಟೆ ತಾಲ್ಲೂಕು, ವಿಜಯನಗರ ಜಿಲ್ಲೆ
𝐖𝐞𝐛𝐬𝐢𝐭𝐞: 𝐰𝐰𝐰.𝐤𝐚𝐧𝐧𝐚𝐝𝐚𝐮𝐧𝐢𝐯𝐞𝐫𝐬𝐢𝐭𝐲.𝐨𝐫𝐠
𝐌𝐨𝐛𝐢𝐥: 𝟗𝟒𝟖𝟎𝟏 𝟖𝟗𝟖𝟔𝟎

ಪ್ರಸಾರಾಂಗ ಪುಸ್ತಕ ಮಾರಾಟ ಮಳಿಗೆ
ಕನ್ನಡ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ
ಅರಮನೆ ರಸ್ತೆ. ನಂ. ೧., ಮೈಸೂರು ಬ್ಯಾಂಕ್ ವೃತ್ತ
ಬೆಂಗಳೂರು - ೫೬೦ ೦೦೯
ಮೊಬೈಲ್ : ೦೮೦-೨೨೩೭೨೩೮೮

ಮಾರಾಟದ ನಿಯಮಗಳು

೧. ಒಮ್ಮೆ ಖರೀದಿಸಿದ ಪುಸ್ತಕಗಳನ್ನು ಯಾವುದೇ ಕಾರಣಕ್ಕಾಗಿ ಹಿಂದಕ್ಕೆ ಪಡೆಯುವುದಿಲ್ಲೊ ಅಥವಾ ಬದಲಾಯಿಸುವುದಿಲ್ಲ (ಇದು ಹಾಳಾಗಿರುವ ಪುಸ್ತಕಗಳಿಗೆ ಅನ್ವಯಿಸುವುದಿಲ್ಲ). ಅನಿವಾರ್ಯ ಸಂದರ್ಭಗಳಲ್ಲಿ ನಿರ್ದೇಶಕರು ಲಿಖಿತ ಅನುಮತಿಯನ್ನು ನೀಡಿದಾಗ ಮಾತ್ರ ಅದೇ ಹೆಸರಿನ ಪುಸ್ತಕಗಳನ್ನು ಬದಲಾಯಿಸಿಕೊಳ್ಳಬಹುದು.
೨. ಪುಸ್ತಕ ವ್ಯಾಪಾರಿಗಳು/ ಓದುಗರು ಡಿ.ಡಿ.ಯನ್ನು ಹಣಕಾಸು ಅಧಿಕಾರಿಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರ ಹೆಸರಿಗೆ ಸಂದಾಯವಾಗುವಂತೆ ಮತ್ತು ಹೊಸಪೇಟೆ ನಗರದ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನ ಶಾಖೆ(ಡ್ರಾಯೀ ಬ್ರಾಂಚ್ ಹೊಸಪೇಟೆ)ಯಲ್ಲಿ ಪಾವತಿಯಾಗುವಂತೆ ಸಿದ್ಧಪಡಿಸಬೇಕು. ಹೀಗೆ ಸಿದ್ಧಪಡಿಸಿದ ಡಿ.ಡಿ.ಯನ್ನು ನಿರ್ದೇಶಕರು, ಪçಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ ೫೮೩ ೨೭೬, ಹೊಸಪೇಟೆ ತಾಲೂಕು, ವಿಜಯನಗರ ಜಿಲ್ಲೆ ಇವರಿಗೆ ಕಳುಹಿಸಿ ಪುಸ್ತಕಗಳನ್ನು/ ನಿಯತಕಾಲಿಕೆಗಳನ್ನು ಪಡೆಯಬಹುದು.
೩. ಪುಸ್ತಕಗಳನ್ನು ತರಿಸಿಕೊಳ್ಳುವಾಗ ಅದರ ಸಾರಿಗೆಯ ವೆಚ್ಚವನ್ನು ಗ್ರಾಹಕರೇ ಭರಿಸುವುದು.
೪. ಸ್ಥಳೀಯವಾಗಿ ಆಗಲಿ, ವಿದೇಶಗಳಿಗೂ ಆಗಲಿ, ಗ್ರಾಹಕರು ಪುಸ್ತಕ ಗಳನ್ನು ಅಂಚೆಯ ಮೂಲಕ ಬಯಸಿದರೆ, ಪುಸ್ತಕ ಖರೀದಿಸು ವಾಗಲೇ ಅಂಚೆ ವೆಚ್ಚವನ್ನು ಭರಿಸಬೇಕು ಅಥವಾ ಅಂಚೆ ವೆಚ್ಚವನ್ನು ಅವರಿಗೆ ನೀಡುವ ರಿಯಾಯಿತಿ ದರದಲ್ಲಿ ಮುರಿದುಕೊಳ್ಳ ಲಾಗುವುದು.
೫. ಒಮ್ಮೆ ಪುಸ್ತಕಗಳನ್ನು ಖರೀದಿಸಿದ ಮೇಲೆ ಉಂಟಾಗುವ ಯಾವುದೇ ರೀತಿಯ ಕಷ್ಟ-ನಷ್ಟಗಳಿಗೆ ಕನ್ನಡ ವಿಶ್ವವಿದ್ಯಾಲಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಿಲ್ಲ.
೬. ಅಧಿಕೃತ ಪುಸ್ತಕ ವ್ಯಾಪಾರಿಗಳು ಪುಸ್ತಕಗಳನ್ನುಪಡೆಯಬೇಕಾದರೆ ನಿರ್ದೇಶಕರಿಗೆ ಕೋರಿಕೆಯ ಪತ್ರವನ್ನು ಸಲ್ಲಿಸಬೇಕು.
೭. ಅಧಿಕೃತ ಪುಸ್ತಕ ವ್ಯಾಪಾರಿಗಳಿಗೆ ಶೇ. ೩೫ ರಿಯಾಯಿತಿ ನೀಡ ಲಾಗುವುದು.
೮. ಸಂಘ-ಸಂಸ್ಥೆ, ಶಾಲಾ ಕಾಲೇಜುಗಳಿಗೆ ಶೇ. ೧೫ ರಿಯಾಯಿತಿ ನೀಡ ಲಾಗುವುದು.
೯. ಓದುಗರಿಗೆ ಶೇ. ೨೫ ರಿಯಾಯಿತಿ ನೀಡಲಾಗುವುದು.
೧೦. ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ, ಸಂಘ-ಸಂಸ್ಥೆ, ಶಾಲಾ-ಕಾಲೇಜುಗಳಿಗೆ ಶೇ. ೩೦ ರಿಯಾಯಿತಿ ನೀಡಲಾಗುವುದು.
೧೧. ಪುಠ್ಯಪುಸ್ತಕಗಳನ್ನು ಪುಸ್ತಕ ವ್ಯಾಪಾರಿಗಳಿಗೆ ಶೇ.೩೦ ರಿಯಾಯಿತಿ ನೀಡಲಾಗುವುದು.
೧೨. ವ್ಯವಹಾರಕ್ಕೆ ಸಂಬಂಧ ಪಟ್ಟ ಎಲ್ಲಾ ವಿಷಯಗಳು ವಿಜಯನಗರ ಜಿಲ್ಲೆಯ ನ್ಯಾಯಾಲಯದ, ಟ್ರಿಬುನಲ್ನ ವ್ಯಾಪ್ತಿಯಲ್ಲಿ ಬರುತ್ತವೆ.

Address

Kannada University, Hampi, Vidyaranya, Hosapet Tq. , Vijayanagara Dist
Ballari
583276

Alerts

Be the first to know and let us send you an email when ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ - Kannada University, Hampi posts news and promotions. Your email address will not be used for any other purpose, and you can unsubscribe at any time.

Contact The Business

Send a message to ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ - Kannada University, Hampi:

Share

Category